Karnataka news paper

ಬೆಂಗಳೂರಿನ ನಾಜ್ ಫರ್ನಿಚರ್ ಗೋದಾಮಿನಲ್ಲಿ ಬೆಂಕಿ, ಅವಘಡ ತಪ್ಪಿಸಿದ ಅಗ್ನಿಶಾಮಕ ಸಿಬ್ಬಂದಿ


Online Desk

ಬೆಂಗಳೂರು: ರಾಜಧಾನಿ ಬೆಂಗಳೂರಿನ ಅಲ್ಲಲ್ಲಿ ಅಗ್ನಿ ಅವಘಡಗಳು ಕಂಡುಬರುತ್ತಿದ್ದು, ಅಗ್ನಿಶಾಮಕ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ಆಗಮಿಸಿ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ.

ಇಂದು ಬೆಳ್ಳಂಬೆಳಗ್ಗೆ ಜೆ.ಪಿ.ನಗರದ 6ನೇ ಹಂತದಲ್ಲಿ ನಾಜ್ ಫರ್ನೀಚರ್ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ತಕ್ಷಣ ಅಂಜನಾಪುರ ಠಾಣೆಯಿಂದ ವಾಹನ ತೆರಳಿ ಬೆಂಕಿ ನಂದಿಸುತ್ತಿದ್ದು, ಅಗ್ನಿ ತೀವ್ರತೆ ದಟ್ಟವಾಗಿರುವುದರಿಂದ ಹೆಚ್ಚುವರಿಯಾಗಿ ಅಗ್ನಿಶಾಮಕ ವಾಹನಗಳನ್ನು ಕರಿಸಿಕೊಂಡು ಬೆಂಕಿಯನ್ನು ನಂದಿಸಲಾಗಿದೆ. ಈ ಮೂಲಕ ಉಂಟಾಗಬಹುದಾಗಿದ್ದ ಭಾರೀ ಅನಾಹುತವನ್ನು ತಪ್ಪಿಸಲಾಯಿತು.

ನಿನ್ನೆ ಬೆಳಗ್ಗೆ ಸಂಕ್ರಾಂತಿ ದಿನ ಬೆಂಗಳೂರಿನ ಅಕ್ಕಿಪೇಟೆಯ ಹಣ್ಣು ಸಂಗ್ರಹಿಸಿಟ್ಟಿದ್ದ ಗೋದಾಮಿನಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಕೂದಲೆಳೆ ಅಂತರದಲ್ಲಿ ಭಾರೀ ಅನಾಹುತ ತಪ್ಪಿದಂತಾಗಿದೆ. ಮೂರನೇ ಅಂತಸ್ಥಿನ ಕಟ್ಟಡದ ನೆಲಮಹಡಿಯಲ್ಲಿ ಇದ್ದ ಹಣ್ಣಿನ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಬೆಂಕಿ ಹೊತ್ತಿದ ಕೆಲವೇ ನಿಮಿಷಗಳಲ್ಲಿ ಅಗ್ನಿಶಾಮಕ ಸಿಬ್ಬಂದಿ ಕಾರ್ಯಚರಣೆ ನಡೆಸಿ ಕೆಲವೇ ನಿಮಿಷಗಳಲ್ಲಿ ಬೆಂಕಿ ನಂದಿಸಿದ್ದಾರೆ. ಅಗ್ನಿ ಅವಘಡ ಸಂಭವಿಸಿದ ಸಮೀಪದಲ್ಲೇ ಪಟಾಕಿ ಅಂಗಡಿ ಇತ್ತು. ಆದರೆ, ಅದೃಷ್ಟವಷಾತ್ ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. 

ಇನ್ನು ನಿನ್ನೆ ಬನ್ನೇರುಘಟ್ಟ ರಸ್ತೆಯ ಅರಕರೆ ಸಿಗ್ನಲ್‌ ಬಳಿಯ ಸೌತ್‌ ಇಂಡಿಯನ್‌ ಶಾಪಿಂಗ್‌ ಮಾಲ್‌ ಕಟ್ಟಡದ ನೆಲ ಮಹಡಿಯಲ್ಲಿರುವ ‘ರಿಲಯನ್ಸ್‌ ಮಾರ್ಟ್‌’ ಮಳಿಗೆಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗೆ ಆಹುತಿಯಾದವು. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಅಗ್ನಿಶಾಮಕ ಸಿಬ್ಬಂದಿ ಸತತ ಮೂರು ತಾಸು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. 





Read more

[wpas_products keywords=”deal of the day”]