ಹೈಲೈಟ್ಸ್:
- ಗಗನಕ್ಕೇರಿದ್ದ ತರಕಾರಿಗಳ ದರ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ
- ಕೆಲ ತಿಂಗಳ ಹಿಂದೆ ನಿರಂತರ ಮಳೆಯಿಂದಾಗಿ ಬೆಳೆಗಳು ನಾಶವಾಗಿದ್ದವು
- ಸಂಕ್ರಾಂತಿ ಸುಗ್ಗಿಯೊಂದಿಗೆ ಎಲ್ಲೆಡೆ ಸಮೃದ್ಧವಾಗಿ ಬೆಳೆಗಳು ಬಂದಿವೆ
ಕೆಲ ತಿಂಗಳ ಹಿಂದೆ ನಿರಂತರ ಮಳೆಯಿಂದಾಗಿ ಬೆಳೆಗಳು ನಾಶವಾಗಿದ್ದವು. ಹೀಗಾಗಿ, ಮಾರುಕಟ್ಟೆಗೆ ತರಕಾರಿ ಅಗತ್ಯ ಪ್ರಮಾಣದಲ್ಲಿ ಬಾರದ ಕಾರಣ ಬೆಲೆಗಳು ಏರಿಕೆಯಾಗಿದ್ದವು. ಹಲವು ತರಕಾರಿಗಳ ಬೆಲೆ ನೂರು ರೂ. ಆಸುಪಾಸಿಗೆ ತಲುಪಿತ್ತು. ಸಂಕ್ರಾಂತಿ ಸುಗ್ಗಿಯೊಂದಿಗೆ ಎಲ್ಲೆಡೆ ಸಮೃದ್ಧವಾಗಿ ಬೆಳೆಗಳು ಬಂದಿವೆ. ಹೀಗಾಗಿ ದರಗಳು ಇಳಿದಿವೆ.
ಇಳಿದ ಸೊಪ್ಪಿನ ದರ
ಎಲ್ಲಾ ಬಗೆಯ ಸೊಪ್ಪುಗಳ ದರ ಇಳಿಕೆಯಾಗಿದೆ. ಆದರೆ ಕರಿಬೇವಿನ ದರ ಮಾತ್ರ ಏರಿಕೆಯಾಗಿದೆ. 5 ರೂ.ಗೆ ಒಂದು ಕಂತೆ ಸಿಗುತ್ತಿದ್ದ ಕರಿಬೇವು ಇದೀಗ 10 ರೂ.ಗೆ ಏರಿದೆ. ಚಳಿಗಾಲವಾಗಿರುವುದರಿಂದ ಕರಿಬೇವಿನ ಮರದ ಎಲೆಗಳೂ ಉದುರುತ್ತಿವೆ. ಹೊಸ ಚಿಗುರು ಬರುವವರೆಗೆ ದರ ಏರಿಕೆ ಮುಂದುವರಿಯುತ್ತದೆ ಎನ್ನುತ್ತಾರೆ ಹಾಪ್‌ಕಾಮ್ಸ್ ಸಿಬ್ಬಂದಿ.
ಹಾಪ್‌ಕಾಮ್ ನಲ್ಲಿ ಕೆ.ಜಿ. ಕರಿಬೇವು 103 ರೂ., ಮೆಂತ್ಯ ಸೊಪ್ಪು 42 ರೂ., ದಂಟಿನ ಸೊಪ್ಪು 43 ರೂ., ಪುದೀನ-34 ರೂ., ಸಬ್ಬಕ್ಕಿ ಸೊಪ್ಪು 56 ರೂ., ಚಕ್ಕೋತ ಸೊಪ್ಪು – 60 ರೂ. ಇದೆ.
ಹಾಪ್‌ಕಾಮ್ ನಲ್ಲಿ ತರಕಾರಿ ದರ (ಕೆ.ಜಿ.ಗಳಲ್ಲಿ)
- ಬೀನ್ಸ್- 45 ರೂ.
- ಬಿಳಿ ಬದನೆಕಾಯಿ – 68 ರೂ.
- ಗುಂಡು ಬದನೆಕಾಯಿ -63 ರೂ.
- ಬೀಟ್‌ರೂಟ್ -88 ರೂ.
- ಹಾಗಲಕಾಯಿ- 48 ರೂ.
- ಸೀಮೆಬದನೆಕಾಯಿ- 20 ರೂ.
- ದಪ್ಪ ಮೆಣಸಿನಕಾಯಿ -70 ರೂ.
- ಬಜ್ಜಿ ಮೆಣಸಿನಕಾಯಿ- 60 ರೂ.
- ಬೆಂಡೆಕಾಯಿ -68 ರೂ.
- ಊಟಿ ಕ್ಯಾರಟ್ 105 ರೂ.
- ಡೆಲ್ಲಿ ಕ್ಯಾರಟ್ -67 ರೂ.
- ಎಲೆಕೋಸು 54 ರೂ.
- ನುಗ್ಗೆಕಾಯಿ -260 ರೂ.
- ಸಿಹಿ ಕುಂಬಳ -28 ರೂ.
- ಮೂಲಂಗಿ -24 ರೂ.
- ಟೊಮೇಟೊ -36 ರೂ.
- ಏಲಕ್ಕಿ ಬಾಳೆ -44 ರೂ.
- ಪಚ್ಚಬಾಳೆ- 22 ರೂ.
- ಮೂಸಂಬಿ- 80 ರೂ.
Read more
[wpas_products keywords=”deal of the day sale today offer all”]