ಸ್ಯಾಂಡಲ್‌ವುಡ್‌ನಲ್ಲಿ ಸದ್ಯಕ್ಕೆ ಯಾವುದೇ ಸಿನಿಮಾಗಳು ಬಿಡುಗಡೆ ಆಗುತ್ತಿಲ್ಲವಾದರೂ ಹಲವಾರು ಸಿನಿಮಾ ತಂಡಗಳು ತಮ್ಮ ಚಿತ್ರದ ಫಸ್ಟ್ ಲುಕ್‌ಗಳನ್ನು ಬಿಡುಗಡೆ ಮಾಡಿ ಕುತೂಹಲ ಮೂಡಿಸುತ್ತಿವೆ.
ಸಂಕ್ರಾಂತಿಯಂದು ಕೆಲವು ಸಿನಿಮಾಗಳನ್ನು ಅನೌನ್ಸ್ ಮಾಡಿ ಹೊಸ ಹುರುಪಿನಲ್ಲಿರುವ ಸ್ಯಾಂಡಲ್‌ವುಡ್‌ನಲ್ಲಿ ಈಗ ಮುಂಬರುವ ಸಿನಿಮಾಗಳ ಫಸ್ಟ್ ಲುಕ್‌ನದ್ದೇ ದರ್ಬಾರ್. ಹೊಸ ಸಿನಿಮಾಗಳು ಬಿಡುಗಡೆಯಾಗದೆ ಬೇಸರದಲ್ಲಿರುವ ಸಿನಿಪ್ರಿಯರಿಗೆ ಸದ್ಯಕ್ಕೆ ಈ ಫಸ್ಟ್ ಲುಕ್, ಪೋಸ್ಟರ್‌ಗಳೇ ಮನರಂಜಿಸುತ್ತಿವೆ. ಈ ರೀತಿ ವಿಪರೀತ ಕುತೂಹಲ ಮೂಡಿಸಿರುವ ಕೆಲವು ಸಿನಿಮಾಗಳ ವಿವರ ಇಲ್ಲಿದೆ.
ಸದ್ದು ವಿಚಾರಣೆ ನಡೆಯುತ್ತಿದೆ
ವಿಭಿನ್ನ ಟೈಟಲ್‌ನಿಂದಲೇ ಗಮನ ಸೆಳೆದಿರುವ ‘ಸದ್ದು ವಿಚಾರಣೆ ನಡೆಯುತ್ತಿದೆ’ ಸಿನಿಮಾವನ್ನು ‘ಶ್ರೀಮಾನ್ ಶ್ರೀಮತಿ’ ಸೀರಿಯಲ್ ಮತ್ತು ‘ಕೃಷ್ಣ ಗಾರ್ಮೆಂಟ್’ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದ ಭಾಸ್ಕರ್ ನೀನಾಸಂ ನಿರ್ದೇಶನ ಮಾಡಿದ್ದಾರೆ. ಮಧುನಂದನ್ ಮತ್ತು ‘ಮಗಳು ಜಾನಕಿ’ ಸೀರಿಯಲ್ ಖ್ಯಾತಿಯ ರಾಕೇಶ್ ಮಯ್ಯ ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾದಲ್ಲಿ ನಟಿ ಪಾವನಾ ಗೌಡ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಪ್ರಮುಖ ಪಾತ್ರದಲ್ಲಿ ನಿರ್ದೇಶಕ ರಾಘು ಶಿವಮೊಗ್ಗ, ಅಚ್ಯುತ್ ಕುಮಾರ್ ಮತ್ತಿತರರು ನಟಿಸಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯ ಈ ಸಿನಿಮಾದ ಕಥೆಯು ಪೊಲೀಸ್ ಠಾಣೆಯ ಸುತ್ತ ನಡೆಯುತ್ತದೆ. ಇದರ ಫಸ್ಟ್ ಲುಕ್ ಅನ್ನು ಧನಂಜಯ ಬಿಡುಗಡೆ ಮಾಡಿದ್ದಾರೆ.
ಬೈರಾಗಿ

ಶಿವರಾಜ್‌ಕುಮಾರ್, ಡಾಲಿ ಧನಂಜಯ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ‘ಬೈರಾಗಿ’ ಸಿನಿಮಾದ ಹೈ ವೋಲ್ಟೇಜ್ ಪೋಸ್ಟರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಈ ಸಿನಿಮಾಗೆ ವಿಜಯ್ ಮಿಲ್ಟನ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ‘ಟಗರು’ ಸಿನಿಮಾದ ನಂತರ ಶಿವಣ್ಣ ಮತ್ತು ಧನಂಜಯ ಒಟ್ಟಿಗೆ ನಟಿಸುತ್ತಿರುವ ಸಿನಿಮಾ ಇದಾಗಿದ್ದು, ಇದರ ಮೇಲೆ ಇವರಿಬ್ಬರ ಅಭಿಮಾನಿಗಳಿಗೂ ಸಿಕ್ಕಾಪಟ್ಟೆ ನಿರೀಕ್ಷೆ ಇದೆ. ಶಿವರಾಜ್‌ಕುಮಾರ್ ಭರ್ಜರಿ ಡಾನ್ಸ್ ಮಾಡುತ್ತಿರುವ ಇದರ ಪೋಸ್ಟರ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಶೀಘ್ರದಲ್ಲಿ ‘ಬೈರಾಗಿ’ ಮೂಲಕ ಥಿಯೇಟರ್‌ನಲ್ಲಿ ಸಿಗ್ತೀವಿ ಎಂದ ಡಾ ಶಿವರಾಜ್‌ಕುಮಾರ್
ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ

ಪ್ರತಿಭಾವಂತ ತಂತ್ರಜ್ಞರಾದ ನಿರ್ದೇಶಕ ಕುಶಾಲ್ ಗೌಡ, ಮಾಸ್ತಿ, ಅರ್ಜುನ್ ಜನ್ಯ, ಹರಿ ರೆಡ್ಡಿ ತಂಡದ ‘ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ’ ಸಿನಿಮಾದ ಫಸ್ಟ್ ಲುಕ್ ಕೂಡ ಕುತೂಹಲ ಕೆರಳಿಸಿದೆ. ಈ ಪೋಸ್ಟರ್‌ನಲ್ಲಿ ನಾಯಕ ನಟ ಧನಂಜಯ ಮತ್ತು ಬಾಲ ಕಲಾವಿದೆ ಇರುವ ಫೋಟೊ ಎಲ್ಲರ ಗಮನ ಸೆಳೆದಿದೆ. ಇದರಲ್ಲಿ ಅದಿತಿ ಪ್ರಭುದೇವ ಅವರು ಧನಂಜಯರಿಗೆ ಜೋಡಿಯಾಗಿ ನಟಿಸಿದ್ದಾರೆ.
‘ಮಗಳು ಜಾನಕಿ’ ಧಾರಾವಾಹಿಯ ರಾಕೇಶ್ ಮಯ್ಯ ‘ಸದ್ದು ವಿಚಾರಣೆ ನಡೆಯುತ್ತಿದೆ’ ಸಿನಿಮಾಕ್ಕೆ ಡಾಲಿ ಧನಂಜಯ ಸಾಥ್
ಅಬ ಜಬ ದಬ

ಮಯೂರ ರಾಘವೇಂದ್ರ ನಿರ್ದೇಶನ ಮಾಡುತ್ತಿರುವ ‘ಅಬ ಜಬ ದಬ’ ಸಿನಿಮಾದ ನಾಯಕ ಮತ್ತು ನಾಯಕಿಯನ್ನು ಸಂಕ್ರಾಂತಿಯಂದು ರಿವೀಲ್ ಮಾಡಲಾಗಿದ್ದು, ಇದಕ್ಕೆ ‘ದಿಯಾ’ ಸಿನಿಮಾ ಖ್ಯಾತಿಯ ಪೃಥ್ವಿ ಅಂಬಾರ್ ಮತ್ತು ಕಿರುತೆರೆ ನಟಿ, ನಿರೂಪಕಿ ಅಂಕಿತಾ ಅಮರ್ ಆಯ್ಕೆಯಾಗಿದ್ದಾರೆ. ವಿಭಿನ್ನ ಟೈಟಲ್‌ನ ಈ ಸಿನಿಮಾದಲ್ಲಿ ಹಲವು ಕಲಾವಿದರು ನಟಿಸುತ್ತಿದ್ದು, ಶಂಕರ್‌ನಾಗ್ ಅವರನ್ನು ತಂತ್ರಜ್ಞಾನದ ಮೂಲಕ ಮತ್ತೊಮ್ಮೆ ತೆರೆಯ ಮೇಲೆ ತರುವ ಪ್ರಯತ್ನವನ್ನು ನಿರ್ದೇಶಕರು ಈ ಸಿನಿಮಾದಲ್ಲಿ ಮಾಡುತ್ತಿದ್ದಾರೆ.
‘ನಮ್ಮನೆ ಯುವರಾಣಿ’ ಧಾರಾವಾಹಿ ನಟಿ ಅಂಕಿತಾ ಅಮರ್ ಮೊದಲ ಸಿನಿಮಾ ಶಂಕರ್ ನಾಗ್ ಜೊತೆಗೆ; ಏನಿದು ಹೊಸ ವಿಷಯ?
ಹರಿಕಥೆ ಅಲ್ಲ ಗಿರಿಕಥೆ

ರಿಷಭ್ ಶೆಟ್ಟಿ ನಾಯಕರಾಗಿ ನಟಿಸಿರುವ ಮೂರನೇ ಸಿನಿಮಾ ‘ಹರಿಕಥೆ ಅಲ್ಲ ಗಿರಿಕಥೆ’ಯ ಲುಕ್ ಕೂಡ ಬಿಡುಗಡೆಯಾಗಿ ಕುತೂಹಲ ಮೂಡಿಸಿದೆ. ಕಾಮಿಡಿ ಸಬ್ಜೆಕ್ಟ್ ಇರುವ ಈ ಸಿನಿಮಾವನ್ನು ಅನಿರುದ್ಧ್ ಮಹೇಶ್ ಮತ್ತು ಕರಣ್ ಅನಂತ್ ನಿರ್ದೇಶನ ಮಾಡಿದ್ದು, ರಿಷಭ್ ಶೆಟ್ಟಿ ಇದರಲ್ಲಿ ಸಿನಿಮಾ ನಿರ್ದೇಶಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಚನಾ ಇಂದರ್ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.
‘ಮಗಳು ಜಾನಕಿ’ ಧಾರಾವಾಹಿಯ ರಾಕೇಶ್ ಮಯ್ಯ ‘ಸದ್ದು ವಿಚಾರಣೆ ನಡೆಯುತ್ತಿದೆ’ ಸಿನಿಮಾಕ್ಕೆ ಡಾಲಿ ಧನಂಜಯ ಸಾಥ್
ಬೈ ಟು ಲವ್

ಹರಿ ಸಂತೋಷ್ ನಿರ್ದೇಶನ ಮಾಡಿರುವ ‘ಬೈ ಟು ಲವ್’ ಸಿನಿಮಾದ ಪೋಸ್ಟರ್ ಸಂಕ್ರಾಂತಿಯಂದು ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ. ರೊಮ್ಯಾಂಟಿಕ್ ಕಾಮಿಡಿ ಸಬ್ಜೆಕ್ಟ್‌ನ ಈ ಸಿನಿಮಾದಲ್ಲಿ ಧನ್ವೀರ್ ಮತ್ತು ಶ್ರೀಲೀಲಾ ನಟಿಸಿದ್ದಾರೆ. ಇದೇ ರೀತಿ ವಿನಯ್ ರಾಜ್‌ಕುಮಾರ್ ನಾಯಕರಾಗಿರುವ ‘ಪೆಪೆ’ ಸಿನಿಮಾದ ಪೋಸ್ಟರ್ ಸಹ ಸಂಕ್ರಾಂತಿಯಂದು ಬಿಡುಗಡೆಯಾಗಿದೆ. ಕೋವಿಡ್ ಕಾರ್ಮೋಡದಲ್ಲಿಯೂ ಕೆಲವು ಸಿನಿಮಾಗಳ ಹೊಸ ಪೋಸ್ಟರ್ ಮತ್ತು ಲುಕ್‌ಗಳು ಸ್ಯಾಂಡಲ್‌ವುಡ್‌ನಲ್ಲಿ ಹೊಸ ನಿರೀಕ್ಷೆಗಳನ್ನು ಹುಟ್ಟುಹಾಕಿವೆ.
Read more
[wpas_products keywords=”deal of the day party wear dress for women stylish indian”]