
ಕತಾರ್‌ನ ಆಂಧ್ರ ಕಲಾ ವೇದಿಕೆ ಮತ್ತು ಗುಜರಾತ್ ಸಮಾಜದ ಸಹಯೋಗದಿಂದ ಈ ವರ್ಷದ ಮಕರ ಸಂಕ್ರಾಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಈ ಆಚರಣೆಯನ್ನು ಸಾಂಪ್ರದಾಯಿಕ ವಿಧಾನದಲ್ಲೇ ಆಚರಿಸುವ ಸಲುವಾಗಿ ರಂಗೋಲಿ ಮೇಳ ಮತ್ತು ಗಾಳಿಪಟ ಹಾರಿಸುವ ಸ್ಪರ್ಧೆ ಆಯೋಜಿಸಲಾಗಿತ್ತು.
ಕತಾರ್‌ನ ಭಾರತದ ರಾಯಭಾರಿ ಡಾ. ದೀಪಕ್ ಮಿತ್ತಲ್, ಮೇಡಂ ರಾಯಭಾರಿ ಡಾ. ಅಲ್ಪನಾ ಮಿತ್ತಲ್ ಮತ್ತು ಐಸಿಸಿ ಸಮನ್ವಯ ಅಧಿಕಾರಿ ಕ್ಸೇವಿಯರ್ ಧನರಾಜ್ ಅವರು ಉತ್ಸವದಲ್ಲಿ ಭಾಗವಹಿಸಿದ್ದರು.
ವೆಂಕಪ್ಪ ಭಾಗವತುಲ ನೇತೃತ್ವದ ಆಂಧ್ರ ಕಲಾ ವೇದಿಕೆಯ ನೂತನ ನಿರ್ವಹಣಾ ತಂಡದ ಸಹಯೋಗದಲ್ಲಿ ಮಹಿಳಾ ತಂಡ ಐಸಿಸಿ ಮಹಿಳೆಯರೊಂದಿಗೆ ಸೇರಿ ಅಶೋಕ ಸಭಾಂಗಣದಲ್ಲಿ ವರ್ಣರಂಜಿತ ರಂಗೋಲಿಗಳನ್ನು ರಚಿಸಿದರು.
ಗುಜರಾತ್ ಸಮಾಜದ ಅಧ್ಯಕ್ಷ ದೇವಾಂಗ್ ಪಟೇಲ್ ಅವರು ತಮ್ಮ ತಂಡ ಮತ್ತು ಕುಟುಂಬದೊಂದಿಗೆ ಐಸಿಸಿ ಮೈದಾನದಲ್ಲಿ ಗಾಳಿಪಟ ಹಾರಾಟ ಸ್ಪರ್ಧೆಯಲ್ಲಿ ಭಾಗವಹಿಸಿದರು.
ಐಸಿಸಿ ಅಧ್ಯಕ್ಷ ಪಿಎನ್ ಬಾಬು ರಾಜನ್ ನೇತೃತ್ವದಲ್ಲಿ ಗಾಳಿಪಟ ಉತ್ಸವ ಹಾಗೂ ರಂಗೋಲಿ ಮೇಳದಲ್ಲಿ ಭಾಗವಹಿಸಿದ್ದ ಸಮಸ್ತ ಕತಾರ್ ಭಾರತೀಯರು ಸಂಭ್ರಮಪಟ್ಟರು. ತಾಯ್ನಾಡಿನಿಂದ ದೂರದಲ್ಲಿದ್ದರೂ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗಲು ಈ ಕಾರ್ಯಕ್ರಮ ಸಹಕಾರಿಯಾಯ್ತು.
Read more
[wpas_products keywords=”deal of the day sale today offer all”]