Online Desk
ರಾಂಚಿ: ಈತ ನಿಜವಾಗಿಯೂ ಅದೃಷ್ಟಶಾಲಿ ಎಂದು ಹೇಳಬಹುದು. ಏಕೆಂದರೆ .ಅನೇಕ ಜನರು ಕೊರೊನಾ ವೈರಸ್‌ನಿಂದ ದೈಹಿಕವಾಗಿ, ಮಾನಸಿಕವಾಗಿ ಮತ್ತು ಆರ್ಥಿಕವಾಗಿ ಬಳಲುತ್ತಿದ್ದರೆ, ಈ ವ್ಯಕ್ತಿ ಈಗಷ್ಟೇ ಪಾರ್ಶ್ವವಾಯುದಿಂದ ಚೇತರಿಸಿಕೊಂಡಿದ್ದಾನೆ. ನಾಲ್ಕು ವರ್ಷಗಳಿಂದ ತನ್ನ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ವ್ಯಕ್ತಿ ಈಗ ಗುಣಮುಖನಾಗಿದ್ದಾನೆ.
ಇದನ್ನೂ ಓದಿ: 11 ಬಾರಿ ಕೋವಿಡ್ ಲಸಿಕೆ ಪಡೆದ ವ್ಯಕ್ತಿಯಿಂದ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ!
ಇದಕ್ಕೆ ಕಾರಣವಾಗಿದ್ದು ಕೊರೊನಾ ಲಸಿಕೆ ಎನ್ನುವುದು ಆಶ್ಚರ್ಯ. ಲಸಿಕೆಯು ಪಾರ್ಶ್ವವಾಯು ಪೀಡಿತ ವ್ಯಕ್ತಿಗೆ ವರವಾಗಿ ಪರಿಣಮಿಸಿದೆ. ಹಲವಾರು ವರ್ಷಗಳಿಂದ ಹಾಸಿಗೆ ಹಿಡಿದಿದ್ದ ವ್ಯಕ್ತಿ ದೇಹದಲ್ಲಿ ಚಲನೆಗಳು ಕಂಡುಬಂದಿದೆ.
ಇದನ್ನೂ ಓದಿ: ಬಿಹಾರ: 11 ಬಾರಿ ಲಸಿಕೆ ಪಡೆದ 84ರ ಅಜ್ಜ; 12ನೇ ಬಾರಿ ಪಡೆಯುವಾಗ ಸಿಕ್ಕಿಬಿದ್ದ ಭೂಪ!
ಅಷ್ಟೇ ಅಲ್ಲದೇ ಮಾತು ಬಾರದೇ ಮೂಕನಾಗಿ ಹೋಗಿದ್ದ ವ್ಯಕ್ತಿ ಮತ್ತೆ ಮಾತನಾಡತೊಡಗಿದ್ದಾನೆ. ಇದನ್ನು ನೋಡಿದ ವೈದ್ಯರು ಆಶ್ಚರ್ಯಚಕಿತರಾಗಿದ್ದಾರೆ. ಜಾರ್ಖಂಡ್‌ನ ಬೊಕಾರೊ ಜಿಲ್ಲೆಯಲ್ಲಿ ಈ ಪವಾಡ ನಡೆದಿದೆ.
ಇದನ್ನೂ ಓದಿ: ಮಿಕ್ಸ್ ಅಂಡ್ ಮ್ಯಾಚ್ ಬೂಸ್ಟರ್ ಡೋಸ್ ಆಗುವುದಿಲ್ಲ: ಕೇಂದ್ರ ಸರ್ಕಾರ
ದುಲಾರ್ ಚಂದ್ (55) ಅವರು ನಾಲ್ಕು ವರ್ಷಗಳ ಹಿಂದೆ ರಾಜ್ಯದ ಬೊಕಾರೊ ಜಿಲ್ಲೆಯ ಪೆಟರ್ವಾರ್ ತಾಲ್ಲೂಕಿನ ಸಲ್ಗಾಡಿ ಗ್ರಾಮದಲ್ಲಿ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ತಲೆ ಮತ್ತು ಬೆನ್ನುಮೂಳೆಯ ಮೇಲೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ವೈದ್ಯರು ಅತ್ಯಂತ ಕಷ್ಟದಲ್ಲಿ ಜೀವ ಉಳಿಸಿದರು. ಅಂದಿನಿಂದ, ದುಲಾರ್ ಚಂದ್ ಅವರ ದೇಹದಲ್ಲಿನ ಅಂಗಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದ್ದವು. ಮಾತು ಕೂಡ ಬಿದ್ದು ಹೋಗಿತ್ತು.
ಇದನ್ನೂ ಓದಿ: ದೇಶದ ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಗೆ ಐಸಿಯುನಲ್ಲಿ ಚಿಕಿತ್ಸೆ ಮಂದುವರಿಕೆ
ಜನವರಿ 4ರಂದು ಅಂಗನವಾಡಿ ಕಾರ್ಯಕರ್ತೆಯರು ದುಲಾರ್ ಚಂದ್ ಮನೆಗೆ ತೆರಳಿ ಕೊವಿಶೀಲ್ಡ್ ಲಸಿಕೆ ಹಾಕಿದ್ದರು. ಆದರೆ ಇಲ್ಲಿ ಅದ್ಭುತವೇ ನಡೆದಿದೆ. ಲಸಿಕೆಯು ದುಲರ್‌ಚಂದ್‌ಗೆ ಹೊಸ ಜೀವನವನ್ನು ನೀಡಿತು, ಮರುದಿನದಿಂದ ಆತ ಮಾತನಾಡತೊಡಗಿದ.
ಇದನ್ನೂ ಓದಿ: ಭಾರತದ ಕೋವಿಡ್ ಲಸಿಕೆ ಅಭಿಯಾನಕ್ಕೆ 1 ವರ್ಷ: ಆರೋಗ್ಯ ಕಾರ್ಯಕರ್ತರು, ವಿಜ್ಞಾನಿಗಳಿಗೆ ಶುಭಾಶಯ ತಿಳಿಸಿದ ಮನ್ಸುಖ್ ಮಾಂಡವಿಯಾ
Read more
[wpas_products keywords=”deal of the day”]