ಹೈಲೈಟ್ಸ್:
- ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ 3 ಮಕ್ಕಳ ಸಾವು ಪ್ರಕರಣ
- ತನಿಖೆ ನಡೆಸಿ ವರದಿ ನೀಡಲು ಕೆ. ಸುಧಾಕರ್ ಸೂಚನೆ
- ಎರಡು ದಿನಗಳಲ್ಲಿ ವರದಿ ಕೊಡಲು ಸೂಚನೆ
ಈ ಘಟನೆಯ ಹಿನ್ನೆಲೆಯಲ್ಲಿ ಇಬ್ಬರು ಅಧಿಕಾರಿಗಳು ಸಸ್ಪೆಂಡ್ ಮಾಡಲು ಸೂಚನೆ ನೀಡಲಾಗಿದೆ. ಅಲ್ಲಿನ ANM ಮತ್ತು ಫಾರ್ಮಸಿಸ್ಟ್ ರನ್ನ ತಕ್ಷಣ ಅಮಾನತು ಮಾಡಲು ಸೂಚನೆ ನೀಡಿದ್ದೇನೆ. ನೋಡಲ್ ಅಧಿಕಾರಿಯನ್ನು ತನಿಖೆಗೆ ಕಳುಹಿಸುತ್ತಿದ್ದೇನೆ. ಪ್ರೊಟೋಕಾಲ್ ಪ್ರಕಾರ ಚಿಕಿತ್ಸೆ ನೀಡಿದ್ದಾರಾ ಅಂತ ತನಿಖೆ ಮಾಡಲಾಗುತ್ತೆ. ಎರಡು ದಿನಗಳಲ್ಲಿ ವರದಿ ನೀಡಲು ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ದಂಡಕ್ಕೆ ಆಸಕ್ತಿ, ಸೌಲಭ್ಯಕ್ಕೆ ನಿರಾಸಕ್ತಿ; ಬೆಂಗಳೂರು ಸಂಚಾರ ಪೊಲೀಸರ ನಡೆ ಬಗ್ಗೆ ಸಾರ್ವಜನಿಕರ ಅಸಮಾಧಾನ!
ಇದೇ ಸಂದರ್ಭದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಸಭೆ ಕರೆದಿರುವ ಬಗ್ಗೆ ಮಾತನಾಡಿ, ಪಾಸಿಟಿವ್ ಕೇಸ್, ಆಸ್ಪತ್ರೆಗೆ ಸೇರ್ಪಡೆ, ಮಕ್ಕಳ ಸ್ಥಿತಿಗತಿ ಬಗ್ಗೆ ಸಭೆ ಆಗುತ್ತೆ. ತಜ್ಞರು, ಸಚಿವರು ಸಭೆಯಲ್ಲಿ ಇರುತ್ತಾರೆ. ತಜ್ಞರ ಸಭೆ ಬಳಿಕ ನಿರ್ಧಾರ ಘೋಷಣೆ ಮಾಡ್ತೀವಿ. ವೀಕೆಂಡ್ ಕರ್ಫ್ಯೂ ಬಗ್ಗೆಯೂ ಇವತ್ತಿನ ಸಭೆಯಲ್ಲಿ ಚರ್ಚೆ ಮಾಡ್ತೀವಿ ಎಂದರು.
ನಾವು ಎಲ್ಲಾ ಕ್ರಮ ತೆಗೆದುಕೊಂಡಿದ್ದೇವೆ. ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಅಗತ್ಯ ಕ್ರಮ ತಗೋಳ್ಳೋದು ನಮ್ಮ ಕೆಲಸ. ಹೆಚ್ಚು ಸಾವು ನೋವು ಆಗಬಾರದು ಅನ್ನೋದು ನಮ್ಮ ಆದ್ಯತೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತೇವೆ ಎಂದರು.
ಕಠಿಣ ನಿಯಮಗಳು ಮುಂದುವರೆಯುತ್ತಾ ಎಂಬ ವಿಚಾರವಾಗಿ, ಇವತ್ತು ಸಿಎಂ ನಡೆಸುವ ಸಭೆಯಲ್ಲಿ ತೀರ್ಮಾನವಾಗುತ್ತೆ ಎಂದರು. ರಾಜ್ಯದಲ್ಲಿ ನೆಗಡಿ ಶೀತ ಹೆಚ್ಚಳ ವಿಚಾರ. ಇದು ಸೀಸನಲ್ ಫ್ಲೂ. ಡಿಸೆಂಬರ್ ನಿಂದ ಫೆಬ್ರವರಿ ವರೆಗೂ ಪ್ರತಿ ವರ್ಷ ಅದು ಇರುತ್ತೆ. ಯಾರಿಗೆಲ್ಲ ಈ ಲಕ್ಷಣ ಇರೋರಿಗೆ ಆದ್ಯತೆ ಮೇಲೆ ಟೆಸ್ಟ್ ಮಾಡ್ತಿದ್ದೇವೆ. ಬೇರೆ ರಾಜ್ಯಕ್ಕೆ ಹೋಲಿಸಿದ್ರೆ ನಾವು ಹೆಚ್ಚು ಟೆಸ್ಟ್ ಮಾಡ್ತಿದ್ದೇವೆ.
ಬೇರೆ ರಾಜ್ಯದಲ್ಲಿ ಒಂದು ರಾಜ್ಯ ಕಡಿಮೆ 35 ಸಾವು ತೋರಿಸಿದ್ದಾರೆ. ನಮ್ಮಲ್ಲಿ ಸಾವಿನ ಪ್ರಮಾಣ ಕಡಿಮೆ ಇದೆ. ಆಸ್ಪತ್ರೆಗೆ ಸೇರುವವರ ಪ್ರಮಾಣವೂ ಕಡಿಮೆ ಇದೆ. ನಾವು ಮುಂಚಿತವಾಗಿ ಎಲ್ಲಾ ಕ್ರಮಗಳನ್ನ ತೆಗೆದುಕೊಳ್ತಿರೋದ್ರೀಂದ ನಮ್ಮಲ್ಲಿ ನಿಯಂತ್ರಣದಲ್ಲಿ ಇದೆ ಎಂದು ತಿಳಿಸಿದರು.
Read more
[wpas_products keywords=”deal of the day sale today offer all”]