Karnataka news paper

ಬಿಜೆಪಿ ಕಿರುಕುಳಕ್ಕೆ ಅಂತ್ಯವಿಲ್ಲ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್


The New Indian Express

ಬೆಂಗಳೂರು: ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಪಾದಯಾತ್ರೆ ನಡೆಸಿದ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ನನ್ನನ್ನು ಗುರಿ ಮಾಡುತ್ತಿದ್ದು, ಪ್ರಕರಣಗಳನ್ನು ದಾಖಲು ಮಾಡಿತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಶನಿವಾರ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಶಾಲೆಗೆ ನೋಟಿಸ್ ಜಾರಿ ಮಾಡಿದ್ದಾರೆಂದು ನನ್ನ ಮಗಳು ಹೇಳಿದ್ದಾಳೆ. ಬಿಜೆಪಿ ಸರ್ಕಾರದ ಕಿರುಕುಳಕ್ಕೆ ಅಂತ್ಯವಿಲ್ಲ. ಅವರೊಂದಿಗೆ ನಾವು ಬದುಕಲೇಬೇಕಿದೆ ಎಂದು ಹೇಳಿದ್ದಾರೆ. 

ಮೇಕೆದಾಟು ಮಾಡಲಿ, ಬಿಡಲಿ. ನನ್ನ ವಿರುದ್ಧ ಏನೆಲ್ಲ ಪ್ರಯತ್ನ ನಡೆಯಬೇಕೋ ನಡೆಯುತ್ತಿದೆ. ಒಂದು ದಿನ ಕೇಸ್ ಹಾಕಬಹುದಿತ್ತು. ಪ್ರತೀದಿನ ಪ್ರಕರಣ ದಾಖಲಿಸುವೋ ಪ್ರಮೇಯ ಏನಿತ್ತು. ನಮ್ಮ ಮೇಲಷ್ಟೇ ಯಾಕೆ ಪ್ರಕರಣ ದಾಖಲಿಸುತ್ತಿದ್ದಾರೆ. ಬಿಜೆಪಿ ಅವರ ಮೇಲೆ ಯಾಕೆ ದಾಖಲಿಸುತ್ತಿಲ್ಲ. ಬಹಳ ಅಂದರೆ ಜೈಲಿಗೆ ಹಾಕಬಹುದು, ಖುಷಿ ಪಡಬಹುದು, ಪಡಲಿ ಬಿಡಿ ಎಂದು ತಿಳಿಸಿದ್ದಾರೆ. 

“ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಅವರು ಕಾರ್ಯಕ್ರಮವೊಂದಕ್ಕೆ ರಾಮನಗರಕ್ಕೆ ಭೇಟಿ ನೀಡಿದಾಗ ಕೋವಿಡ್ ಪ್ರೋಟೋಕಾಲ್ ಜಾರಿಯಲ್ಲಿತ್ತು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನೂತನವಾಗಿ ಆಯ್ಕೆಯಾಗಿರುವ ಎಂಎಲ್‌ಸಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸಂದರ್ಭದಲ್ಲೂ ನಿಯಮ ಉಲ್ಲಂಘಿಸಲಾಗಿತ್ತು. ಇವರ ಮೇಲೇಕೆ ಪ್ರಕರಣ ದಾಖಲಿಸಲಿಲ್ಲ ಎಂದು ಪ್ರಶ್ನಿಸಿದ್ದಾರೆ.

ಇದೇ ವೇಳೆ ಪಾದಯಾತ್ರೆಗೆ ನಿಯೋಜನೆಗೊಂಡಿದ್ದ ಪೊಲೀಸ್ ಸಿಬ್ಬಂದಿಗಳಿಕೆ ಸೋಂಕು ತಗುಲಿರುವ ಕುರಿತ ಪ್ರಶ್ನೆಗೆ ಉತ್ತರಿಸಿ, ರಾಜ್ಯದ ಉಪಚುನಾವಣೆ ವೇಳೆಯೂ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ 50 ಶಿಕ್ಷಕರು ಸಾವನ್ನಪ್ಪಿದ್ದರು ಎಂದರು. 

ಜನರ ಭಾವನೆಗಳನ್ನು ಗೌರವಿಸಿ ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಕೋವಿಡ್ ಪ್ರಕರಣಗಳು ಕಡಿಮೆಯಾದ ಬಳಿಕ ಪಾದಯಾತ್ರೆಯನ್ನು ಪುನರಾರಂಭಿಸಲಾಗುವುದು ಎಂದು ಹೇಳಿದರು.

ಬಳಿಕ ಕಾವೇರಿ ಸಂಗಮದಲ್ಲಿ ಪಾದಯಾತ್ರೆ ಕಾರ್ಯಕ್ರಮ ಆಯೋಜಿಸಲು ತಮಿಳುನಾಡಿನಿಂದ ಕೂಲಿ ಕಾರ್ಮಿಕರನ್ನು ನೇಮಿಸಲಾಗಿದೆ ಎಂಬ ಮಾಜಿ ಸಿಎಂ, ಜೆಡಿಎಸ್ ಮುಖಂಡ ಎಚ್‌ಡಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಶಿವಕುಮಾರ್, ನಾವು ನೆರೆಹೊರೆಯವರಾಗಿದ್ದು, ನಮ್ಮ ಭೂಮಿ ಕೂಡ ಹತ್ತಿರದಲ್ಲಿದೆ. ನಾವು ಪರಸ್ಪರ ಜಗಳವಾಡಬೇಕೇ?” ಎಂದು ಪ್ರಶ್ನಿಸಿದರು.

ಖ್ಯಾತ ಪರಿಸರವಾದಿ ಮೇಧಾ ಪಾಟ್ಕರ್ ಅವರು ಮೇಕೆದಾಟು ಯೋಜನೆ ವಿರುದ್ಧ ಪರಿಸರ ಕಾಳಜಿ ಕುರಿತು ಧ್ವನಿ ಎತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ, ನೀರು ಬಯಸುವ ಜನರಿಗೆ ಯೋಜೆ ಜೀವನಾಡಿಯಾಗಿದ್ದು, ಕಾಂಗ್ರೆಸ್‌ನ ಹೋರಾಟ ಜನಪರವಾಗಿದೆ ಎಂದು ಹೇಳಿದರು.

ಮೇಕೆದಾಟು ಯೋಜನೆ ವಿರೋಧಿಸುತ್ತಿರುವ ಬಗ್ಗೆ ನಾನು ಮಾತನಾಡುವುದಿಲ್ಲ. ಅವರಿಗೆ ಉತ್ತರಿಸಲು ಸರ್ಕಾರ, ಮುಖ್ಯಮಂತ್ರಿ ಅವರಿದ್ದಾರೆ. ಅವರಿಗೆ ಉತ್ತರ ನೀಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಕ್ತ ವ್ಯಕ್ತಿ ಎಂದರು.

ಮಳೆನೀರು ಕೊಯ್ಲು ಬೆಂಗಳೂರು ಜನತೆಯ ಕುಡಿಯುವ ನೀರಿಗೆ ಸಹಾಯ ಮಾಡುತ್ತದೆ ಎಂಬ ಸಲಹೆ ಕುರಿತು ಮಾತನಾಡಿ, ರಾಜ್ಯ ಸರ್ಕಾರ ಈ ಕುರಿತು ಸಮಿತಿ ರಚಿಸಬೇಕು ಎಂದು ತಿಳಿಸಿದರು.



Read more

[wpas_products keywords=”deal of the day”]