Karnataka news paper

ವಾರ್ಷಿಕ ₹10 ಲಕ್ಷ ಆದಾಯ ಇದ್ದರೂ ಸಂಪೂರ್ಣ ತೆರಿಗೆ ಮುಕ್ತ ಹೇಗೆ? ಇಲ್ಲಿದೆ ವಿವರ


ಹೈಲೈಟ್ಸ್‌:

  • ನಿಮ್ಮ ಆದಾಯವು ತೆರಿಗೆ ವ್ಯಾಪ್ತಿಯನ್ನು ಮೀರುತ್ತಿದೆಯೇ?
  • 10 ಲಕ್ಷ ರೂಪಾಯಿವರೆಗೆ ಆದಾಯವಿದ್ದರೂ, ತೆರಿಗೆ ಕಡಿತದ ಪ್ರಯೋಜನ ಪಡೆಯಬಹುದು!
  • ಇದು ಹೇಗೆ ಸಾಧ್ಯ ಎಂಬ ವಿವರ ಇಲ್ಲಿದೆ

ಬೆಂಗಳೂರು: ಸೂಕ್ತ ರೀತಿಯಲ್ಲಿ ತೆರಿಗೆ ಯೋಜನೆ ಮಾಡಿಕೊಂಡರೆ 10 ಲಕ್ಷ ರೂ. ಆದಾಯ ಇದ್ದರೂ, ಆದಾಯ ತೆರಿಗೆಯ ಕಡಿತದ ಪ್ರಯೋಜನ ಪಡೆಯಬಹುದು. ಹಾಗೂ ಸಂಪೂರ್ಣವಾಗಿ ತೆರಿಗೆ ಮುಕ್ತಗೊಳಿಸಬಹುದು. ಇದು ಹೇಗೆ? ಇಲ್ಲಿದೆ ವಿವರ.

ಕೇಂದ್ರ ಬಜೆಟ್‌ ಸಮೀಪಿಸುತ್ತಿರುವುದರಿಂದ ವೇತನದಾರರು ತಮಗೆ ತೆರಿಗೆ ನಿಟ್ಟಿನಲ್ಲಿ ಯಾವ ಪ್ರಯೋಜನ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಇದ್ದಾರೆ. ಆದರೆ ಈಗ ಇರುವ ಆಯ್ಕೆಗಳನ್ನು ಬಳಸಿಯೇ 10 ಲಕ್ಷ ರೂ. ತನಕದ ಆದಾಯವನ್ನು ತೆರಿಗೆ ಮುಕ್ತಗೊಳಿಸಲು ಸಾಧ್ಯವಿದೆ. ಉದಾಹರಣೆಗೆ ಒಬ್ಬ ವ್ಯಕ್ತಿಗೆ ಆತನ ವೇತನದ ಮೂಲಕ 10 ಲಕ್ಷ ರೂ. ಆದಾಯ ಇದೆ. ಹಾಗೂ ಬಡ್ಡಿ ಆದಾಯ 20,000 ರೂ. ಇದೆ ಎಂದು ಇಟ್ಟುಕೊಳ್ಳಿ.

ಆದಾಯ ತೆರಿಗೆ ಉಳಿತಾಯಕ್ಕೆ 10 ಉತ್ತಮ ಮಾರ್ಗಗಳು ಇಲ್ಲಿವೆ! ಈಗಲೇ ತಿಳಿಯಿರಿ!

ಸ್ಟ್ಯಾಂಡರ್ಡ್‌ ಡಿಡಕ್ಷನ್‌ ಆಗಿ 50,000 ರೂ. ಗಳನ್ನು ಕಳೆದಾಗ 9.7 ಲಕ್ಷ ರೂ. ಉಳಿಯುತ್ತದೆ. ಸೆಕ್ಷನ್‌ 80 ಸಿ ಅಡಿಯಲ್ಲಿ ತೆರಿಗೆ ಉಳಿತಾಯ ಹೂಡಿಕೆ ಮೂಲಕ 1.5 ಲಕ್ಷ ರೂ. ತೆರಿಗೆ ಕಡಿತ ಪಡೆಯಬಹುದು. ಎನ್‌ಪಿಎಸ್‌ ಹೂಡಿಕೆಯಿಂದ ಮತ್ತೆ 50,000 ರೂ. ಕಡಿತ ಮಾಡಬಹುದು. ಆಗ ತೆರಿಗೆಗೆ ಅರ್ಹ ಆದಾಯ 7.7 ಲಕ್ಷ ರೂ.ಗೆ ಇಳಿಯುತ್ತದೆ. ಗೃಹ ಸಾಲ ಬಡ್ಡಿ ದರ ಅಥವಾ ಎಚ್‌ಆರ್‌ಎ, ಮೆಡಿಕಲ್‌ ಇನ್ಷೂರೆನ್ಸ್‌, ಹಿರಿಯ ನಾಗರಿಕರ ಮೆಡಿಕಲ್‌ ಇನ್ಷೂರೆನ್ಸ್‌ ಮೂಲಕ ತೆರಿಗೆಗೆ ಅರ್ಹ ಆದಾಯವನ್ನು 5 ಲಕ್ಷ ರೂ.ಗಿಂತ ಕೆಳಕ್ಕೆ ಇಳಿಸಬಹುದು. 5 ಲಕ್ಷ ರೂ. ಮತ್ತು ಅದಕ್ಕಿಂತ ಕಡಿಮೆ ಆದಾಯಕ್ಕೆ ಸೆಕ್ಷನ್‌ 87 ಎ ಅಡಿಯಲ್ಲಿ ರಿಬೇಟ್‌ ಇರುವುದರಿಂದ ಪಾವತಿಸಬೇಕಾದ ತೆರಿಗೆ ಶೂನ್ಯವಾಗಿರುತ್ತದೆ.

ತೆರಿಗೆ ಉಳಿತಾಯದ ವಿಧಾನ

  • ಆದಾಯ: ಮೊತ್ತ (ರೂ.ಗಳಲ್ಲಿ)
  • ವೇತನ ಮೂಲದ ಆದಾಯ: 10,00,000
  • ಬಡ್ಡಿ ಆದಾಯ: 20,000
  • 1. ಒಟ್ಟು ತೆರಿಗೆಗೆ ಅರ್ಹ ಅದಾಯ: 10,20,000

ತೆರಿಗೆ ಉಳಿಸಲು ELSS ಮೂಲಕ ಹೂಡಿಕೆ ಮಾಡುವಿರಾ? ಇದರ ಪ್ರಯೋಜನವೇನು? ಇಲ್ಲಿದೆ ವಿವರ

ಕಡಿತ ಅಥವಾ ಡಿಡಕ್ಷನ್‌ಗಳು

  • ಸ್ಟ್ಯಾಂಡರ್ಡ್‌ ಡಿಡಕ್ಷನ್‌: 50,000
  • ಸೆಕ್ಷನ್‌ 80 ಸಿ ಅಡಿಯಲ್ಲಿ ಹೂಡಿಕೆಗಳು: 1,50,000
  • ಸೆಕ್ಷನ್‌ 80ಸಿಸಿಡಿ(1ಬಿ) ಅಡಿಯಲ್ಲಿ ಎನ್‌ಪಿಎಸ್‌ಗೆ ಕೊಡುಗೆ: 50,000
  • ಗೃಹಸಾಲ ಬಡ್ಡಿ ಅಥವಾ ಎಚ್‌ ಆರ್‌ ಎ: 2,00,000
  • ಸ್ವಂತ ಕುಟುಂಬಕ್ಕೆ ವೈದ್ಯಕೀಯ ವಿಮೆ: 25,000

  • ಒಟ್ಟು ಡಿಡಕ್ಷನ್‌ಗಳ ಕ್ಲೇಮ್‌: 5,25,000
  • ಎ-ಬಿ= ತೆರಿಗೆಗೆ ಅರ್ಹ ನಿವ್ವಳ ಆದಾಯ: 4,95,000
  • ಪಾವತಿಸಬೇಕಾದ ತೆರಿಗೆ: ಇಲ್ಲ



Read more…

[wpas_products keywords=”deal of the day”]