ಹೈಲೈಟ್ಸ್:
- ‘ಬಿಗ್ ಬಾಸ್ 15’ ಶೋನಲ್ಲಿ ಕರಣ್ ಕುಂದ್ರಾ, ಶಮಿತಾ ಶೆಟ್ಟಿ ಬಗ್ಗೆ ಸಲ್ಮಾನ್ ಖಾನ್ ಜೋಕ್
- ತನ್ನ ಬಾಯ್‌ಫ್ರೆಂಡ್, ಲವ್ ಬಗ್ಗೆ ಮಾತನಾಡಿದ್ದಕ್ಕೆ ತೇಜಸ್ವಿ ಪ್ರಕಾಶ್ ಗರಂ
- ಅಷ್ಟಕ್ಕೂ ಸಲ್ಮಾನ್ ಖಾನ್ ಹೇಳಿದ್ದೇನು?
ಬಿಗ್ ಬಾಸ್ 15 ಶೋನಲ್ಲಿ ಕರಣ್ ಕುಂದ್ರಾ, ತೇಜಸ್ವಿ ಪ್ರಕಾಶ್ ಪ್ರೀತಿ ಮಾಡುತ್ತಿದ್ದಾರೆ. ಆರಂಭದಲ್ಲಿ ನಾವಿಬ್ಬರೂ ಸ್ನೇಹಿತರು ಎಂದು ಹೇಳಿಕೊಳ್ಳುತ್ತಿದ್ದ ಈ ಜೋಡಿ ಈಗ ಪ್ರೀತಿಯಲ್ಲಿ ಬಿದ್ದಿರೋದು ಸತ್ಯ ಅಂತ ಸಾರಿ ಸಾರಿ ಹೇಳಿದೆ. ಹೀಗಿರುವಾಗ ಕರಣ್ ಕುಂದ್ರಾ, ಶಮಿತಾ ಶೆಟ್ಟಿಯನ್ನು ಕದ್ದು ಕದ್ದು ನೋಡುತ್ತಾನೆ, ಆತನಿಗೆ ಶಮಿತಾ ಕಂಡರೆ ತುಂಬ ಇಷ್ಟ ಎಂದು ಸಲ್ಮಾನ್ ಖಾನ್ ಅವರು ವಾರದ ಎಪಿಸೋಡ್‌ನಲ್ಲಿ ಹೇಳಿದ್ದಾರೆ. ಕರಣ್ ಕುಂದ್ರಾ ಮಾತ್ರ ಇದ್ಯಾವುದಕ್ಕೂ ಪ್ರತಿಕ್ರಿಯೆಯೇ ನೀಡಿಲ್ಲ.
ಕರಣ್ ಶಮಿತಾರನ್ನು ಇಷ್ಟಪಡ್ತಾನೆ ಎಂದು ರಾಖಿ ಸಾವಂತ್ ಅವರು ತೇಜಸ್ವಿ ಕಿವಿ ಚುಚ್ಚಿದ್ದಾರೆ. ಅಷ್ಟೇ ಅಲ್ಲದೆ ಈ ವಿಷಯವನ್ನು ಇಟ್ಟುಕೊಂಡು ಎಲ್ಲರೆದುರು ರಾಖಿ ಅವರು ಕಾಮಿಡಿ ಮಾಡಿದ್ದಾರೆ. ನನಗೆ ಕರಣ್ ಕಳೆದ 12 ವರ್ಷಗಳಿಂದ ಪರಿಚಯವಿದೆ. ಕರಣ್ ಶಮಿತಾಗೆ ಇದ್ದರೆ ಚೆಂದ, ತೇಜಸ್ವಿ ಜೊತೆ ಇರೋದು ಬೇಡ ಎಂದು ರಾಖಿ ಇನ್ನಷ್ಟು ತುಪ್ಪ ಸುರಿದಿದ್ದಾರೆ.
ಕೊನೆ ಕ್ಷಣದಲ್ಲಿ ಬಿಗ್ ಬಾಸ್ ಸ್ಪರ್ಧಿಯ ಮದುವೆಗೆ ಸಂಕಷ್ಟ ತಂದಿಟ್ಟ ಆ ಮಹಿಳೆ, ಯಾಕೆ?
ರಾಖಿ ಮಾತು ಕೇಳಿ ಬೇಸರಗೊಂಡ ತೇಜಸ್ವಿ, ಈ ಮಾತಿಗೆ ಯಾಕೆ ಕರಣ್ ಪ್ರತಿಕ್ರಿಯೆ ನೀಡಿಲ್ಲ ಎಂದು ಆಶ್ಚರ್ಯಪಟ್ಟಿದ್ದಾರೆ, ಅದರ ಜೊತೆಗೆ ಕರಣ್‌ಗೆ ಏನು ಬೇಕು ಎಂದು ಕೂಡ ತಿಳಿಯದೆ ಚಿಂತೆಗೊಳಗಾಗಿದ್ದಾರೆ.
ಈ ರಾಖಿ-ತೇಜಸ್ವಿ-ಕರಣ್ ಕುಂದ್ರಾ ನಡುವೆ ಸಲ್ಮಾನ್ ಖಾನ್ ಎಂಟ್ರಿ ಕೊಟ್ಟು ಉರಿತಿದ್ದ ಬೆಂಕಿಗೆ ಇನ್ನಷ್ಟು ತುಪ್ಪ ಹಾಕಿದ್ದಾರೆ. “ಶಮಿತಾ ಎಲ್ಲಿ ಹೋಗುತ್ತಾಳೋ ಅಲ್ಲೆಲ್ಲ ಕರಣ್ ಕುಂದ್ರಾ ಕಣ್ಣು ಹೋಗಿರುತ್ತದೆ. ರಾಖಿ ತನ್ನ ಗಂಡನನ್ನು ತೇಜಸ್ವಿಗೆ ಕೊಡಬೇಕು. ಅದರ ಬದಲಾಗಿ ಶಮಿತಾ ಶೆಟ್ಟಿ ರಾಕೇಶ್ ಬಾಪಟ್‌ರನ್ನು ರಾಖಿಗೆ ನೀಡಬೇಕು. ಆಗ ಶಮಿತಾ ಕರಣ್ ಕುಂದ್ರಾ ಮದುವೆ ಆಗಬಹುದು. ಇದರಿಂದ ಸಹೋದರಿಯಿಬ್ಬರ ಹೆಸರು ಕುಂದ್ರಾ ಅಂತ ಆಗುತ್ತದೆ” ಎಂದು ಜೋಕ್ ಮಾಡಿದ್ದಾರೆ. ಈ ಮಾತು ಎಲ್ಲರಿಗೂ ನಗು ತರಿಸಿದರೆ, ತೇಜಸ್ವಿಗೆ ಮಾತ್ರ ಬಹಳ ಸಿಟ್ಟು ತರಿಸಿದೆ.
ರಿಯಾಲಿಟಿ ಶೋನಲ್ಲಿ ಸಾರಾಯಿ ಕೊಡಿ, ಬಟರ್ ಚಿಕನ್ ಕೊಡಿ ಎಂದು ಕೂಗಾಡಿದ ಸ್ಪರ್ಧಿ ಕರಣ್ ಕುಂದ್ರಾ
“ಇದರಲ್ಲಿ ನನಗೆ ಜೋಕ್ ಯಾವುದು ಕಾಣುತ್ತಿಲ್ಲ. ಇಂತಹ ಅಸಂಬದ್ಧವಾದ ಘಟನೆಯ ಭಾಗವಾಗಲು ನನಗೆ ಇಷ್ಟ ಇಲ್ಲ” ಎಂದು ತೇಜಸ್ವಿ ಗಂಭೀರವಾಗಿ ಹೇಳಿಕೆ ನೀಡಿದ್ದಾರೆ. ಆಗ ಮಾತನಾಡಿದ ಕರಣ್ ಕುಂದ್ರಾ, “ನಾನು ತೇಜಸ್ವಿಯನ್ನು ಇಷ್ಟಪಡುತ್ತೇನೆ. ನನಗೆ ಬೇರೆ ಎಲ್ಲೋ ಕಡೆ ನೋಡುವ ಅಗತ್ಯವಿಲ್ಲ. ನನ್ನ ಹತ್ತಿರ ಉತ್ತಮವಾದ ಆಯ್ಕೆಯಿದೆ” ಎಂದು ಹೇಳಿದ್ದಾರೆ.
Read more
[wpas_products keywords=”deal of the day party wear dress for women stylish indian”]