Karnataka news paper

2022ರಲ್ಲಿ ಹಣ ಗಳಿಸಬೇಕೆ?, ಹೂಡಿಕೆ ಈ ರೀತಿ ಮಾಡಿ


Personal Finance

|

ಷೇರು ಮಾರುಕಟ್ಟೆಗಳು ಮಾರ್ಚ್ 2020ರಿಂದ ದೊಡ್ಡ ಪ್ರಮಾಣದಲ್ಲಿ ಕುಸಿತ ಕಂಡಿದೆ. ಆಸ್ತಿ ಮೌಲ್ಯಗಳಲ್ಲಿ ಅಷ್ಟೇ ವೇಗವಾಗಿ ಏರಿಕೆ ಕಂಡು ಬಂದಿದೆ. ಅಲ್ಪಾವಧಿಯ ತೊಂದರೆಗಳು ಏನೇ ಇದ್ದರೂ, ಈಕ್ವಿಟಿಗಳು ದೀರ್ಘಾವಧಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ನಾವು 2021ರಲ್ಲಿ ನೋಡಿದಾಗ ಷೇರು ಮಾರುಕಟ್ಟೆಯಲ್ಲಿ ಈ ಏರಿಳಿತ ಮುಂದುವರಿದಿದೆ. ಷೇರು ಮಾರುಕಟ್ಟೆ ಸ್ಥಿರವಲ್ಲ, ಬೆಲೆಗಳು ಕೆಳಕ್ಕೆ ಕುಸಿಯುತ್ತದೆ ಎಂಬುವುದು ಖಚಿತವಾಗಿದೆ.

2020 ಮತ್ತು 2021 ರಿಂದ ನಾವು ಕಲಿತ ಪ್ರಮುಖ ಪಾಠಗಳಿವೆ. ಈ ಹೊಸ ವರ್ಷ 2022ರಲ್ಲಿ ನಾವು ಹೂಡಿಕೆ ಮಾಡುವಾಗ ಯಾವ ಕ್ಷೇತ್ರದಲ್ಲಿ ಹೂಡಿಕೆ ಮಾಡಬೇಕು ಎಂಬುವುದನ್ನು ತಿಳಿದಿರಬೇಕು. ಯಾವ ಕ್ಷೇತ್ರದಲ್ಲಿ ಹೂಡಿಕೆ ಮಾಡಿದಾಗ ನೀವು ಈ ವರ್ಷ ಹೆಚ್ಚು ಹಣ ಗಳಿಸಬಹುದು ಎಂಬುವುದನ್ನು ತಿಳಿಯುವುದು ಕೂಡಾ ಮುಖ್ಯವಾಗಿದೆ.

ಬಜೆಟ್‌ 2022: ಪ್ರೀಮಿಯಂ, ತೆರಿಗೆ-ಮುಕ್ತ ವರ್ಷಾಶನಕ್ಕಾಗಿ ಜೀವ ವಿಮಾದಾರರ ಆಗ್ರಹ

ಈಕ್ವಿಟಿ ಮ್ಯೂಚುವಲ್ ಫಂಡ್‌ಗಳ ಮೂಲಕ ಹೂಡಿಕೆ ಮಾಡುವ ಈಕ್ವಿಟಿ ಹೂಡಿಕೆದಾರರಿಗೆ 2022ರಲ್ಲಿ ಕೊಂಚ ತೊಂದರೆ ಉಂಟು ಮಾಡಲಾರದು. 2022ರಲ್ಲಿ ನೀವು ಬೇರೆ ಬೇರೆ ಕ್ಷೇತ್ರಗಳಲ್ಲಿ ಹೂಡಿಕೆಯನ್ನು ಮಾಡಬೇಕಾಗುತ್ತದೆ. ನೀವು ಈ ವರ್ಷ ಯಾವ ಕ್ಷೇತ್ರದಲ್ಲಿ ಅಧಿಕ ಹೂಡಿಕೆ ಮಾಡಿದರೆ ಹೆಚ್ಚು ಹಣವನ್ನು ಗಳಿಸಲು ಸಾಧ್ಯವಾಗುತ್ತದೆ ಎಂದು ತಿಳಿಯಲು ಮುಂದೆ ಓದಿ…

ಜ.17: ಕಚ್ಚಾ ತೈಲ ಬೆಲೆ, ಎಟಿಎಫ್ ಏರಿಕೆ, ಪೆಟ್ರೋಲ್, ಡೀಸೆಲ್ ಸ್ಥಿರ

 ಮಾರುಕಟ್ಟೆ ಮಟ್ಟದಲ್ಲಿ ಹೂಡಿಕೆ ಮಾಡಿ

ಮಾರುಕಟ್ಟೆ ಮಟ್ಟದಲ್ಲಿ ಹೂಡಿಕೆ ಮಾಡಿ

ದೊಡ್ಡ, ಮಧ್ಯಮ ಮತ್ತು ಸಣ್ಣ ಬಂಡವಾಳದ ಮಾರುಕಟ್ಟೆಯಲ್ಲಿ ನೀವು ಹೂಡಿಕೆಯನ್ನು ಮಾಡಬಹುದು. ಕೆಲವು ಇಕ್ವಿಟಿ ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆಯನ್ನು ಪ್ರಾರಂಭ ಮಾಡಿ. ನೀವು ಹೂಡಿಕೆ ಮಾಡಲು ದೊಡ್ಡ ಮೊತ್ತವನ್ನು ಹೊಂದಿದ್ದರೆ, ಅದನ್ನು ಸರಿಯಾಗಿ ಪರಿಶೀಲಿಸಿ ಹೂಡಿಕೆ ಮಾಡಿ. ಮಾರುಕಟ್ಟೆಯಲ್ಲಿ ಕುಸಿತ ಕಂಡು ಬಂದ ಸಂದರ್ಭದಲ್ಲಿ ಹೂಡಿಕೆಯನ್ನು ಅಧಿಕ ಮಾಡಿ, ಬಳಿಕ ಏರಿಕೆ ಆದಾಗ ಅದರ ಲಾಭ ಪಡೆಯುವ ಚಾಣಾಕ್ಷ್ಯ ನಡೆಯನ್ನು ತೋರಿಸಿ. 2022 ರ ಆರಂಭದಲ್ಲಿ, ನೀವು ತುರ್ತು ನಿಧಿಯನ್ನು ಹೊಂದಿದ್ದೀರಾ ಹಾಗೂ ನಿಮ್ಮ ಆರೋಗ್ಯ ಮತ್ತು ಜೀವ ಅಪಾಯಗಳನ್ನು ಕಡಿಮೆ ಮಾಡಲು ಬೇಕಾದ ನಿಧಿಯನ್ನು ಹೊಂದಿದ್ದೀರಾ ಎಂದು ಖಚಿತಪಡಿಸಿಕೊಳ್ಳಿ. ಅದರಿಂದಾಗಿ ನೀವು ಹೂಡಿಕೆ ಮಾಡಿದ ಹಣದ ಮೇಲೆ ಜೋತುಬೀಳಬೇಕಾದ ಸ್ಥಿತಿ ಉಂಟಾಗಲಾರದು. ನೀವು ಕುಟುಂಬಕ್ಕೆ ಆರೋಗ್ಯ ವಿಮಾ ರಕ್ಷಣೆಯನ್ನು ಖರೀದಿಸಿ. ನಿಮ್ಮ ವಾರ್ಷಿಕ ಆದಾಯದ ಕನಿಷ್ಠ 15 ಪಟ್ಟು ಅವಧಿಯ ವಿಮಾ ಯೋಜನೆಯನ್ನು ಆಯ್ಕೆಮಾಡಿ ಮತ್ತು ಪ್ರತಿ ಐದು ವರ್ಷಗಳಿಗೊಮ್ಮೆ ಅಥವಾ ಹೊಸ ಹಣಕಾಸು ವರ್ಷದ ಸಂದರ್ಭದಲ್ಲಿ ಈ ಬಗ್ಗೆ ಪರಿಶೀಲನೆ ನಡೆಸಿ. ಇನ್ನು 2-3 ವರ್ಷಗಳಲ್ಲಿ ನಿವೃತ್ತರಾಗುವ ಹೂಡಿಕೆದಾರರು ನಿಮ್ಮ ಹೂಡಿಕೆ ಖಾತೆಗಳನ್ನು ಪರಿಶೀಲನೆ ಮಾಡಿಕೊಳ್ಳಿ. ಒಟ್ಟಾರೆಯಾಗಿ ಷೇರು, ಈಕ್ವಿಟಿ ಮಾರುಕಟ್ಟೆಯಲ್ಲಿ ನೀವು ಹೂಡಿಕೆ ಮಾಡಬಹುದು. ಆದರೆ ಹೂಡಿಕೆ ಮಾಡುವಾಗ ಎಚ್ಚರಿಕೆಯಿಂದ ಎಲ್ಲಾ ಮಾಹಿತಿ ಪರಿಶೀಲನೆ ಮಾಡುವುದು ಉತ್ತಮ.

 ಡೆಬ್ಟ್‌ ಫಂಡ್‌ಗಳು

ಡೆಬ್ಟ್‌ ಫಂಡ್‌ಗಳು

ಮಾರುಕಟ್ಟೆ ಪರಿಸ್ಥಿತಿಗಳನ್ನು ಲೆಕ್ಕಿಸದೆ ಎಲ್ಲಾ ಸಮಯದಲ್ಲೂ ಆಸ್ತಿ ಹಂಚಿಕೆಯನ್ನು ನಿರ್ವಹಿಸಬೇಕು. ಪ್ರಸ್ತುತ ಸನ್ನಿವೇಶದಲ್ಲಿ, ಸಾಲದ ಫಂಡ್‌ಗಳು ಹೆಚ್ಚು ಮಾನ್ಯತೆಯನ್ನು ಪಡೆದಿದೆ. ನೀವು ಈ ಡೆಬ್ಟ್‌ ಫಂಡ್‌ ಅಥವಾ ಸಾಲ ಫಂಡ್‌ಗಳು ಎಂದರೆ ನೀವು ಮ್ಯೂಚುವಲ್‌ ಫಂಡ್‌ ಮೊದಲಾವುಗಳಲ್ಲಿ ಹೂಡಿಕೆ ಮಾಡುವುದು ಆಗಿದೆ. ಒಂದು ನಿಗದಿತ ಮೊತ್ತವನ್ನು ಹೂಡಿಕೆ ಮಾಡುವುದು ಆಗಿದೆ. ನೀವು ಈ ರೀತಿ ಹೂಡಿಕೆ ಮಾಡುವುದ ಮೂಲಕವೂ ಈ ಹೊಸ ವರ್ಷದಲ್ಲಿ ಆದಾಯವನ್ನು ಗಳಿಸಲು ಸಾಧ್ಯವಾಗುತ್ತದೆ. ಆದರೆ ನೀವು ಈ ಬಗ್ಗೆ ಮಾಹಿತಿಯನ್ನು ಸರಿಯಾಗಿ ಪರಿಶೀಲನೆ ಮಾಡಿ ಹೂಡಿಕೆ ಮಾಡಬೇಕಾಗಿದೆ. ಹೂಡಿಕೆದಾರರು ಕನಿಷ್ಠ ಮೂರು ವರ್ಷಗಳಷ್ಟು ಕಾಲದ ಫಂಡ್‌ಗಳಿಗೆ ಹೂಡಿಕೆ ಮಾಡಬೇಕಾಗುತ್ತದೆ.

 ಚಿನ್ನದ ಮೇಲೆ ಹೂಡಿಕೆ

ಚಿನ್ನದ ಮೇಲೆ ಹೂಡಿಕೆ

ಕಳೆದ ಒಂದು ವರ್ಷದಿಂದ ಚಿನ್ನವು ಬಹುತೇಕ ಒಂದೇ ಸಮನಾಗಿ ಇದೆ. ದರೆ ಹೆಚ್ಚುತ್ತಿರುವ ಹಣದುಬ್ಬರದಿಂದಾಗಿ ಹೆಚ್ಚಾಗಿ ಚಿನ್ನದ ಮೇಲಿನ ಹೂಡಿಕೆಯಿಂದ ಲಾಭವನ್ನು ಪಡೆಯುವುದು ಕಷ್ಟವೇ ಸರಿ. ನೀವು ಚಿನ್ನದ ಮೇಲೆ ಹೂಡಿಕೆ ಮಾಡಿ ಅಧಿಕ ಹಣವನ್ನು ಗಳಿಕೆ ಮಾಡಲು ಇಚ್ಛಿಸಿದರೆ, ಸವರನ್‌ ಗೋಲ್ಡ್‌ ಬಾಂಡ್‌ಗಳ ಮೇಲೆ ಹೂಡಿಕೆ ಮಾಡುವುದು ಅತ್ಯುತ್ತಮ.

 ವಿಮೆಯನ್ನು ಖರೀದಿ ಮಾಡಿ

ವಿಮೆಯನ್ನು ಖರೀದಿ ಮಾಡಿ

2022 ರ ಆರಂಭದಲ್ಲಿ, ನಿಮ್ಮ ಕುಟುಂಬದ ಗುರಿಗಳನ್ನು ರಕ್ಷಿಸಲು ನೀವು ಜೀವ ವಿಮಾ ರಕ್ಷಣೆಯನ್ನು ಕೂಡಾ ಮಾಡಿಕೊಳ್ಳುವುದು ಉತ್ತಮ. ನೀವು ಅನಿರೀಕ್ಷಿತವಾಗಿ ಉಂಟಾಗುವ ಆರೋಗ್ಯ ಸಮಸ್ಯೆಗಾಗಿ ಅಧಿಕ ಖರ್ಚು ಮಾಡುವ ಬದಲಾಗಿಸ ವಾರ್ಷಿಕ ಆದಾಯದಲ್ಲಿ ಕನಿಷ್ಠ 15ರಷ್ಟು ಈ ಜೀವ ವಿಮೆಗೆ ಮುಡಿಪಾಗಿಟ್ಟರೆ, ಸಂಕಷ್ಟ ಉಂಟಾದಾಗ ತಲೆ ಕೆಟ್ಟಿಸಿಕೊಳ್ಳಬೇಕಾಗಿಲ್ಲ. ನೀವು ಈ ರೀತಿ ಹೂಡಿಕೆ ಮಾಡಿ ನಿಮ್ಮ ಹಣವನ್ನು ಉಳಿಸುವ ಮೂಲಕ ಹಣ ಗಳಿಸಬಹುದು ಅಲ್ಲವೇ?. ಈ ಜೀವ ವಿಮೆಯನ್ನು ನೀವು ಐದು ವರ್ಷಗಳಿಗೊಮ್ಮೆ ಪರಿಶೀಲನೆ ಮಾಡಬೇಕು.

English summary

Investing Steps for Making Money Systematically in 2022, in Kannada

Investing steps for making money systematically in 2022, In Kannada.

Story first published: Monday, January 17, 2022, 14:05 [IST]



Read more…

[wpas_products keywords=”deal of the day”]