ಹೈಲೈಟ್ಸ್:
- ಸಂಪುಟ ಪುನಾರಚನೆಗೆ ಒಪ್ಪಿಗೆ ಪಡೆಯಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಯತ್ನ
- ವರಿಷ್ಠರಿಂದ ಅನುಮತಿ ಸಿಕ್ಕರೆ ಶಿವರಾತ್ರಿಯೊಳಗೆ ಸಂಪುಟ ಪುನಾರಚನೆ ಮಾಡುವ ಸಾಧ್ಯತೆ
- ಸಂಪುಟ ಸೇರ್ಪಡೆಗೊಳ್ಳಲು ಕಾಯುತ್ತಿದ್ದಾರೆ ಹಲವು ಆಕಾಂಕ್ಷಿಗಳು
ಸಂಪುಟ ವಿಸ್ತರಣೆ ಹಾಗೂ ಕೆಲ ನಾಯಕರನ್ನ ಸಂಪುಟದಿಂದ ಕೈಬಿಟ್ಟು ಪಕ್ಷ ಸಂಘಟನೆಗೆ ರವಾನೆ ಮಾಡಲು ನಡೆಸಲು ಬಿಜೆಪಿ ಹೈಕಮಾಂಡ್ ಸಮ್ಮತಿ ತರಲು ದಿಲ್ಲಿಗೆ ಹೋಗಲು ಸಿ ಎಂ ನಿರ್ಧರಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಮತ್ತೆ ಆರೆಸ್ಸೆಸ್ ಮುಖಂಡರನ್ನು ಭೇಟಿಯಾದ ರಮೇಶ್ ಜಾರಕಿಹೊಳಿ; ಸಚಿವ ಸ್ಥಾನಕ್ಕೆ ಲಾಬಿ?
ಬೊಮ್ಮಾಯಿ ಕೈಯಲ್ಲಿ 11 ಮಂದಿಯ ಪಟ್ಟಿ?
ಸದ್ಯ ಸಂಪುಟದಲ್ಲಿ 4 ಸ್ಥಾನಗಳಷ್ಟೇ ಖಾಲಿ ಇವೆ. ಆದರೆ ಈ ನಾಲ್ಕು ಸ್ಥಾನಗಳಿಗೆ ಸಾಕಷ್ಟು ಆಕಾಂಕ್ಷಿಗಳು ಇದ್ದಾರೆ. ಈ ನಿಟ್ಟಿನಲ್ಲಿ ವಿಸ್ತರಣೆಗಿಂತ ಪುನಾರಚನೆ ಸಾಧ್ಯತೆ ಹೆಚ್ಚಾಗಿದೆ. ಸದ್ಯ 11 ಮಂದಿಯ ಪಟ್ಟಿಯೂ ಸಿಎಂ ಬಳಿ ಇದೆ ಎಂದು ತಿಳಿದುಬಂದಿದೆ. ಆದರೆ ಈ ಪಟ್ಟಿಯಲ್ಲಿ ಯಾರ್ಯಾರು ಇದ್ದಾರೆ ಎಂಬುವುದು ಸದ್ಯಕ್ಕೆ ಕುತೂಹಲ ಕೆರಳಿಸಿದೆ.
ಸಂಪುಟ ಪುನಾರಚನೆಗೆ ಒಪ್ಪಿಗೆ ಪಡೆಯಲು ಮುಖ್ಯಮಂತ್ರಿಯಿಂದ ಪ್ರಯತ್ನ ಮಾಡುತ್ತಿದ್ದು,ವರಿಷ್ಠರಿಂದ ಅನುಮತಿ ಸಿಕ್ಕರೆ ಶಿವರಾತ್ರಿಯೊಳಗೆ ಸಂಪುಟ ಪುನಾರಚನೆ ಮಾಡುವ ಸಾಧ್ಯತೆ ಇದೆ. 6 ರಿಂದ 7 ಸಚಿವರನ್ನ ಕೈಬಿಟ್ಟು ಹೊಸಬರಿಗೆ ಅವಕಾಶ ನೀಡುವ ಸಾಧ್ಯತೆ ಇದೆ.
ಶಾಸಕರಾದ ಬಸನಗೌಡ ಯತ್ನಾಳ್, ಅರವಿಂದ ಬೆಲ್ಲದ್, ಎಂ.ಪಿ.ರೇಣುಕಾಚಾರ್ಯ, ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ, ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ್, ರಾಜ್ ಕುಮಾರ್ ಪಾಟೀಲ್ ಸೇಡಂ,ಪೂರ್ಣಿಮಾ ಶ್ರೀನಿವಾಸ್, ರಾಮದಾಸ್, ಪ್ರೀತಂಗೌಡ, ರಾಜುಗೌಡ, ಶಿವನಗೌಡ ನಾಯಕ್, ತಿಪ್ಪಾರೆಡ್ಡಿ ,ರಾಮಣ್ಣ ಲಮಾಣಿ ಸೇರಿ ಹಲವರು ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.
ಇಷ್ಟೇ ಅಲ್ಲದೆ ಶಾಸಕ ರಮೇಶ್ ಜಾರಕಿಹೊಳಿ ತಾನೂ ಸಂಪುಟದಲ್ಲಿ ಸೇರಲು ಲಾಬಿ ನಡೆಸುತ್ತಿದ್ದು, ತಮಗೆ ಸಿಗದಿದ್ದಲ್ಲಿ ತಮ್ಮ ಸಹೋದರ ಬಾಲಚಂದ್ರ ಜಾರಕಿಹೊಳಿಗೆ ಹಾಗೂ ತಮ್ಮ ಅಪ್ತ ಮಹೇಶ್ ಕುಮ್ಠಳ್ಳಿಗೆ ಸಚಿವ ಸ್ಥಾನ ಕೊಡಿಸಲು ಪ್ರಯತ್ನ ಮಾಡುತ್ತಿದ್ದಾರೆ. ಸದ್ಯ ಸಿ ಎಂ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದ್ದು ಒಂದು ವೇಳೆ ನೆಗೆಟಿವ್ ಬಂದರೆ ಇನ್ನುಳಿದ ಒಂದು ವಾರದ home isolation ಅವಧಿ ಮುಗಿಸಿ ದಿಲ್ಲಿಗೆ ಪ್ರಯಾಣ ಮಾಡುವ ಸಾಧ್ಯತೆ ಇದೆ.
Read more
[wpas_products keywords=”deal of the day sale today offer all”]