Karnataka news paper

ಉತ್ತರ ಪ್ರದೇಶ ಚುನಾವಣೆ: ಓವೈಸಿಯ ಎಐಎಂಐಎಂ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ 


Online Desk

ಲಖನೌ: ಅಸಾದುದ್ದೀನ್ ಓವೈಸಿ ಪಕ್ಷ ಆಲ್ ಇಂಡಿಯಾ ಮಜ್ಲಿಸ್ -ಎ- ಇತ್ತೆ ಹಾದುಲ್ ಮುಸ್ಲಿಮೀನ್ ( ಎಐಎಂಐಎಂ) ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮೊದಲ ಪಟ್ಟಿಯಲ್ಲಿ 9 ಸ್ಥಾನಗಳ ಅಭ್ಯರ್ಥಿಗಳ ಹೆಸರಿದೆ. ಇದರಲ್ಲಿ ಮೊದಲ ಹಂತದ 8 ಅಭ್ಯರ್ಥಿಗಳು ಮತ್ತು ಎರಡನೇ ಹಂತದಲ್ಲಿ ಒಬ್ಬ ಅಭ್ಯರ್ಥಿ ಸೇರಿದ್ದಾರೆ.

ಉತ್ತರ ಪ್ರದೇಶದ 100 ವಿಧಾನಸಭಾ ಸ್ಥಾನಗಳಲ್ಲಿ ಅಸಾದುದ್ದೀನ್ ಓವೈಸಿ ಪಕ್ಷ ಸ್ಪರ್ಧಿಸುತ್ತಿದೆ. 9 ಅಭ್ಯರ್ಥಿಗಳ ಘೋಷಣೆಯೊಂದಿಗೆ ರಾಜ್ಯದಲ್ಲಿ ಮೈತ್ರಿ ರಾಜಕಾರಣದ ತತ್ವ ಸಿದ್ಧಾಂತಕ್ಕೂ ತೆರೆ ಬಿದ್ದಂತಾಗಿದೆ. ಅಸಾದುದ್ದೀನ್ ಓವೈಸಿ ಅವರು ಸಮಾಜವಾದಿ ಪಕ್ಷದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದರು ಮತ್ತು ಆ ಪಕ್ಷದೊಂದಿಗೆ ಮೈತ್ರಿ ಬಯಸಿದ್ದರು. ಆದರೆ, ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಓವೈಸಿ ಪಕ್ಷವನ್ನು ನಂಬಲಿಲ್ಲ. ಈಗ ಚುನಾವಣಾ ಕಣದಲ್ಲಿ ಎಐಎಂಐಎಂ ಏಕಾಂಗಿಯಾದಂತಾಗಿದೆ. 

ಉತ್ತರ ಪ್ರದೇಶದಲ್ಲಿ ಮುಸ್ಲಿಂ ಸಮುದಾಯದ 9 ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಎಐಎಂಐಎಂ ಘೋಷಿಸಿದ್ದು, ಮುಸ್ಲಿಂ ಮತಗಳ ರಾಜಕಾರಣದಲ್ಲಿ ಅಸಾದುದ್ದೀನ್ ಓವೈಸಿ ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.



Read more

[wpas_products keywords=”deal of the day”]