Karnataka news paper

ಬಜೆಟ್‌ 2022: ಪ್ರೀಮಿಯಂ, ತೆರಿಗೆ-ಮುಕ್ತ ವರ್ಷಾಶನಕ್ಕಾಗಿ ಜೀವ ವಿಮಾದಾರರ ಆಗ್ರಹ


Personal Finance

|

ಜೀವ ವಿಮಾ ಉದ್ಯಮವು ಸೆಕ್ಷನ್ 80 (ಸಿ) ಅಡಿಯಲ್ಲಿ ತೆರಿಗೆ ರಿಯಾಯಿತಿಗಾಗಿ ಪ್ರತ್ಯೇಕ ಬಜೆಟ್‌ ಘೋಷಣೆಯನ್ನು ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಿದೆ. ಫೆಬ್ರವರಿಯಲ್ಲಿ ಅನಾವರಣಗೊಳ್ಳಲಿರುವ ಮುಂದಿನ ಕೇಂದ್ರ ಬಜೆಟ್‌ಗೆ ತನ್ನ ಬೇಡಿಕೆಯ ಭಾಗವಾಗಿ ಚಂದಾದಾರರ ಪ್ರಯೋಜನಕ್ಕಾಗಿ ವರ್ಷಾಶನ ತೆರಿಗೆ ಮುಕ್ತವಾಗಬೇಕು ಎಂಬ ಬೇಡಿಕೆಯನ್ನು ಕೂಡಾ ಜೀವ ವಿಮಾ ಉದ್ಯಮವು ಇರಿಸಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು ತಮ್ಮ ನಾಲ್ಕನೇ ಬಜೆಟ್ ಅನ್ನು ಮಂಡಿಸಲು ಸಿದ್ಧರಾಗಿದ್ದಾರೆ. ಅದಕ್ಕೆ ಇನ್ನು ಕೆಲವೇ ವಾರಗಳು ಇದೆ. ಈ ನಡುವೆ 2022 ರ ಬಜೆಟ್‌ನಲ್ಲಿ ಏನೆಲ್ಲಾ ಘೋಷಣೆ ಆಗಬಹುದು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ.

ಬಜೆಟ್‌ 2022: ವೇತನ ಪಡೆಯುವ ವರ್ಗದ ಐದು ನಿರೀಕ್ಷೆಗಳು

ತೆರಿಗೆ ರಿಯಾಯಿತಿಗಳಿಗೆ ರೂ 1,50,000 ಮಿತಿಯು ಸರಿಯಲ್ಲ. ಇದು ಜೀವ ವಿಮಾ ಕಂತುಗಳಿಗೆ (ತೆರಿಗೆ ವಿನಾಯಿತಿಯ ಸಂಪೂರ್ಣ ಪ್ರಯೋಜನವನ್ನು ಪಡೆಯಲು) ಹೆಚ್ಚು ಪ್ರಯೋಜನವನ್ನು ನೀಡಲಾರದು ಎಂದು ಏಜಿಯಾಸ್ ಫೆಡರಲ್ ಜೀವ ವಿಮೆಯ ಮುಖ್ಯಸ್ಥ ಕಾರ್ತಿಕ್ ರಾಮನ್ ಪಿಟಿಐಗೆ ತಿಳಿಸಿದರು.

ಬಜೆಟ್‌ 2022: ಪ್ರೀಮಿಯಂ, ತೆರಿಗೆ-ಮುಕ್ತ ವರ್ಷಾಶನಕ್ಕಾಗಿ ಜೀವ ವಿಮಾದಾರರ ಆಗ್ರಹ

“ನಾವು ರಿಯಾಯಿತಿಯ ವಿಷಯದಲ್ಲಿ ತೆರಿಗೆ ಪ್ರಯೋಜನಕ್ಕೆ ಪ್ರತ್ಯೇಕ ಘೋಷಣೆ ಮಾಡಲು ಅಥವಾ ಖಾತೆ ರಚನೆ ಮಾಡಬೇಕು ಎಂದು ಬಯಸುತ್ತೇವೆ. ಏಕೆಂದರೆ ಸೆಕ್ಷನ್ 80 (ಸಿ) 1,50,000 ರೂಗಳ ಮಿತಿಯನ್ನು ಹೊಂದಿದೆ. ಪಿಪಿಎಫ್ ಅದರ ಭಾಗವಾಗಿದೆ. ಒಬ್ಬರು ಗೃಹ ಸಾಲವನ್ನು ಹೊಂದಿದ್ದರೆ ನಂತರ ಎಲ್ಲಾ ಪ್ರಾಯೋಗಿಕ ಉದ್ದೇಶಗಳಿಗಾಗಿ ಹೋಗಲಿದೆ. ಆದ್ದರಿಂದ ನಾವು ತೆರಿಗೆ ರಿಯಾಯಿತಿಗಳಿಗಾಗಿ ಜೀವ ವಿಮೆಯಲ್ಲಿ ಹೂಡಿಕೆಗಾಗಿ ಪ್ರತ್ಯೇಕ ಹಣವನ್ನು ಮೀಸಲಿಡಲು ಬಯಸುತ್ತೇವೆ,” ಎಂದು ಉದ್ಯಮದ ಪರವಾಗಿ ಹೇಳಿಕೆಯನ್ನು ಏಜಿಯಾಸ್ ಫೆಡರಲ್ ಜೀವ ವಿಮೆಯ ಮುಖ್ಯಸ್ಥ ಕಾರ್ತಿಕ್ ರಾಮನ್ ನೀಡಿದ್ದಾರೆ.

ವರ್ಷಾಶನಕ್ಕೆ ತೆರಿಗೆ ವಿಧಿಸುವುದು ಸರಿಯಲ್ಲ

ಅಲ್ಲದೆ, ಉದ್ಯಮವು ವರ್ಷಾಶನವನ್ನು ತೆರಿಗೆ ರಿಯಾಯಿತಿಯ ಅಡಿಯಲ್ಲಿ ತರಲು ಆಗ್ರಹ ಮಾಡಿದೆ. ಇಂದು, ಸ್ವೀಕರಿಸುವವರ ಅಥವಾ ವರ್ಷಾಶನ ನೀಡುವವರ ಕೈಯಲ್ಲಿರುವ ವರ್ಷಾಶನವು ತೆರಿಗೆಯ ಅಡಿಯಲ್ಲಿ ಬರುತ್ತದೆ. ವರ್ಷಾಶನವನ್ನು ಸಂಬಳವಾಗಿ ನೋಡಲಾಗುತ್ತದೆ. ಆದ್ದರಿಂದ ಇದು ತೆರಿಗೆಗೆ ಒಳಪಟ್ಟಿರುತ್ತದೆ. ಆದಾಗ್ಯೂ, ಸಾಮಾನ್ಯವಾಗಿ ವರ್ಷಾಶನವನ್ನು ಸಾಮಾನ್ಯ ಆದಾಯದ ಮೂಲವನ್ನು ಹೊಂದಿಲ್ಲದವರು ಪಡೆದುಕೊಳ್ಳುತ್ತಾರೆ. ಸಾಮಾನ್ಯ ಆದಾಯದ ಮೂಲ ಹೊಂದಿಲದವರು ವರ್ಷಾಶನವನ್ನು ಆದಾಯದ ಪರ್ಯಾಯ ಮೂಲವಾಗಿ ನೋಡುತ್ತಾರೆ.

“ಜೀವನದ ವೆಚ್ಚ ಮಾತ್ರ ಹೆಚ್ಚುತ್ತಿದೆ. ಆದಾಯದಲ್ಲಿ ಯಾವುದೇ ಹೆಚ್ಚಳ ಆಗುತ್ತಿಲ್ಲ. ಹಾಗಿರುವಾಗ ಅವರಿಗೆ ತೆರಿಗೆ ವಿಧಿಸುವುದು ಸರಿಯಲ್ಲ. ವರ್ಷಾಶನವನ್ನು ಸಹ ಸೆಕ್ಷನ್ 10 (10D) ಅಡಿಯಲ್ಲಿ ಪರಿಗಣಿಸಬಹುದು ಮತ್ತು ತೆರಿಗೆ ಮುಕ್ತಗೊಳಿಸಬಹುದು ಎಂದು ನಾವು (ಸರ್ಕಾರಕ್ಕೆ) ವಿನಂತಿಸುತ್ತಿದ್ದೇವೆ,” ಎಂದು ಕೂಡಾ ಏಜಿಯಾಸ್ ಫೆಡರಲ್ ಜೀವ ವಿಮೆಯ ಮುಖ್ಯಸ್ಥ ಕಾರ್ತಿಕ್ ರಾಮನ್ ತಿಳಿಸಿದ್ದಾರೆ.

“ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 10 (10D) ಬೋನಸ್ ಸೇರಿದಂತೆ ಜೀವ ವಿಮಾ ಪ್ರಯೋಜನಗಳಿಗೆ ವಿನಾಯಿತಿ ನೀಡುತ್ತದೆ. ಸರ್ಕಾರವು ಈ ಮನವಿಯನ್ನು ಪರಿಗಣಿಸಿದರೆ ಉದ್ಯಮವು ಎರಡು ವಿಷಯಗಳಿಂದಾಗಿ ತುಂಬಾ ಸಂತೋಷಪಡುತ್ತದೆ. ಆ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು. ವಿಮಾ ಪ್ರೀಮಿಯಂ ಅನ್ನು ಸೆಕ್ಷನ್ 80 (ಡಿ) ಅಡಿಯಲ್ಲಿ ಒಟ್ಟಾರೆ ತೆರಿಗೆ ವಿನಾಯಿತಿ ಮಿತಿ ರೂ 1,50,000 ಅಡಿಯಲ್ಲಿ ವಿಲೀನಗೊಳಿಸುವ ಮೊದಲು ಅದನ್ನು ಬಿಟ್ಟುಹೋದ ಸ್ಥಳದಿಂದ ಮತ್ತೆ ಪ್ರಾರಂಭಿಸಬೇಕು,” ಎಂದು ಸರ್ಕಾರವನ್ನು ಒತ್ತಾಯ ಮಾಡಿದ್ದಾರೆ.

ಪ್ರತಿ ವರ್ಷದಂತೆ ಈ ವರ್ಷದ ಬಜೆಟ್‌ನಿಂದಲೂ ತೆರಿಗೆದಾರರು ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದಾರೆ. 2022 ರ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ತೆರಿಗೆದಾರರಿಗೆ ಗರಿಷ್ಠ ಸಡಿಲಿಕೆಯನ್ನು ನೀಡಲು ಕೇಂದ್ರವು ಗಮನಹರಿಸುತ್ತಿದೆ. ಸಂಬಳ ಪಡೆಯುವ ವರ್ಗಕ್ಕೆ ಹಲವಾರು ಒಳ್ಳೆಯ ಸುದ್ದಿಗಳನ್ನು ಕೇಂದ್ರ ಬಜೆಟ್ ನೀಡುವ ನಿರೀಕ್ಷೆ ಇದೆ. ಈ ನಡುವೆ ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಉದ್ಯೋಗಿಗಳು ಅಥವಾ ತೆರಿಗೆದಾರರು ವಿಮೆ / ಮೆಡಿಕ್ಲೈಮ್ ಪ್ರೀಮಿಯಂನಲ್ಲಿ GST ಯಲ್ಲಿ ವಿನಾಯಿತಿಯನ್ನು ನಿರೀಕ್ಷಿಸುತ್ತಿದ್ದಾರೆ.

English summary

Budget 2022: Life Insurers Seek Separate Bucket for Premium, Tax-Free Annuity

Budget 2022: Life insurers seek separate bucket for premium, tax-free annuity. ಬಜೆಟ್ 2022

Story first published: Monday, January 17, 2022, 10:39 [IST]



Read more…

[wpas_products keywords=”deal of the day”]