ಹೈಲೈಟ್ಸ್:
- ಕೊಟ್ಟ ಮಾತು ಉಳಿಸಿಕೊಂಡ ಸಿಎಂ ಬಸವರಾಜ ಬೊಮ್ಮಾಯಿ
- ಮಳೆಯಿಂದ ಮನೆ ಕಳೆದುಕೊಂಡ ವೃದ್ದೆಗೆ ಸಿಎಂ ಆಶ್ರಯ
- ಮನೆ ಕಟ್ಟಿಸಿಕೊಡುವಂತೆ ಸಿಎಂಗೆ ಮನವಿ ಮಾಡಿದ್ದ ಅಜ್ಜಿ
ಕಳೆದ ಬಾರಿ ಪ್ರವಾಹ ಬಂದಾಗ ಕಮಲವ್ವನ ಮನೆ ಕೊಚ್ಚಿ ಹೋಯಿತು. ಅದರಿಂದಾಗಿ ಗಣೇಶ ಹಬ್ಬವನ್ನೂ ಆಚರಿಸುವುದು ಕಷ್ಟವಾಯಿತು. ಈ ಬಗ್ಗೆ ಮಾಧ್ಯಮದಲ್ಲಿ ಬಂದ ವರದಿ ಗಮನಿಸಿದ ಸಿಎಂ ಬೊಮ್ಮಾಯಿ, ಮನೆ ಕಟ್ಟಿಸಿ ಕೊಡುವ ಭರವಸೆ ನೀಡಿದ್ದರು. ”ಇಬ್ಬರೂ ಗಂಡುಮಕ್ಕಳು ಸತ್ತ ಹೋಗ್ಯಾರ. ಮನಿ ಕಟ್ಟಸಿಕೊಡ್ರಿ ಸಾಹೇಬ್ರ,” ಎಂದು ಗದ್ಗದಿತಳಾಗಿ ಕಮಲವ್ವ ಕೇಳಿಕೊಂಡಿದ್ದರು.
ಆಗ ಸಾಂತ್ವನ ಹೇಳಿದ್ದ ಸಿಎಂ ಬೊಮ್ಮಾಯಿ, ಆದಷ್ಟು ಬೇಗ ಮನೆ ಕಟ್ಟಿಸಿ ಕೊಡುವುದಾಗಿ ಹೇಳಿದ್ದರು. ಕಮಲವ್ವ ಸಿಎಂ ಸ್ವಕ್ಷೇತ್ರ ಶಿಗ್ಗಾಂವ್‌ನ ಮಂಚಿಕೊಪ್ಪ ಗ್ರಾಮದವರು. ಸಿಎಂ ಸೂಚನೆಯಂತೆ 4 ತಿಂಗಳಲ್ಲಿ ಮನೆ ನಿರ್ಮಿಸಿದ ಜಿಲ್ಲಾಡಳಿತ ಕಮಲವ್ವ ಅವರಿಗೆ ಹಸ್ತಾಂತರಿಸಿದೆ. ಹ್ಯಾಬಿಟ್ಯಾಟ್ ಸೆಂಟರ್ ಮೂಲಕ ನಿರ್ಮಿಸಲಾದ ಸುಸಜ್ಜಿತ ಮನೆಯನ್ನು ಸವಣೂರ ಉಪ ವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಅವರು ಹಸ್ತಾಂತರಿಸಿದರು. ಸಂಕ್ರಾಂತಿಯಂದು ಕಮಲವ್ವನಿಗೆ ಮನೆಯನ್ನು ಹಸ್ತಾಂತರಿಸಿದ್ದಾರೆ.
Read more
[wpas_products keywords=”deal of the day sale today offer all”]