Karnataka news paper

ಲಾಕ್‌ಡೌನ್‌, ಕಠಿಣ ನಿಯಮ ಇಲ್ಲ: ಶುಕ್ರವಾರದ ಸಭೆ ಬಳಿಕ ಮುಂದಿನ ತೀರ್ಮಾನ: ಅಶೋಕ


ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಕಾರಣಕ್ಕೆ ಲಾಕ್‌ಡೌನ್ ಅಥವಾ ಇನ್ನಷ್ಟು ಕಠಿಣ ನಿಯಮ ಜಾರಿಗೆ ತರುವ ಉದ್ದೇಶವಿಲ್ಲ. ವಾರಂತ್ಯ ಕರ್ಫ್ಯೂ ಮುಂದುವರಿಸಬೇಕೆ ಅಥವಾ ಸಡಿಲಗೊಳಿಸಬೇಕೇ ಎಂಬ ಬಗ್ಗೆ ಶುಕ್ರವಾರ ತುರ್ತುಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ಕಂದಾಯ ಸಚಿವ ಆರ್‌.ಅಶೋಕ ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಕೋವಿಡ್‌ ಕುರಿತ ವರ್ಚುವಲ್‌ ಸಭೆಯ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು.

ತಜ್ಞರ ಪ್ರಕಾರ ಇದೇ 25 ಅಥವಾ 26 ರ ಸುಮಾರಿಗೆ ಕೋವಿಡ್‌ ಪ್ರಕರಣಗಳು ತಾರಕಕ್ಕೆ ಹೋಗಿ ಬಳಿಕ ಇಳಿಕೆಯಾಗಬೇಕು. ಅದನ್ನು ನೋಡಿಕೊಂಡು ಮುಂದಿನ ತೀರ್ಮಾನ ಮಾಡಬೇಕಾಗಿದೆ. ಪ್ರಕರಣಗಳು ಇಳಿಕೆಯಾದರೆ ನಿಯಮಗಳನ್ನು ಸಡಿಲಿಸಲಾಗುವುದು ಎಂದರು.

ಬೆಂಗಳೂರು ಸೇರಿ ರಾಜ್ಯದ ಎಲ್ಲೆಡೆ ಶುಕ್ರವಾರದವರೆಗೆ ಶಾಲಾ–ಕಾಲೇಜುಗಳು ಯಥಾಸ್ಥಿತಿ ಮುಂದುವರೆಯಲಿವೆ. ಬಳಿಕ ಆ ಬಗ್ಗೆಯೂ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.



Read more from source

[wpas_products keywords=”deal of the day sale today kitchen”]