ಹೈಲೈಟ್ಸ್:
- ಸ್ನಾನಕ್ಕೆ ಹೋದವರು ಹೋಗಿದ್ದು ಮಸಣಕ್ಕೆ
- ಗ್ಯಾಸ್ ಗೀಸರ್‌ನ ವಿಷಾನಿಲಕ್ಕೆ ತಾಯಿ, ಮಗಳು ಸಾವು
- ಬೆಂಗಳೂರಿನ ಚಿಕ್ಕ ಬಾಣಾವಾರದಲ್ಲಿ ನಡೆದ ಘಟನೆ
ಗಣಪತಿನಗರ ನಿವಾಸಿ ನರಸಿಂಹಮೂರ್ತಿ ಎಂಬರ ಪತ್ನಿ ಮಂಗಳಾ(35) ಹಾಗೂ ಪುತ್ರಿ ಗೌತಮಿ(7) ಮೃತಪಟ್ಟ ದುರ್ದೈವಿಗಳು. ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಚುಂಚಹಳ್ಳಿ ಗ್ರಾಮದ ನರಸಿಂಹಮೂರ್ತಿ ಕುಟುಂಬ ಚಿಕ್ಕ ಬಾಣಾವರದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿತ್ತು.
ನರಸಿಂಹಮೂರ್ತಿ ನಿರ್ಮಾಣ ಹಂತದ ಕಟ್ಟಡಗಳಲ್ಲಿ ಬಾರ್ ಬೆಂಡಿಂಗ್ ಕೆಲಸ ಮಾಡುತ್ತಿದ್ದು, ಮಂಗಳಾ ಕೂಡ ಸಣ್ಣ-ಪುಟ್ಟ ಕೆಲಸಕ್ಕೆ ಹೋಗುತ್ತಿದ್ದರು. ಶನಿವಾರ ಮುಂಜಾನೆಯೇ ನರಸಿಂಹಮೂರ್ತಿ ಕೆಲಸಕ್ಕೆ ತೆರಳಿದ್ದಾರೆ. ನಂತರ 10.30ರ ಸುಮಾರಿಗೆ ಮಂಗಳಾ ಮತ್ತು ಮಗಳು ಗೌತಮಿ ಸ್ನಾನ ಮಾಡಲು ಗ್ಯಾಸ್ ಗೀಸರ್ ಆನ್ ಮಾಡಿ ಸ್ನಾನದ ಕೋಣೆಗೆ ಹೋಗಿದ್ದಾರೆ.
ಮನೆಯ ಮುಂಬಾಗಿಲು, ಸ್ನಾನದ ಕೋಣೆ ಬಾಗಿಲು ಹಾಗೂ ಕಿಟಕಿ ಮುಚ್ಚಿಕೊಂಡಿದ್ದರು. ಇದರಿಂದಾಗಿ ವಾತಾವರಣದ ಆಮ್ಲಜನಕ ವಿಷಾನಿಲ(ಇಂಗಾಲದ ಡೈ ಆಕ್ಸೈಡ್ )ವಾಗಿ ಪರಿವರ್ತನೆಯಾಗಿದೆ. ತಾಯಿ, ಮಗಳಿಬ್ಬರು ಉಸಿರುಗಟ್ಟಿ ಮೃತಪಟ್ಟಿದ್ದಾರೆ.
ಗಾಳಿಯಾಡದ ಕಡೆ ಗ್ಯಾಸ್ ಗೀಸರ್ ಬಲು ಡೇಂಜರ್
ಪತಿ ನರಧಿಸಿಂಹಧಿಮೂರ್ತಿ ಮನೆಗೆ ಐದಾರು ಬಾರಿ ಕರೆ ಮಾಡಿದರೂ ಸ್ವೀಕರಿಸಿಲ್ಲ. ಇದರಿಂದ ಗಾಬರಿಗೊಂಡು ಮನೆ ಮಾಲೀಕರಾದ ಗಾಯಿತ್ರಿ ಅವರಿಗೆ ಕರೆ ಮಾಡಿ ಮನೆ ಬಳಿ ಹೋಗಿ ನೋಡುವಂತೆ ಮನವಿ ಮಾಡಿದ್ದಾರೆ. ಸಂಜೆ ಐದು ಗಂಟೆ ಸುಮಾರಿಗೆ ಗಾಯಿತ್ರಿ ಅವರು ಮನೆಗೆ ಬಂದಾಗಲು ಒಳಗಿನಿಂದ ಪ್ರತಿಕ್ರಿಯೆ ಬಂದಿರಲಿಲ್ಲ. ಅವರು ಅನುಮಾನಗೊಂಡು ಪೊಲೀಸರಿಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಬಾಗಿಲು ಒಡೆದು ಒಳ ಹೋಗಿ ನೋಡಿದಾಗ ತಾಯಿ, ಮಗಳು ಸ್ನಾನದ ಕೋಣೆಯಲ್ಲೇ ಮೃತಪಟ್ಟಿದ್ದರು.
Read more
[wpas_products keywords=”deal of the day sale today offer all”]