Karnataka news paper

ಬಿಸಿಯೂಟಕ್ಕೆ ಕಳಪೆ ಗುಣಮಟ್ಟದ ಬೇಳೆಕಾಳು ಸರಬರಾಜು; ಸಿದ್ದರಾಮಯ್ಯ ಆಕ್ರೋಶ


ಬೆಂಗಳೂರು: ಶಾಲಾ ಮಕ್ಕಳ ಬಿಸಿಯೂಟಕ್ಕೆ ಕಳಪೆ ಗುಣಮಟ್ಟದ ಬೇಳೆಕಾಳು ಸರಬರಾಜು ಮಾಡುವ ಮೂಲಕ ರಾಜ್ಯದ ಬಿಜೆಪಿ ಸರ್ಕಾರ ಮಕ್ಕಳ ಜೀವದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಫೇಸ್‌ಬುಕ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಕ್ಕಳಿಗೆ ವಿಷವುಣಿಸುವ ಈ ಕುಕೃತ್ಯದಲ್ಲಿ ಆಹಾರ ನಿಗಮದ ಅಧಿಕಾರಿಗಳೇ ಷಾಮೀಲಾಗಿದ್ದರೂ ರಾಜ್ಯದ ಬಿಜೆಪಿ ಸರ್ಕಾರ ಕಣ್ಣು ಮುಚ್ಚಿ ಕುಳಿತಿದೆ. ಶ್ರೀರಂಗ ಪಟ್ಟಣ, ಮಂಡ್ಯ, ಮದ್ದೂರು, ದಾವಣಗೆರೆ, ಬಳ್ಳಾರಿಯಲ್ಲಿ ಕಳಪೆ ಬೇಳೆ ಪೂರೈಕೆಯ ದೂರುಗಳಿದ್ದರೂ ಆಹಾರ ನಿಗಮದ ಅಧಿಕಾರಿಗಳು ಕಳಪೆ ಬೇಳೆ ಸರಬರಾಜು ಮಾಡುತ್ತಿರುವ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳದೆ ಇರುವುದಕ್ಕೆ ಏನು ಕಾರಣ? ಲಂಚದ ಹಣದಲ್ಲಿ ಯಾರೆಲ್ಲ ಪಾಲುದಾರರು? ಎಂದು ಪ್ರಶ್ನಿಸಿದ್ದಾರೆ.
‘ನೀವೇ ಮಾಸ್ಕ್‌ ಹಾಕಲ್ಲ, ಕಾರ್‌ನಲ್ಲಿ ಹೋಗೋ ನಮ್ಗೆ ಹಾಕೋಕೆ ಹೇಳ್ತೀರಾ?’; ಪೊಲೀಸರ ಜೊತೆ ವೈದ್ಯೆ ವಾದ
ಇನ್ನು ಶಾಲಾ ಮಕ್ಕಳ ಪೌಷ್ಟಿಕತೆ ವೃದ್ಧಿಗಾಗಿ ನಮ್ಮ ಸರ್ಕಾರ ಜಾರಿಗೆ ತಂದಿದ್ದ ಕ್ಷೀರ ಭಾಗ್ಯ ಯೋಜನೆಯನ್ನು ಸ್ಥಗಿತಗೊಳಿಸಿದ್ದ ಸರ್ಕಾರ, ಮೊಟ್ಟೆ ಖರೀದಿಯಲ್ಲಿಯೂ ಕಮಿಷನ್ ನುಂಗಿದ ಆರೋಪ ಕೇಳಿ ಬಂದಿತ್ತು. ಈಗ ಮಕ್ಕಳ ಅನ್ನದ ತಟ್ಟೆಗೆ ಕೈ ಹಾಕಿದೆ. ಈ ಸಚಿವರು, ಅಧಿಕಾರಿಗಳು ಹೊಟ್ಟೆಗೆ ಏನು ತಿನ್ನುತ್ತಿದ್ದಾರೆ? ಕಳಪೆ ಗುಣಮಟ್ಟದ ಬೇಳೆ ಸರಬರಾಜು ಮಾಡುತ್ತಿರುವ ಕಂಪನಿಗಳನ್ನು ತಕ್ಷಣ ಬ್ಲಾಕ್ ಲೀಸ್ಟ್ ಗೆ ಸೇರಿಸಬೇಕು ಮತ್ತು ಕಂಪನಿಗಳ ಜೊತೆ ಷಾಮೀಲಾಗಿ ಭ್ರಷ್ಟಾಚಾರ ಎಸಗಿರುವ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.



Read more

[wpas_products keywords=”deal of the day sale today offer all”]