ಹೈಲೈಟ್ಸ್:
- ಸಮಂತಾಗೆ ಬಿ-ಟೌನ್ ಅಂಗಳದಿಂದ ಭಾರಿ ಆಫರ್
- ಸಮಂತಾ ನಟಿಸಿರುವ ‘ಪುಷ್ಪ’ ಚಿತ್ರದ ಐಟಂ ಸಾಂಗ್‌ಗೆ ಭಾರಿ ಪ್ರಶಂಸೆ
- ಬಾಲಿವುಡ್‌ನಿಂದ ಸಮಂತಾಗೆ ಭಾರಿ ಆಫರ್ ನೀಡಿದ್ಯಾರು?
ಸಮಂತಾಗೆ ಆಫರ್ ನೀಡಿದ ವೈಆರ್‌ಎಫ್
ಬಾಲಿವುಡ್‌ನ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆ ‘ಯಶ್ ರಾಜ್ ಫಿಲ್ಮ್ಸ್’. ಬಿ-ಟೌನ್ ಅಂಗಳದ ಪ್ರತಿಯೊಬ್ಬ ನಟ-ನಟಿಗೂ ಈ ಬ್ಯಾನರ್‌ನ ಒಂದಾದರೂ ಸಿನಿಮಾದಲ್ಲಿ ನಟಿಸಬೇಕು ಎಂಬ ಕನಸು ಇದ್ದೇ ಇರುತ್ತದೆ. ಇದೀಗ ಇಂಥ ಪ್ರತಿಷ್ಠಿತ ಬ್ಯಾನರ್‌ನಿಂದ ಸಮಂತಾಗೆ ಸಿನಿಮಾ ಆಫರ್ ಬಂದಿದೆಯಂತೆ! ಅದು ಸಿನಿಮಾಗಾಗಿ ಅಲ್ಲ. ಒಟ್ಟೊಟ್ಟಿಗೆ ಮೂರು ಸಿನಿಮಾಗಳಲ್ಲಿ ನಟಿಸುವಂತೆ ‘ಯಶ್ ರಾಜ್ ಫಿಲ್ಮ್ಸ್’ ಸಮಂತಾಗೆ ಆಫರ್ ನೀಡಿದೆಯಂತೆ. ಬಹುಶಃ ಈ ಬಿಗ್ ಆಫರ್‌ಗೆ ಸಮಂತಾ ಒಪ್ಪಿಗೆ ನೀಡಿ, ಅಗ್ರಿಮೆಂಟ್‌ಗೆ ಸಹಿ ಸಾಧ್ಯತೆ ಜಾಸ್ತಿ ಇದೆ ಎನ್ನುತ್ತವೆ ಮೂಲಗಳು.
ಸಮಂತಾ ಬೇಡಿಕೆ ಹೆಚ್ಚಲು ‘ಪುಷ್ಪ’ ಕಾರಣವೇ?
ಸದ್ಯ ಇಂಥದ್ದೊಂದು ಮಾತು ಟಾಲಿವುಡ್, ಬಾಲಿವುಡ್ ಅಂಗಳದಿಂದ ಕೇಳಿಬಂದಿದೆ. ‘ಪುಷ್ಪ’ ಚಿತ್ರದ ‘ಹೂ ಅಂತೀಯಾ ಮಾವ.. ಊಹೂ ಅಂತೀಯಾ ಮಾವ..’ ಹಾಡು ದೊಡ್ಡ ಹಿಟ್ ಆಗಿದೆ. ಈ ಐಟಂ ಸಾಂಗ್‌ನಲ್ಲಿ ಸಮಂತಾ ಮಸ್ತ್ ಆಗಿ ಹೆಜ್ಜೆ ಹಾಕಿದ್ದಾರೆ. ‘ಪುಷ್ಪ’ ಪ್ಯಾನ್ ಇಂಡಿಯಾ ಸಿನಿಮಾ. ಹಾಗಾಗಿ, ಎಲ್ಲ ಭಾಷೆಯ ಪ್ರೇಕ್ಷಕರು ಈ ಹಾಡಿಗೆ ಮತ್ತು ಸಮಂತಾಗೆ ಫಿದಾ ಆಗಿದ್ದಾರೆ. ಅದರಲ್ಲೂ ‘ಪುಷ್ಪ’ ಚಿತ್ರದ ಹಿಂದಿ ವರ್ಷನ್ ದೊಡ್ಡ ಹಿಟ್ ಆಗಿದೆ. ಅದೊಂದೇ ವರ್ಷನ್‌ನ ಕಲೆಕ್ಷನ್ 100 ಕೋಟಿ ರೂ. ಸಮೀಪದಲ್ಲಿದೆ. ಬಿ-ಟೌನ್ ಅಂಗಳದಲ್ಲಿ ಸಮಂತಾ ಹವಾ ನೋಡಿ, ‘ಯಶ್ ರಾಜ್ ಫಿಲ್ಮ್ಸ್’ ಈ ಆಫರ್ ನೀಡಿರಬಹುದು ಎನ್ನಲಾಗಿದೆ.
ದೊಡ್ಡ ಸಕ್ಸಸ್ ನೀಡಿದ್ದ ‘ದಿ ಫ್ಯಾಮಿಲಿ ಮ್ಯಾನ್ 2’
ರಾಜ್ ಮತ್ತು ಡಿಕೆ ನಿರ್ದೇಶನ ಮಾಡಿದ್ದ ‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸೀರಿಸ್‌ನಲ್ಲಿ ಸಮಂತಾ ನಟಿಸಿದ್ದರು. ಅವರ ನಟನೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಹಾಗಾಗಿ, ಆ ವೆಬ್ ಸೀರಿಸ್ ಸಮಂತಾ ವೃತ್ತಿ ಬದುಕಿಗೆ ಭಾರಿ ತಿರುವು ನೀಡಿತು. ಇದು ಕೂಡ ಬಾಲಿವುಡ್‌ನಲ್ಲಿ ಬೇಡಿಕೆ ಹೆಚ್ಚಾಗಲು ಕಾರಣ ಇರಬಹುದು. ಸದ್ಯ ಇದೇ ನಿರ್ದೇಶಕ ಜೋಡಿ ಜೊತೆಗೆ ‘ಸಿಟಾಡೆಲ್’ ಎಂಬ ವೆಬ್ ಸೀರಿಸ್‌ನಲ್ಲಿ ಸಮಂತಾ ಬಣ್ಣ ಹಚ್ಚಿದ್ದಾರೆ.
‘ಅಫೇರ್ ಇದೆ, ಅಬಾರ್ಷನ್ ಆಗಿದೆ’ ಎನ್ನುವ ಗಾಸಿಪ್‌ಗಳಿಗೆ ನಟಿ ಸಮಂತಾ ಕೊಟ್ಟ ಸ್ಪಷ್ಟನೆ ಏನು?
Read more
[wpas_products keywords=”deal of the day party wear dress for women stylish indian”]