ANI
ಪಣಜಿ: ಗೋವಾ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಶನಿವಾರ 13 ಅಂಶಗಳ ಕಾರ್ಯಸೂಚಿ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. 13 ಅಂಶಗಳ ಕಾರ್ಯಾಸೂಚಿಯಲ್ಲಿ, ಶಿಕ್ಷಣ, ಆರೋಗ್ಯ, ವ್ಯಾಪಾರ ಮತ್ತು ಕೈಗಾರಿಕೆ, ಖನಿಜ ಮತ್ತು ಮೂಲಸೌಕರ್ಯ ವಲಯದಲ್ಲಿ ಪಕ್ಷ ಸುಧಾರಣೆ ತರಲುವುದಾಗಿ ಹೇಳಲಾಗಿದೆ.
ಗೋವಾ ಜನರು ಫೆಬ್ರವರಿ 14 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಎದುರು ನೋಡುತ್ತಿದ್ದು, ಎಎಪಿ ಕೂಡಾ ಹೊಸ ವಿಶ್ವಾಸದಲ್ಲಿದೆ. ಗೋವಾ ಜನರಿಗೆ ಹಿಂದೆ ಬಿಜೆಪಿ ಅಥವಾ ಕಾಂಗ್ರೆಸ್ ಹೊರತುಪಡಿಸಿ ಯಾವುದೇ ಆಯ್ಕೆ ಇರಲಿಲ್ಲ, ಅವರು ಇದೀಗ ಹತಾಶರಾಗಿದ್ದು, ಬದಲಾವಣೆ ಬಯಸುತ್ತಿದ್ದಾರೆ ಎಂದು ಕೇಜ್ರಿವಾಲ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.
13 ಕಾರ್ಯಸೂಚಿಗಳ ಅಡಿಯಲ್ಲಿ ಜನರಿಗೆ ಉದ್ಯೋಗವಕಾಶ ಅಥವಾ ಪ್ರತಿ ತಿಂಗಳು 3 ಸಾವಿರ ನಿರುದ್ಯೋಗ ಭತ್ಯೆ, ಅಲ್ಲದೇ, ಭೂಮಿ ಹಕ್ಕನ್ನು ನೀಡಲಾಗುವುದು ಎಂದು ಎಎಪಿ ಭರವಸೆ ನೀಡಿದೆ. ದೆಹಲಿಯಲ್ಲಿನ ಮೊಹಲ್ಲಾ ಕ್ಲಿನಿಕ್, ಆಸ್ಪತ್ರೆಗಳು ಎಲ್ಲಾ ಹಳ್ಳಿಗಳಲ್ಲಿ ತೆರೆಯಲಾಗುವುದು, ರೈತರೊಂದಿಗೆ ಸಮಾಲೋಚಿಸಿದ ಬಳಿಕ ಅವರ ಸಮಸ್ಯೆಗಳನ್ನು ಪರಿಹರಿಸಲಾಗುವುದು ಎಂದು ಕೇಜ್ರಿವಾಲ್ ತಿಳಿಸಿದರು.
18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಮಹಿಳೆಯರಿಗೂ 1 ಸಾವಿರ ರೂ. ನೀಡಲಾಗುವುದು, ರಸ್ತೆ ಗಳ ಗುಣಮಟ್ಟ ಸರಿಪಡಿಸಲಾಗುವುದು, ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಉಚಿತ ಶಿಕ್ಷಣ ನೀಡಲಾಗುವುದು, ಒಂದು ವೇಳೆ ಎಎಪಿ ಅಧಿಕಾರಕ್ಕೆ ಬಂದು ಐದು ವರ್ಷ ಪೂರ್ಣಗೊಳಿಸಿದರೆ ಗೋವಾದಲ್ಲಿನ ಪ್ರತಿಯೊಂದು ಕುಟುಂಬ ರೂ. 10 ಲಕ್ಷ ಪ್ರಯೋಜನ ಪಡೆಯಲಿದೆ ಎಂದು ಕೇಜ್ರಿವಾಲ್ ಭರವಸೆ ನೀಡಿದರು.
Read more
[wpas_products keywords=”deal of the day”]