Karnataka news paper

ಹಾಸನ: ಶಿರಾಡಿ ಮಾರ್ಗ ಸಂಚಾರ ನಿರ್ಬಂಧ ನಿರ್ಧಾರ, ತೀವ್ರ ವಿರೋಧ


ಹಾಸನ: ಹಾಸನ ಮತ್ತು ದಕ್ಷಿಣ ನಡುವಿನ ಪ್ರಮುಖ ಮಾರ್ಗ ಶಿರಾಡಿ ಘಾಟ್‌ನಲ್ಲಿ ಸಂಚಾರ ನಿರ್ಬಂಧಗೊಳಿಸಲು ನಿರ್ಧರಿಸಲಾಗಿದೆ. ಕಾಮಗಾರಿ ನಡೆಸುವ ಉದ್ದೇಶದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ.

ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು, ಸಂಸದರು, ಶಾಸಕರು, ಅಧಿಕಾರಿಗಳನ್ನು ಒಳಗೊಂಡ ತಂಡ ಜ. 20 ರಂದು ಸಕಲೇಶಪುರ ತಾಲೂಕು ದೋಣಿಗಾಲ್‌ನಿಂದ ಮಾರನಹಳ್ಳಿವರೆಗಿನ ಶಿರಾಡಿ ಮಾರ್ಗದ ರಸ್ತೆ ವೀಕ್ಷಣೆ ಬಳಿಕ ಕಾಮಗಾರಿಗಾಗಿ ಸಂಚಾರ ನಿರ್ಬಂಧಿಸುವ ಕುರಿತು ತೀರ್ಮಾನ ಕೈಗೊಳ್ಳಲು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ವಿಡಿಯೋ ಸಂವಾದದಲ್ಲಿ ಸಂಸದರು, ಶಾಸಕರು, ಅಧಿಕಾರಿಗಳು, ಗುತ್ತಿಗೆ ಕಂಪನಿ ಮುಖ್ಯಸ್ಥರ ಸಭೆಯಲ್ಲಿ ಈ ಕುರಿತು ನಿರ್ಧರಿಸಲಾಯಿತು.

ಕಾಮಗಾರಿಗಾಗಿ 6 ತಿಂಗಳು ಸಂಚಾರ ಸ್ಥಗಿತ ಚಿಂತನೆ; ಶಿರಾಡಿ ಬಂದ್‌ಗೆ ತೀವ್ರ ವಿರೋಧ!

”2016ರಲ್ಲಿ ಪ್ರಾ ರಂಭವಾದ ಹಾಸನ, ಸಕಲೇಶಪುರ ಚತುಷ್ಪಥ ರಸ್ತೆ ಕಾಮಗಾರಿ ಇಂದಿಗೂ ಶೇ.24ರಷ್ಟು ಮಾತ್ರ ಪ್ರಗತಿ ಕಂಡಿದೆ. ಹೀಗಿರುವಾಗ ದೋಣಿಗಾಲ್‌ನಿಂದ ಮಾರನಹಳ್ಳಿವರೆಗಿನ ಹತ್ತು ಕಿ.ಮೀ. ಕಾಮಗಾರಿಗೆ ಆರು ತಿಂಗಳಲ್ಲ, ಆರು ವರ್ಷವಾದರೂ ಪೂರ್ಣಗೊಳಿಸುವ ವಿಶ್ವಾಸವಿಲ್ಲ” ಎಂದು ಸಕಲೇಶಪುರ-ಆಲೂರು ಕ್ಷೇತ್ರದ ಶಾಸಕ ಎಚ್‌.ಕೆ.ಕುಮಾರಸ್ವಾಮಿ, ಶಿರಾಡಿ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಆರೋಪಗಳ ಸುರಿಮಳೆಗೈದರು.

ಸಂಸದ ಪ್ರಜ್ವಲ್‌ ರೇವಣ್ಣ ಮಾತನಾಡಿ, ”ಹಾಸನ-ಸಕಲೇಶಪುರ ಕಾಮಗಾರಿ ವಿಳಂಬದಿಂದ ಜನತೆ ತಮ್ಮನ್ನು, ಶಾಸಕರನ್ನು ಶಪಿಸುತ್ತಿದ್ದಾರೆ. ಈ ಮಾರ್ಗದಲ್ಲಿಪ್ರತಿನಿತ್ಯ ಓಡಾಡಿದರೆ ಏಳೆಂಟು ತಿಂಗಳಲ್ಲಿಬೆನ್ನುಮೂಳೆ ಮುರಿದುಕೊಳ್ಳಬೇಕಾಗುತ್ತದೆ. ಅಂತಹ ಕೆಟ್ಟ ಸ್ಥಿತಿ ಇದೆ ಎಂದು ಬೇಸರ ವ್ಯಕ್ತಪಡಿಸಿದರು.

”ರಾಜ್ಯದ ಪ್ರಮುಖ ಜಲಮಾರ್ಗ ಬಂದರಿನಿಂದ ಬರುವ ಔಷಧಿ, ಸಾಮಗ್ರಿ ಸರಕುಗಳು ಹಾಸನ ಬೆಂಗಳೂರು ತಲುಪಲು ಇದು ಮುಖ್ಯರಸ್ತೆ. ಮುಂದಿನ ಎರಡು ತಿಂಗಳ ಅವಧಿಯಲ್ಲಿಹಾಸನದಿಂದ ಸಕಲೇಶಪುರದ ವರೆಗಿನ ಒಂದು ಬದಿಯ(ಎರಡು ಲೈನ್‌) ರಸ್ತೆ ಕಾಮಗಾರಿ ಪೂರ್ತಿ ಮುಕ್ತಾಯಗೊಳಿಸಿದರೆ ಮಾತ್ರ ನಂತರದ ಕಾಮಗಾರಿಗೆ ತಾತ್ಕಾಲಿಕವಾಗಿ ವಾಹನ ಸಂಚಾರ ನಿರ್ಬಂಧಿಸುವ ಬಗ್ಗೆ ಪರಿಶೀಲನೆ ನಡೆಸಬಹುದಾಗಿದೆ,” ಎಂದು ತಿಳಿಸಿದರು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಮಾತನಾಡಿ, ”ಚಾರ್ಮುಡಿ, ಸಂಪಾಜೆ, ಬಿಸಿಲೆ ಘಾಟ್‌ಗಳಲ್ಲಿ ದೊಡ್ಡ ವಾಹನಗಳ ಸಂಚಾರ ಸಾಧ್ಯವಿಲ್ಲದ ಕಾರಣ ಬಂದರು ನಗರಿ ಮಂಗಳೂರಿನಿಂದ ರಾಜಧಾನಿ ಬೆಂಗಳೂರಿಗೆ ಸಂಪರ್ಕ ಕಲ್ಪಿಸಲು ಶಿರಾಡಿಘಾಟ್‌ ಉಳಿದಿರುವ ಏಕೈಕ ಮಾರ್ಗವಾಗಿದೆ. ಇದನ್ನು ಸುದೀರ್ಘ ಕಾಲ ಮುಚ್ಚಿದರೆ ಜನಜೀವನ, ಕೈಗಾರಿಕೆ ಆರ್ಥಿಕತೆ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಕಾಮಗಾರಿ ಪ್ರಗತಿ ಕೂಡ ಆಶಾದಾಯಕವಾಗಿಲ್ಲದ ಕಾರಣ ರಸ್ತೆ ಮುಚ್ಚುವ ಬಗ್ಗೆ ಪರಿಶೀಲನೆ ನಡೆಸುವುದು ಅಗತ್ಯ,” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯ ಎಂಜಿನಿಯರ್‌ ಜಾನ್‌ಬಾಜ್‌ ಮಾತನಾಡಿ, ”ಕಾಮಗಾರಿಗೆ ಹೆಚ್ಚಿನ ಕಾರ್ಮಿಕರು ಯಂತ್ರೋಪಕರಣಗಳನ್ನು ಬಳಸಿ ಆದಷ್ಟು ಶೀಘ್ರ ಕಾಮಗಾರಿ ಮುಗಿಸಲಾಗುವುದು. ಕೆಲ ತಿಂಗಳು ಶಿರಾಡಿಘಾಟ್‌ ರಸ್ತೆ ಬಂದ್‌ ಮಾಡಿ ಸುಗಮ ಕಾಮಗಾರಿಗೆ ಅವಕಾಶ ಒದಗಿಸಬೇಕು,” ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಆರ್‌. ಗಿರೀಶ್‌ ಮಾತನಾಡಿ, ”ಈಗಾಗಲೆ ಸಾಕಷ್ಟು ಅವಕಾಶಗಳನ್ನು ನೀಡಲಾಗಿತ್ತು. ಆದರೆ ನಿರೀಕ್ಷಿತ ಪ್ರಗತಿ ಈವರೆಗೂ ಕಾಣಲೇ ಇಲ್ಲ. ಸಕಲೇಶಪುರ ಹಾಸನ ಮಾರ್ಗ ಒಂದು ಬದಿಯಾದರೂ ಮುಕ್ತಾಯಗೊಳಿಸಿ ಮುಂದಿನ ಉದ್ದೇಶಿತ ಕಾಮಗಾರಿಯ ಬಗ್ಗೆ ಪ್ರತಿವಾರ ಪ್ರಗತಿ ಯೋಜನೆ, ಅದಕ್ಕೆ ಬಳಸುವ ಕೆಲಸಗಾರರು, ಯಂತ್ರೋಪಕರಣಗಳು, ಸಾಮಗ್ರಿಗಳ ದಾಸ್ತಾನು ಲಭ್ಯತೆಯ ಯೋಜನಾ ವರದಿ ನಿಖರವಾಗಿ ನೀಡಬೇಕು,” ಎಂದು ಸೂಚಿಸಿದರು.

ಪ್ರಧಾನಿಗೆ ಆಹ್ವಾನ, ತೆನೆ ನಂಟು ಗಟ್ಟಿಗೊಳ್ಳುವುದೇ?; ಹಾಸನದಲ್ಲಿ ಮೆಗಾ ಡೇರಿ ಶಂಕುಸ್ಥಾಪನೆಗೆ ನರೇಂದ್ರ ಮೋದಿ ಆಗಮನ?!

”ಕಾಮಗಾರಿ ತುಂಬಾ ವಿಳಂಬವಾಗಿದೆ. ಕೆಲಸ ಮಾಡಲು ಗುತ್ತಿಗೆದಾರರು ಈಗ ಮುಂದೆ ಬಂದಿದ್ದಾರೆ. ಅದಕ್ಕೆ ನಿರಾಕರಿಸಿದರೆ ಅವಕಾಶ ಮಾಡಿಕೊಡಲಿಲ್ಲಎಂಬ ಆರೋಪವೂ ಬರಬಹುದು. ಎರಡು ಜಿಲ್ಲೆಗಳ ಜನರ ಹಿತಾಸಕ್ತಿ, ರಸ್ತೆ ಕಾಮಗಾರಿ ಪ್ರಗತಿಯ ಅನಿವಾರ್ಯತೆ, ಗುತ್ತಿಗೆದಾರರ ಸಾಮರ್ಥ್ಯ ಎಲ್ಲವನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕಾಗುತ್ತದೆ. ಜ.20ರ ನಂತರ ಈ ಕುರಿತು ತೀರ್ಮಾನ ಮಾಡಬಹುದಾಗಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದೇ ವೇಳೆ ರಸ್ತೆ ಹೋರಾಟ ಸಮಿತಿಯ ಪದಾಧಿಕಾರಿಗಳು ಸಹ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಪಿಡಬ್ಲ್ಯೂಡಿ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.



Read more

[wpas_products keywords=”deal of the day sale today offer all”]