Karnataka news paper

ನಾರಾಯಣ ಗುರುಗಳಿಗೆ ಮಾಡಿದ ಅವಮಾನ ಸಹಿಸಲು ಸಾಧ್ಯವಿಲ್ಲ: ರಮಾನಾಥ ರೈ ಆಕ್ರೋಶ


ಮಂಗಳೂರು: ಗಣರಾಜ್ಯೋತ್ಸವ ಪರೇಡ್‌ನಲ್ಲಿ ಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರ ಪ್ರದರ್ಶಿಸುವ ಕೇರಳ ಸರಕಾರದ ಪ್ರಸ್ತಾವನೆಯನ್ನು ಕೇಂದ್ರ ಸರಕಾರದ ಸಮಿತಿ ತಿರಸ್ಕರಿಸುವ ಮೂಲಕ ಸಾಮಾಜಿಕ ನ್ಯಾಯದ ಹರಿಕಾರರಾದ ನಾರಾಯಣ ಗುರುಗಳಿಗೆ ಅವಮಾನ ಮಾಡಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾರಾಯಣ ಗುರುಗಳು ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಎನ್ನುವ ಮೂಲಕ ಸಮಸ್ತ ಹಿಂದು ಧರ್ಮದ ದನಿಯಾಗಿದ್ದರು. ಅಸಮಾನತೆ, ಮೇಲು- ಕೀಳನ್ನು ತೊಡೆದು ಹಾಕುವ ಜತೆಗೆ, ಸನಾತನ ಹಿಂದು ಧರ್ಮದ ಚೌಕಟ್ಟಿನೊಳಗಿದ್ದು, ಹುಳುಕುಗಳನ್ನು ಎತ್ತಿ ತೋರಿಸಿದ ದಾರ್ಶನಿಕ ಎಂದು ಹೇಳಿದರು.
ನಾರಾಯಣ ಗುರು ಸ್ತಬ್ದಚಿತ್ರ ನಿರಾಕರಣೆ: ಕರಾವಳಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ
ಹಿಂದುಳಿದ ಹಿಂದುಗಳಿಗೆ ದೇವಸ್ಥಾನ ಪ್ರವೇಶವೇ ಇಲ್ಲದ ಸಂದರ್ಭದಲ್ಲಿ ಸ್ವತಃ ದೇವಸ್ಥಾನ ಸ್ಥಾಪಿಸಿ, ಅದಕ್ಕೆ ಪ್ರವೇಶ ಕಲ್ಪಿಸಿ ಧಾರ್ಮಿಕ ಹಸಿವು ನೀಗಿಸಿದವರು ನಾರಾಯಣ ಗುರುಗಳು. ಕೇರಳ ಮತ್ತು ಕರ್ನಾಟಕದಲ್ಲಿ ಅವರಿಗೆ ಅಸಂಖ್ಯಾತ ಭಕ್ತರಿದ್ದಾರೆ. ನಮಗಂತೂ ಅವರು ಆದರ್ಶ. ಅವರ ಜನ್ಮದಿನವನ್ನು ಸರಕಾರಿ ಕಾರ್ಯಕ್ರಮವಾಗಿ ಕಾಂಗ್ರೆಸ್‌ ಸರಕಾರ ಘೋಷಿಸಿತ್ತು. ಅಂಥ ದಾರ್ಶನಿಕನ ಸ್ತಬ್ಧ ಚಿತ್ರವನ್ನು ತಿರಸ್ಕರಿಸುವ ಮೂಲಕ ಅವರ ಸಿದ್ಧಾಂತಕ್ಕೆ ಅಪಚಾರ ಎಸಗಲಾಗಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಇದರ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಮನವಿ ಸಹಿತ ಜನಜಾಗೃತಿ ಮೂಡಿಸಲಾಗುವುದು ಎಂದು ರಮಾನಾಥ ರೈ ಹೇಳಿದರು.

ಕಾಂಗ್ರೆಸ್‌ ಮುಖಂಡರಾದ ಹರಿನಾಥ್‌, ಶಶಿಧರ ಹೆಗ್ಡೆ, ಶಾಹುಲ್‌ ಹಮೀದ್‌ ಕೆ.ಕೆ., ಅಬ್ದುಲ್‌ ರವೂಫ್‌, ಅಪ್ಪಿ, ಲುಕ್ಮಾನ್‌ ಬಂಟ್ವಾಳ್‌, ದೀಪಕ್‌ ಪೂಜಾರಿ, ಪ್ರಕಾಶ್‌ ಸಾಲ್ಯಾನ್‌, ಸಿ.ಎಂ.ಮುಸ್ತಫಾ, ನೀರಜ್‌ಪಾಲ್‌, ಬೊಂಡಾಲ ಚಿತ್ತರಂಜನ್‌ ಶೆಟ್ಟಿ, ಶಬೀರ್‌ ಎಸ್‌., ಉದಯ ಆಚಾರಿ, ಫಯಾಝ್‌ ಅಮ್ಮೆಮಾರ್‌ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.



Read more

[wpas_products keywords=”deal of the day sale today offer all”]