Karnataka news paper

ಅಕ್ಕಿನೇನಿ ಫ್ಯಾಮಿಲಿಯಲ್ಲಿ ಮರುಕಳಿಸಿದ ಸಂಭ್ರಮ; ನಾಗ ಚೈತನ್ಯಗೆ ಖುಷಿಯೋ ಖುಷಿ


ಹೈಲೈಟ್ಸ್‌:

  • ಅಕ್ಟೋಬರ್‌ನಲ್ಲಿ ಸಮಂತಾರಿಂದ ದೂರವಾಗಿದ್ದ ನಾಗ ಚೈತನ್ಯ
  • ಈಗ ಅಕ್ಕಿನೇನಿ ಫ್ಯಾಮಿಲಿಯಲ್ಲಿ ಸಂಭ್ರಮದ ಸಮಯ ಮರುಕಳಿಸಿದೆ
  • ತಂದೆ ನಾಗಾರ್ಜುನ ಜೊತೆ ಸೇರಿ ಬಾಕ್ಸ್ ಆಫೀಸ್‌ ಉಡೀಸ್ ಮಾಡಿದ ಚೈತನ್ಯ

ಅಕ್ಕಿನೇನಿ ನಾಗಾರ್ಜುನ ಫ್ಯಾಮಿಲಿ ಕುಟುಂಬದಿಂದ ಕೆಲ ತಿಂಗಳ ಹಿಂದೆ ಒಂದಷ್ಟು ನೆಗೆಟಿವ್ ನ್ಯೂಸ್‌ಗಳೇ ಕೇಳಿಬಂದಿದ್ದವು. ಅದು ಅವರ ಪುತ್ರ, ನಟ ನಾಗ ಚೈತನ್ಯ ಕುರಿತು. ಹೌದು, ಪ್ರೀತಿಸಿ ಮದುವೆಯಾಗಿದ್ದ ನಟಿ ಸಮಂತಾ ಅವರಿಂದ ನಾಗ ಚೈತನ್ಯ ವಿಚ್ಚೇದನ ಪಡೆದುಕೊಂಡಿದ್ದರು. ಮದುವೆಯಾಗಿ ನಾಲ್ಕೇ ವರ್ಷಕ್ಕೆ ಈ ಜೋಡಿ ಬೇರೆಯಾಯ್ತು. ಇದು ಎಲ್ಲರ ಬೇಸರಕ್ಕೆ ಕಾರಣವಾಗಿತ್ತು. ಆದರೆ, ಈ ಮಧ್ಯೆ ಅಕ್ಕಿನೇನಿ ಫ್ಯಾಮಿಲಿ ಸಂಭ್ರಮಿಸುವಂತಹ ಒಂದು ಸುದ್ದಿ ಹೊರಬಿದ್ದಿದೆ. ಅದೇನೆಂದರೆ, ಸಂಕ್ರಾಂತಿ ಹಬ್ಬದಂದು ತೆರೆಕಂಡಿದ್ದ ‘ಬಂಗಾರ್‌ರಾಜು’ (Bangarraju) ಸಿನಿಮಾವು ಬ್ಲಾಕ್ ಬಸ್ಟರ್ ಹಿಟ್ ಎನಿಸಿಕೊಂಡಿದೆ!

ಸಂಕ್ರಾಂತಿ ವಿನ್ನರ್ ಎನಿಸಿಕೊಂಡ Bangarraju
ಜನವರಿ 14ರಂದು ತೆರೆಕಂಡಿದ್ದ ಈ ಸಿನಿಮಾವು ಮೊದಲ ಮೂರು ದಿನಗಳಿಗೆ ಬರೋಬ್ಬರಿ 53 ಕೋಟಿ ರೂ. ಕಲೆಕ್ಷನ್ ಮಾಡಿದೆ. ಆ ಮೂಲಕ ಈ ಬಾರಿಯ ಸಂಕ್ರಾಂತಿ ವಿನ್ನರ್ ಎನಿಸಿಕೊಂಡಿದೆ. ಅಂದಹಾಗೆ, 2016ರಲ್ಲಿ ತೆರೆಕಂಡ ಕಲ್ಯಾಣ್ ಕೃಷ್ಣ ಕುರಸಾಲಾ ನಿರ್ದೇಶನದ ‘ಸೊಗ್ಗಾಡೆ ಚಿನ್ನಿ ನಾಯನಾ’ ಚಿತ್ರದ ಸೀಕ್ವೆಲ್. ಪಾರ್ಟ್ 1ರಲ್ಲಿ ನಾಗಾರ್ಜುನ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡರೆ, ಈ ಬಾರಿ ತಂದೆ ಜೊತೆಗೆ ಮಗ ನಾಗ ಚೈತನ್ಯ ಕೂಡ ಕಾಣಿಸಿಕೊಂಡಿದ್ದಾರೆ. ಅಪ್ಪ-ಮಗ ಇಬ್ಬರೂ ಸೇರಿ ಬಾಕ್ಸ್ ಆಫೀಸ್‌ನಲ್ಲಿ ಹೊಸ ರೆಕಾರ್ಡ್ ಬರೆದಿದ್ದಾರೆ. ನಾಗ ಚೈತನ್ಯ ಸಖತ್ ಖುಷಿಯಾಗಿದ್ದಾರೆ.

‘ಬಂಗಾರ್‌ರಾಜು’ ಗೆಲ್ಲಲು ಕಾರಣವೇನು?
ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕರೂ, ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಓಪನಿಂಗ್ ಪಡೆದುಕೊಂಡಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ‘ಆರ್‌ಆರ್‌ಆರ್’ ಸಿನಿಮಾವು ಜನವರಿ 7ರಂದು ಮತ್ತು ಪ್ರಭಾಸ್ ನಟನೆಯ ‘ರಾಧೆ ಶ್ಯಾಮ್’ ಸಿನಿಮಾವು ಜನವರಿ 14ರಂದು ತೆರೆಗೆ ಬರಬೇಕಿತ್ತು. ಆದರೆ, ಕೊರೊನಾ ಎಫೆಕ್ಟ್‌ನಿಂದಾಗಿ ಆ ಎರಡೂ ಸಿನಿಮಾಗಳು ಬಿಡುಗಡೆ ಮುಂದೂಡಿದವು. ಆ ಅವಕಾಶವನ್ನು ‘ಬಂಗಾರ್‌ರಾಜು’ ಚಿತ್ರತಂಡ ಸರಿಯಾಗಿ ಸದ್ಬಳಕೆ ಮಾಡಿಕೊಂಡಿದೆ. ಕೊರೊನಾ ಮಾರ್ಗಸೂಚಿಗಳಿಗೂ ಅಂಜದೇ ಸಿನಿಮಾವನ್ನು ರಿಲೀಸ್ ಮಾಡಲು ನಾಗಾರ್ಜುನ ದೃಢ ನಿರ್ಧಾರ ಮಾಡಿದ್ದರು. ಸಂಕ್ರಾಂತಿ ಹಬ್ಬದ ಪ್ರಯುಕ್ತ ತೆರೆಕಂಡ ಸ್ಟಾರ್ ನಟರಿರುವ ಏಕೈಕ ಸಿನಿಮಾ ‘ಬಂಗಾರ್‌ರಾಜು’ ಆಗಿತ್ತು.

1 ಸಾವಿರ ಎಕರೆ ಅರಣ್ಯ ದತ್ತು ಪಡೆದ ನಟ ನಾಗಾರ್ಜುನ; ‘ಬಿಗ್ ಬಾಸ್’ ವೇದಿಕೆ ಮೇಲೆ ಘೋಷಣೆ

ಈ ಸಿನಿಮಾ ಹಿಟ್ ಆಗುತ್ತಿದ್ದಂತೆಯೇ, ಇದರ ಪಾರ್ಟ್ 3 ಕೂಡ ಬರಲಿದೆ ಎಂದು ನಾಗಾರ್ಜುನ ಹೇಳಿದ್ದಾರೆ. ಆದರೆ, ಅದು ಸದ್ಯಕ್ಕಲ್ಲ. ನಾಗಾರ್ಜುನಗೆ ನಾಯಕಿಯಾಗಿ ರಮ್ಯಾಕೃಷ್ಣ ಕಾಣಿಸಿಕೊಂಡರೆ, ನಾಗ ಚೈತನ್ಯಗೆ ಜೋಡಿಯಾಗಿ ‘ಉಪ್ಪೆನ’ ನಟಿ ಕೃತಿ ಶೆಟ್ಟಿ ಬಣ್ಣ ಹಚ್ಚಿದ್ದಾರೆ.

‘ಸಮಂತಾ ಖುಷಿಯಾಗಿದ್ದರೆ, ನಾನು ಖುಷಿಯಾಗಿದ್ದೇನೆ’- ನಟ ನಾಗ ಚೈತನ್ಯ ಹೀಗ್ಯಾಕೆ ಹೇಳಿದ್ರು?



Read more

[wpas_products keywords=”deal of the day party wear dress for women stylish indian”]