Karnataka news paper

ನೆಟ್‌ಫ್ಲಿಕ್ಸ್‌ನಲ್ಲಿ ನಿಮ್ಮ ವ್ಯೂವಿಂಗ್ ಹಿಸ್ಟರಿಯನ್ನು ಕ್ಲಿಯರ್‌ ಮಾಡಲು ಹೀಗೆ ಮಾಡಿ?


ನೆಟ್‌ಫ್ಲಿಕ್ಸ್‌ನಲ್ಲಿ

ಹೌದು, ನೆಟ್‌ಫ್ಲಿಕ್ಸ್‌ನಲ್ಲಿ ಯಾವುದೇ ಚಲನಚಿತ್ರ, ಕಾರ್ಯಕ್ರಮವನ್ನು ವಿಕ್ಷಣೆ ಮಾಡಿದರೂ ಸಹ ಅದು ವ್ಯೂ ಹಿಸ್ಟರಿಯಲ್ಲಿ ಕಾಣಿಸಿಕೊಳ್ಳಲಿದೆ. ನಿಮ್ಮ ವ್ಯೂ ಹಿಸ್ಟರಿಯಲ್ಲಿ ನೀವು ವೀಕ್ಷಿಸಿರುವ ಎಲ್ಲಾ ಕಾರ್ಯಕ್ರಮಗಳನ್ನು ಕೂಡ ಕಾಣಬಹುದು. ಒಂದು ವೇಳೆ ನಿಮಗೆ ಈ ಹಿಸ್ಟರಿಯ ಅವಶ್ಯಕತೆ ಇಲ್ಲದಿದ್ದರೆ ನೆಟ್‌ಫ್ಲಿಕ್ಸ್‌ ವ್ಯ ಹಿಸ್ಟರಿಯನ್ನು ಕ್ಲಿಯರ್‌ ಮಾಡಬಹುದಾಗಿದೆ. ಅದರಲ್ಲೂ ನಿಮ್ಮ ಕುಟುಂಬದ ಸದಸ್ಯರೊಂದಿಗೆ ನೆಟ್‌ಫ್ಲಿಕ್ಸ್‌ ಅಕೌಂಟ್‌ ಶೇರ್‌ ಮಾಡುತ್ತಿದ್ದರೆ ನಿಮ್ಮ ವ್ಯೂ ಹಿಸ್ಟರಿಯನ್ನು ಕ್ಲಿಯರ್‌ ಮಾಡುವುದು ಉತ್ತಮ. ಹಾಗಾದ್ರೆ ನೆಟ್‌ಫ್ಲಿಕ್ಸ್‌ನಲ್ಲಿ ವ್ಯೂ ಹಿಸ್ಟರಿಯನ್ನು ಕ್ಲಿಯರ್‌ ಮಾಡುವುದು ಹೇಗೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ನೆಟ್‌ಫ್ಲಿಕ್ಸ್ ನಿಮ್ಮ ವ್ಯೂ ಹಿಸ್ಟರಿಯನ್ನು ಕ್ಲಿಯರ್‌ ಮಾಡುವುದು ಹೇಗೆ?

ನೆಟ್‌ಫ್ಲಿಕ್ಸ್ ನಿಮ್ಮ ವ್ಯೂ ಹಿಸ್ಟರಿಯನ್ನು ಕ್ಲಿಯರ್‌ ಮಾಡುವುದು ಹೇಗೆ?

ಹಂತ:1 ಮೊದಲಿಗೆ ನಿಮ್ಮ ನೆಟ್‌ಫ್ಲಿಕ್ಸ್ ಖಾತೆಗೆ ಲಾಗ್ ಇನ್ ಮಾಡಿ ಮತ್ತು ಮೆನುವಿನಲ್ಲಿ ಟ್ಯಾಪ್ ಮಾಡಿ
ಹಂತ:2 ನಂತರ ನಿಮ್ಮ ಪ್ರೊಫೈಲ್ ಅನ್ನು ಟ್ಯಾಪ್ ಮಾಡಿ ಮತ್ತು ವ್ಯ ಆಕ್ಟಿವಿಟಿ ಆಯ್ಕೆಯನ್ನು ಆಯ್ಕೆಮಾಡಿ
ಹಂತ:3 ಇದರಲ್ಲಿ “ಮೈ ಆಕ್ಟಿವಿಟಿ ಪೇಜ್‌” ತೆರೆಯಿರಿ
ಹಂತ:4 ನೀವು ಈಗ ನಿಮ್ಮ “ಮೈ ಆಕ್ಟಿವಿಟಿ” ಸ್ಕ್ರೀನ್‌ ಕಾಣಬಹುದು. ಇದು ನಿಮ್ಮ ವ್ಯೂ ಆಕ್ಟಿವಿಟಿಯನ್ನು ವೀಕ್ಷಿಸುವ ದಿನಾಂಕದ ಕ್ರಮದಲ್ಲಿ ಪಟ್ಟಿಮಾಡುತ್ತದೆ
ಹಂತ:5 ಇದರಲ್ಲಿ ನೀವು ನಿರ್ದಿಷ್ಟವಾದ ಕ್ಯಾಪ್ಶನ್‌ ಡಿಲೀಟ್‌ ಮಾಡಲು ಕ್ಯಾಪ್ಶನ್‌ ಬಲಭಾಗದಲ್ಲಿರುವ ನೋ ಚಿಹ್ನೆಯ ಮೇಲೆ ಟ್ಯಾಪ್ ಮಾಡುವ ಮೂಲಕ ಕ್ಲಿಯರ್‌ ಮಾಡಬಹುದು.

ಡೆಸ್ಕ್‌ಟಾಪ್‌ನಲ್ಲಿ ನೆಟ್‌ಫ್ಲಿಕ್ಸ್ ವ್ಯೂ ಹಿಸ್ಟರಿಯನ್ನು ಕ್ಲಿಯರ್‌ ಮಾಡುವುದು ಹೇಗೆ?

ಡೆಸ್ಕ್‌ಟಾಪ್‌ನಲ್ಲಿ ನೆಟ್‌ಫ್ಲಿಕ್ಸ್ ವ್ಯೂ ಹಿಸ್ಟರಿಯನ್ನು ಕ್ಲಿಯರ್‌ ಮಾಡುವುದು ಹೇಗೆ?

ಹಂತ:1 ನೆಟ್‌ಫ್ಲಿಕ್ಸ್ ತೆರೆದು, ನಿಮ್ಮ ಖಾತೆಯನ್ನು ಟ್ಯಾಪ್ ಮಾಡಿರಿ.
ಹಂತ:2 ಕೆಳಭಾಗದ ಬಲಭಾಗದಲ್ಲಿ ಕಾಣುವ ‘ಮೋರ್’ ಆಯ್ಕೆ ಕ್ಲಿಕ್ಕ್ ಮಾಡಿ.
ಹಂತ:3 ನಂತರ ಅಕೌಂಟ್ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
ಹಂತ:4 ಸ್ಕ್ರೋಲ್‌ ಡೌನ್ ಮಾಡಿ, ‘ವ್ಯೂವಿಂಗ್ ಆಕ್ಟಿವಿಟಿ’ ಟ್ಯಾಪ್ ಮಾಡಿರಿ
ಹಂತ:5 ವ್ಯೂವಿಂಗ್ ಹಿಸ್ಟರಿಯನ್ನು ‘ಹೈಡ್ ಆಲ್'(Hide all) ಒತ್ತಿರಿ.

ಐಫೋನ್‌ನಲ್ಲಿ ನೆಟ್‌ಫ್ಲಿಕ್ಸ್ ನಿಮ್ಮ ವ್ಯೂ ಹಿಸ್ಟರಿಯನ್ನು ಕ್ಲಿಯರ್‌ ಮಾಡುವುದು ಹೇಗೆ?

ಐಫೋನ್‌ನಲ್ಲಿ ನೆಟ್‌ಫ್ಲಿಕ್ಸ್ ನಿಮ್ಮ ವ್ಯೂ ಹಿಸ್ಟರಿಯನ್ನು ಕ್ಲಿಯರ್‌ ಮಾಡುವುದು ಹೇಗೆ?

ಹಂತ:1 ನೆಟ್‌ಫ್ಲಿಕ್ಸ್ ತೆರೆದು ಬಲಗಡೆಯ ಸೈನ್‌ಇನ್ ಆಯ್ಕೆ ಮೂಲಕ ಲಾಗ್‌ಇನ್ ಆಗಿರಿ.
ಹಂತ:2 ನಂತರ ಮೆನು ಆಯ್ಕೆಯನ್ನು ಕ್ಲಿಕ್ ಮಾಡಿರಿ
ಹಂತ:3 ನಿಮ್ಮ ಖಾತೆಯನ್ನು ಟ್ಯಾಪ್ ಮಾಡಿರಿ
ಹಂತ:4 ಸರ್ಚ್ ಹಿಸ್ಟರಿ ಡಿಲೀಟ್ ಮಾಡುವ ಪ್ರೊಫೈಲ್ ಸೆಲೆಕ್ಟ್ ಮಾಡಿ
ಹಂತ:5 ಆನಂತರ ಮತ್ತೆ ಮೆನು ಆಯ್ಕೆ ಒತ್ತಿರಿ ಮತ್ತು ಅಕೌಂಟ್ ಟ್ಯಾಪ್ ಮಾಡಿ
ಹಂತ:6 ಆಗ ವ್ಯೂವಿಂಗ್ ಆಕ್ಟಿವಿಟಿ ಆಯ್ಕೆ ಕಾಣಿಸುತ್ತದೆ.
ಹಂತ:7 ಮೈ ಆಕ್ಟಿವಿಟಿಯ ಆಯ್ಕೆ ಕ್ಲಿಕ್ ಮಾಡಿ ಮತ್ತು ಹೈಡ್ (Hide) ಆಲ್ ಒತ್ತಿರಿ.

ಹಿಸ್ಟರಿಯಲ್ಲಿ

ಇನ್ನು ವ್ಯೂ ಹಿಸ್ಟರಿಯಲ್ಲಿ ನೀವು ತೆಗೆದುಹಾಕುವ ಯಾವುದೇ ಶೀರ್ಷಿಕೆಯನ್ನು 24 ಗಂಟೆಗಳ ಒಳಗೆ ಡಿಲೀಟ್‌ ಮಾಡಲಾಗುತ್ತದೆ. ಈ ಕ್ಯಾಪ್ಶನ್‌ಗಳನ್ನು ವ್ಯೂ ಹಿಸ್ಟರಿಯಿಂದ ತೆಗೆದುಹಾಕಿದ ನಂತರ, ನೀವು ಅವುಗಳನ್ನು ಮತ್ತೆ ನೋಡದ ಹೊರತು, ಹೋಮ್ ಸ್ಕ್ರೀನ್‌ನಲ್ಲಿ “ಇತ್ತೀಚೆಗೆ ವೀಕ್ಷಿಸಿದ” ಅಥವಾ “ವೀಕ್ಷಿಸುವುದನ್ನು ಮುಂದುವರಿಸಿ” ವರ್ಗಗಳಲ್ಲಿ ನೀವು ಇನ್ನು ಮುಂದೆ ನೋಡಲಾಗುವುದಿಲ್ಲ.



Read more…

[wpas_products keywords=”smartphones under 15000 6gb ram”]