Karnataka news paper

ಪಿಡಬ್ಲ್ಯೂಡಿ ಪ್ರೈವೆಟ್ ಕಂಪನಿಯಾ? ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಂಸದ ಉಮೇಶ್ ಜಾಧವ್


ಕಲಬುರಗಿ: ಲೋಕೋಪಯೋಗಿ ಇಲಾಖೆ ಸೇರಿದಂತೆ ಇತರ ಇಲಾಖೆಗಳಲ್ಲಿ ನಿಯಮ ಉಲ್ಲಂಘಿಸಿ ಟೆಂಡರ್ ಕರೆಯಲಾಗುತ್ತಿದೆ. ಇದೆಲ್ಲ ನೋಡಿದರೆ ಲೋಕೋಪಯೋಗಿ ಇಲಾಖೆ ಪ್ರೈವೇಟ್ ಕಂಪನಿ ಹಂಗ ಕೆಲಸಾ ಮಾಡುತ್ತಿದೆಯಾ? ಎಂದು ಸಂಸದ ಡಾ. ಉಮೇಶ ಜಾಧವ್ ತರಾಟೆಗೆ ತೆಗೆದುಕೊಂಡರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಕೇಂದ್ರದ ಇಂಧನ ಮೂಲ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಭಗವಂತ ಖೂಬಾ ಅಧ್ಯಕ್ಷತೆಯಲ್ಲಿ ನಡೆದ ದಿಶಾ ಸಭೆಯಲ್ಲಿ ಅಧಿಕಾರಿಗಳನ್ನು ಪ್ರಶ್ನಿಸಿ ಎಲ್ಲ ಟೆಂಡರ್ ಗಳ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಿದರು.

ಚಿತ್ತಾಪುರ ತಾಲೂಕಿನ ಯಾಗಾಪುರದಲ್ಲಿ ಆಗಿರುವ ಟೆಂಡರ್ ಯಾಕೆ ರದ್ದು ಮಾಡಿದಿರಿ? ಲೆಸ್ ಹೋಗಿದ್ದ ಮಾತ್ರಕ್ಕೆ ರದ್ದು ಮಾಡುವುದಾದರೆ ಇದ್ಯಾವ್ ನ್ಯಾಯ? ಹೆಚ್ಚುವರಿ ಮೊತ್ತದ ಕಾಮಗಾರಿಯೇ ಮಾಡಬೇಕೆಂಬ ನಿಯಮ‌ ಬಂದಿದೆಯಾ? ಟೆಂಡರ್ ಇಲ್ಲದೆಯೇ ಕಾಮಗಾರಿ ನಡೆಯುತ್ತಿವೆ. ಟೆಂಡರ್ ಆಗಿ ಹಲವು ತಿಂಗಳಾದರೂ ಕಾಮಗಾರಿ ಶುರು ಆಗುತ್ತಿಲ್ಲ. ಒಟ್ಟಾರೆ ಇಲಾಖೆಯನ್ನು ಪ್ರೈವೇಟ್ ಕಂಪನಿ ಎಂಬುದನ್ನು ಮಾಡಿಕೊಂಡಿರಾ? ಎಂದು ಲೋಕೋಪಯೋಗಿ, ನೀರಾವರಿ, ಸಣ್ಣ ನೀರಾವರಿ ಹಾಗೂ ಇತರ ಹಿರಿಯ ಅಧಿಕಾರಿಗಳನ್ನು ಸಂಸದ ಡಾ.‌ಉಮೇಶ ಜಾಧವ್ ಖಾರವಾಗಿ ಪ್ರಶ್ನಿಸಿದರು.
ಕರ್ನಾಟಕದಲ್ಲಿ ಕೊರೊನಾ ನಿಗ್ರಹಕ್ಕೆ ಸರ್ಕಾರದ ಸರ್ಕಸ್: ಶಾಲೆಗಳಲ್ಲಿ ಸೋಂಕು ನಿಗ್ರಹಕ್ಕೆ ಕಾರ್ಯತಂತ್ರ..
ಸಭೆಗೆ ಸೇಡಂ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಹಾಗೂ ಸಹಾಯಕ ಅಭಿಯಂತರ ಬಾರದೇ ಗೈರು ಹಾಜರಾಗಿದ್ದಕ್ಕೆ ಶಿಸ್ತು ಕ್ರಮ ಕೈಗೊಳ್ಳುವಂತೆ ಕೇಂದ್ರದ ಸಚಿವ ಭಗವಂತ ಖೂಬಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಗ್ರಾಮೀಣ ಭಾಗದಲ್ಲಿ ಕುಡಿಯುವ ಕಾಮಗಾರಿ ಮುಗಿದ ನಂತರ ನೀರು ಒದಗಿಸುವಾಗ ಮತ್ತು ಆರೋಗ್ಯ ಸೇವೆ ಪ್ರಯೋಜನ ಜನರಿಗೆ ನೀಡುವಾಗ ಪ್ರಾರಂಭವನ್ನು ಉತ್ಸವ ರೀತಿಯಲ್ಲಿ ಮಾಡುವಂತೆ ಸಚಿವ ಖೂಬಾ ನಿರ್ದೇಶನ ನೀಡಿದರು. ಪ್ರಧಾನಮಂತ್ರಿ ಯವರು ಎಲ್ಲ ಜನರಿಗೆ ಶುದ್ದ ಕುಡಿಯುವ ಮಹತ್ವಾಕಾಂಕ್ಷೆ ಹೊಂದಿದ್ದಾರೆ. ಹೀಗಾಗಿ ಕುಡಿಯುವ ನೀರಿನ ಕಾಮಗಾರಿಯಲ್ಲಿ ಎಳ್ಳು ಕಾಳಷ್ಟು ನಿರ್ಲಕ್ಷ್ಯ ಸಲ್ಲದು ಎಂದರು.

ಶಾಸಕರ ಗೈರು ಪ್ರಮುಖವಾಗಿ ಕೇಂದ್ರದ ಸಚಿವರ ಅಧ್ಯಕ್ಣತೆಯಲ್ಲಿ ದಿಶಾ ಸಭೆ ನಡೆಯುತ್ತಿದ್ದರೂ ಇಬ್ಬರು ಶಾಸಕರು ಬಿಟ್ಟರೆ ಉಳಿದ ಶಾಸಕರು ಗೈರು ಹಾಜರಾಗಿರುವುದು ಕಂಡು ಬಂತು. ಸಭೆಯಲ್ಲಿ ಹೆಚ್ಚಾಗಿ ಚಿಂಚೋಳಿ, ಆಳಂದ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಚರ್ಚೆಯಾಯಿತು. ಸಭೆಯಲ್ಲಿ ಶಾಸಕರಾದ ಬಸವರಾಜ ಮತ್ತಿಮಡು, ಬಿ.ಜಿ.ಪಾಟೀಲ್, ಜಿಲ್ಲಾಧಿಕಾರಿ ವಿ.ವಿ‌.ಜೋತ್ಸ್ನಾ, ಜಿ.ಪಂ ಸಿಇಓ ದಿಲಿಶ್ ಸಸಿ ಸರಿದಂತೆ ಮುಂತಾದವರಿದ್ದರು.



Read more

[wpas_products keywords=”deal of the day sale today offer all”]