Karnataka news paper

ಕೊಂಕಣ ರೈಲ್ವೆ ವಿದ್ಯುದೀಕರಣ: ವಿದ್ಯುತ್‌ ಚಾಲಿತ ಕಾರವಾರ – ಯಶವಂತಪುರ ಹಗಲು ರೈಲು ಓಡಾಟಕ್ಕೆ ಕ್ಷಣಗಣನೆ


ಹೈಲೈಟ್ಸ್‌:

  • 1,100 ಕೋಟಿ ರೂ. ವೆಚ್ಚದ ಬೃಹತ್‌ ಯೋಜನೆ
  • ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕದ ಕೊಂಕಣ ರೈಲ್ವೆ ಹಳಿ ವಿದ್ಯುದೀಕರಣಕ್ಕೆ ಒಳಪಡಲಿದೆ
  • ಈಗಾಗಲೇ ಗೋವಾ – ಮಂಗಳೂರು(ಕರ್ನಾಟಕ) ಜೋಡಿಸುವ 738 ಕಿ.ಮೀ. ಕಾಮಗಾರಿ ಪ್ರಗತಿಯಲ್ಲಿದೆ

ಜಾನ್‌ ಡಿಸೋಜ
ಕುಂದಾಪುರ (ಉಡುಪಿ):
ಕರಾವಳಿ ಕರ್ನಾಟಕದ ಮೊಟ್ಟ ಮೊದಲ ವಿದ್ಯುತ್‌ ಚಾಲಿತ ಕಾರವಾರಯಶವಂತಪುರ ಹಗಲು ರೈಲು ಓಡಾಟಕ್ಕೆ ಕ್ಷಣಗಣನೆ ಆರಂಭವಾಗಿದೆ. ಜನವರಿ 19ರಂದು ಪ್ರಾಯೋಗಿಕ ನೆಲೆಯಲ್ಲಿ ಕಾರವಾರ – ಯಶವಂತಪುರ ವಿದ್ಯುತ್‌ ಚಾಲಿತ ರೈಲು ಓಡಾಟ ನಡೆಸಲಿದೆ ಎಂದು ದಕ್ಷಿಣ ರೈಲ್ವೆ ಅಧಿಕೃತ ಆದೇಶ ಹೊರಡಿಸಿದೆ.

ಕೊಂಕಣ ರೈಲ್ವೆ ಕಾರ್ಪೊರೇಶನ್‌ ಲಿ. ರೈಲ್ವೆ ವಿದ್ಯುದೀಕರಣ ಮತ್ತು ಪಥ ದ್ವಿಗುಣಗೊಳಿಸುವ ಕಾರ್ಯವನ್ನು 2017ರಲ್ಲಿ ಆರಂಭಿಸಿತ್ತು. ರೋಹಾ (ಮಹಾರಾಷ್ಟ್ರ) ದಿಂದ ವೆರ್ನಾ (ಗೋವಾ), ವೆರ್ನಾ (ಗೋವಾ) ದಿಂದ ಮಂಗಳೂರಿನ ತೋಕೂರು ತನಕ ಎರಡು ಹಂತಗಳಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಿತ್ತು. ಕೊಂಕಣ ರೈಲ್ವೆ ಕಾರ್ಪೊರೇಶನ್‌ಗೆ ಒಳಪಟ್ಟ 700 ಬೆಸ ಕಿ. ಮೀ. ಮಾರ್ಗದಲ್ಲಿ ವಿದ್ಯುದೀಕರಣ ಕಾರ್ಯ ನಡೆಯಲಿದೆ.

1,100 ಕೋಟಿ ರೂ. ವೆಚ್ಚದ ಬೃಹತ್‌ ಯೋಜನೆ ಇದಾಗಿದ್ದು, ಗೋವಾ, ಮಹಾರಾಷ್ಟ್ರ ಮತ್ತು ಕರ್ನಾಟಕದ ಕೊಂಕಣ ರೈಲ್ವೆ ಹಳಿ ವಿದ್ಯುದೀಕರಣಕ್ಕೆ ಒಳಪಡಲಿದೆ. ಈಗಾಗಲೇ ಗೋವಾ – ಮಂಗಳೂರು(ಕರ್ನಾಟಕ) ಜೋಡಿಸುವ 738 ಕಿ.ಮೀ. ಕಾಮಗಾರಿ ಪ್ರಗತಿಯಲ್ಲಿದ್ದು, ಬೆಂಗಳೂರು – ಮಂಗಳೂರು ಮಾರ್ಗದ ವಿದ್ಯುದೀಕರಣ ಕಾರ್ಯ ಅಂತಿಮಗೊಂಡಿದೆ. ಮೊದಲ ಹಂತವಾಗಿ ಪ್ರಾಯೋಗಿಕ ನೆಲೆಯಲ್ಲಿ ವಿದ್ಯುತ್‌ ಚಾಲಿತ ಪ್ಯಾಸೆಂಜರ್‌ ರೈಲು ಬೆಂಗಳೂರು – ಮಂಗಳೂರು ನಡುವೆ ಓಡಾಟಕ್ಕೆ ನಿರ್ಧರಿಸಲಾಗಿದೆ.

ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಿ; ಶೋಭಾ ಕರಂದ್ಲಾಜೆ ಮನವಿ
ಜನವರಿ 19ರಿಂದ ಪ್ರಾಯೋಗಿಕ ಓಡಾಟ

‘ಬೆಂಗಳೂರು – ಮಂಗಳೂರು ನಡುವೆ ಜನವರಿ 19 ರಿಂದ ಪ್ರಾಯೋಗಿಕವಾಗಿ ವಿದ್ಯುತ್‌ ಚಾಲಿತ ಪ್ಯಾಸೆಂಜರ್‌ ಹಗಲು ರೈಲು ಕಾರವಾರ – ಯಶವಂತಪುರ ನಡುವೆ ಓಡಾಡಲಿದೆ. ಈಗಾಗಲೇ ವಿದ್ಯುತ್‌ ಚಾಲಿತ ಗೂಡ್ಸ್‌ ರೈಲುಗಳು ಈ ಮಾರ್ಗದಲ್ಲಿ ಓಡಾಟ ಆರಂಭಿಸಿವೆ. 2022ರ ಮಾರ್ಚ್‌ ಒಳಗೆ ಕೊಂಕಣ ರೈಲ್ವೆ ಕಾರ್ಪೊರೇಶನ್‌ಗೆ ಒಳಪಟ್ಟ 700 ಕಿ.ಮೀ. ಮಾರ್ಗದಲ್ಲಿ ವಿದುದೀಕರಣ ಕಾರ್ಯ ಪೂರ್ಣಗೊಳ್ಳಲಿದ್ದು, ಮೂರು ರಾಜ್ಯಗಳಲ್ಲಿ ವಿದ್ಯುತ್‌ ಚಾಲಿತ ಪ್ಯಾಸೆಂಜರ್‌ ರೈಲು ಓಡಾಟ ಆರಂಭಿಸಲು ಸಿದ್ಧತೆ ನಡೆಸಲಾಗುತ್ತಿದೆ’ ಎಂದು ಕೊಂಕಣ ರೈಲ್ವೆ ನಿಗಮದ ರೀಜನಲ್‌ ಮ್ಯಾನೇಜರ್‌ ಬಿ. ಬಿ. ನಿಕಂ ಹೇಳಿದ್ದಾರೆ.

ಮಾನ್ಸೂನ್‌ ಎದುರಿಸಲು ಸಜ್ಜಾದ ಕೊಂಕಣ ರೈಲ್ವೆ; ಸುಗಮ ಪ್ರಯಾಣದ ಗಸ್ತಿಗೆ 681 ಮಂದಿ ನಿಯೋಜನೆ
ರೈಲು ಜಾಲ ವಿಸ್ತರಣೆ

‘ವಿದ್ಯುದೀಕರಣ ಯೋಜನೆಯಿಂದ ಡೀಸೆಲ್‌ ಬಳಕೆ ಕಡಿಮೆಯಾಗಲಿದೆ. ಪರಿಸರ ಮಾಲಿನ್ಯಕ್ಕೆ ಕಡಿವಾಣ ಬೀಳಲಿದೆ. ದೇಶದ ಪಶ್ಚಿಮ ಕರಾವಳಿಯ ರೈಲು ಮಾರ್ಗ ವಿಸ್ತರಣೆಯಾಗಲಿದೆ. ಇದರಿಂದ ರೈಲ್ವೆಗೆ ವಾರ್ಷಿಕ 100 ಕೋಟಿ ರೂ. ಉಳಿತಾಯ ಆಗಲಿದೆ. ಆರಂಭಿಕ ವಿದ್ಯುತ್‌ ಚಾಲಿತ ರೈಲು ಓಡಾಟ ಭಾರಿ ಕುತೂಹಲ ಮೂಡಿಸಿದೆ’ ಎನ್ನುತ್ತಾರೆ, ಬೈಂದೂರು ಮೂಕಾಂಬಿಕಾ ರೈಲ್ವೆ ರೋಡ್‌ ಸ್ಟೇಶನ್‌ ಅಧ್ಯಕ್ಷ ವೆಂಕಟೇಶ್‌ ಕಿಣಿ.

ಗಣೇಶ ಚೌತಿ ಹಿನ್ನೆಲೆ: ಕೊಂಕಣ ರೈಲ್ವೆ ಮಾರ್ಗದಲ್ಲಿ 4 ವಿಶೇಷ ರೈಲು ಸಂಚಾರ



Read more

[wpas_products keywords=”deal of the day sale today offer all”]