Karnataka news paper

ನಾರಾಯಣ ಗುರುವಿಗೆ ಅವಮಾನ ಆಗಿರೋದು ಮೋದಿ ಗಮನಕ್ಕೆ ಬಂದಿಲ್ಲವೇ..? ಸಿದ್ದರಾಮಯ್ಯ ಪ್ರಶ್ನೆ


ಹೈಲೈಟ್ಸ್‌:

  • ಈ ವರ್ಷ ಕೇರಳ ರಾಜ್ಯವು ಕಳಿಸಿದ್ದ ನಾರಾಯಣ ಗುರು ಸ್ತಬ್ಧ ಚಿತ್ರ
  • ಮಹಿಳೆಯರ ಸುರಕ್ಷತೆಯ ವಿಷಯದೊಂದಿಗೆ ಜಟಾಯು ಪಕ್ಷಿಯ ಪ್ರತಿಮೆ ಮತ್ತು ನಾರಾಯಣ ಗುರು ಪ್ರತಿಮೆ ಇತ್ತು
  • ನಾರಾಯಣ ಗುರು ಬದಲಿಗೆ ಶಂಕರಾಚಾರ್ಯರ ಮೂರ್ತಿಯನ್ನು ಬಳಸಲು ಕೇಂದ್ರ ಸೂಚಿಸಿತ್ತು, ಬಳಿಕ ಅನುಮತಿ ನಿರಾಕರಿಸಿತ್ತು

ಬೆಂಗಳೂರು: ಹಿಂದೂ ಧರ್ಮದ ಸುಧಾರಕ ನಾರಾಯಣ ಗುರುಗಳ ಸ್ತಬ್ಧ ಚಿತ್ರಕ್ಕೆ ಅವಕಾಶ ನಿರಾಕರಿಸಿ ಅವಮಾನ ಮಾಡಿರುವುದು ‘ಹಿಂದೂ ಹೃದಯ ಸಾಮ್ರಾಟ’ ಎಂದು ಕರೆಸಿಕೊಳ್ಳುವ ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ಬಂದಿಲ್ಲವೇ ಎಂದು ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

‘ಶತಮಾನದ ಹಿಂದೆಯೇ ಅಸ್ಪೃಶ್ಯತೆ ಮತ್ತು ಪುರೋಹಿತ ಶಾಹಿ ವ್ಯವಸ್ಥೆ ವಿರುದ್ಧ ಸಿಡಿದೆದ್ದು ಹಿಂದೂ ಧರ್ಮದ ಸುಧಾರಣೆಗೆ ಅರ್ಪಿಸಿಕೊಂಡಿದ್ದವರು ನಾರಾಯಣ ಗುರುಗಳು. ಅಂಥವರನ್ನು ಅಪಮಾನಿಸಿರುವ ಬಿಜೆಪಿ ಮತ್ತು ಕೇಂದ್ರ ಸರಕಾರಕ್ಕೆ ಹಿಂದೂ ಧರ್ಮದ ಬಗ್ಗೆ ಮಾತನಾಡಲು ಯಾವ ನೈತಿಕತೆಯಿದೆ? ತಮ್ಮ ಮೂಗಿನಡಿಯಲ್ಲೇ ನಾರಾಯಣ ಗುರುಗಳಿಗೆ ಮಾಡಿರುವ ಅವಮಾನಕ್ಕೆ ಪ್ರಧಾನಿ ಇನ್ನೂ ಪ್ರತಿಕ್ರಿಯಿಸದಿರುವುದು ಆಶ್ಚರ್ಯಕರ. ಇದರ ಅರ್ಥವೇನು? ಈ ಅವಮಾನಕ್ಕೆ ಅವರ ಸಹಮತ ಇದೆಯೆಂದೇ?’ ಎಂದು ಪ್ರಶ್ನಿಸಿದ್ದಾರೆ.

ಗಣರಾಜ್ಯೋತ್ಸವ ಪರೇಡ್‌ಗೆ ನಾರಾಯಣ ಗುರುಗಳ ಟ್ಯಾಬ್ಲೋ ತಿರಸ್ಕರಿಸಿದ ಕೇಂದ್ರ! ವ್ಯಾಪಕ ಆಕ್ರೋಶ
ಏನಿದು ವಿವಾದ?: ಕೇಂದ್ರ ಸರಕಾರ ನಡೆಸುವ ಗಣ ರಾಜ್ಯೋತ್ಸವದ ಮೆರವಣಿಗೆಯಲ್ಲಿ ನಾನಾ ರಾಜ್ಯದ ಸ್ತಬ್ಧ ಚಿತ್ರಗಳು ಪ್ರದರ್ಶನಗೊಳ್ಳುತ್ತವೆ. ಆದರೆ ಈ ವರ್ಷ ಕೇರಳ ರಾಜ್ಯವು ಕಳಿಸಿದ್ದ ಸ್ತಬ್ಧ ಚಿತ್ರವು ತಿರಸ್ಕೃತಗೊಂಡಿದ್ದು ವಿವಾದ ಸೃಷ್ಟಿಯಾಗಿದೆ. ಸ್ತಬ್ಧ ಚಿತ್ರದಲ್ಲಿ ಮಹಿಳೆಯರ ಸುರಕ್ಷತೆಯ ವಿಷಯದೊಂದಿಗೆ ಜಟಾಯು ಪಕ್ಷಿಯ ಪ್ರತಿಮೆ ಮತ್ತು ನಾರಾಯಣ ಗುರು ಪ್ರತಿಮೆಯನ್ನು ಕೇರಳ ಸಿದ್ಧಪಡಿಸಿತ್ತು. ಆದರೆ, ಕೇಂದ್ರ ಸರಕಾರವು ನಾರಾಯಣ ಗುರು ಬದಲಿಗೆ ಶಂಕರಾಚಾರ್ಯರ ಮೂರ್ತಿಯನ್ನು ಬಳಸಲು ಸೂಚಿಸಿತ್ತು. ಬಳಿಕ ಕೇರಳಕ್ಕೆ ಸ್ತಬ್ಧ ಚಿತ್ರ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿತ್ತು ಎನ್ನಲಾಗಿದೆ.

ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಕೇಂದ್ರದ ಗಣರಾಜ್ಯೋತ್ಸವ ಸಮಿತಿ ತಿರಸ್ಕಾರ; ಎಚ್‌ಡಿಕೆ ಆಕ್ಷೇಪ
ಕ್ಷಮೆ ಕೇಳಲಿ ಎಂದ ಹರಿಪ್ರಸಾದ್‌

ನಾರಾಯಣ ಗುರು ಸ್ತಬ್ಧ ಚಿತ್ರವನ್ನು ತಿರಸ್ಕರಿಸಿ ಅಪಮಾನ ಮಾಡಿರುವ ಸಂಘ ಪರಿವಾರ ನಿಯಂತ್ರಿತ ಕೇಂದ್ರ ಸರಕಾರದ ಕ್ರಮ ಖಂಡನೀಯ ಎಂದು ವಿಧಾನ ಪರಿಷತ್‌ ಸದಸ್ಯ ಬಿ. ಕೆ. ಹರಿಪ್ರಸಾದ್‌ ಹೇಳಿದ್ದಾರೆ.

‘ರವೀಂದ್ರನಾಥ್‌ ಟ್ಯಾಗೋರ್‌, ಮಹಾತ್ಮಾ ಗಾಂಧಿ, ಅಂಬೇಡ್ಕರ್‌ ಅವರು ನಾರಾಯಣ ಗುರುಗಳನ್ನು ಗೌರವಿಸಿದ್ದರು. ಆದರೆ, ಬಿಜೆಪಿ ಸರಕಾರ ಅವಮಾನಿಸಿದೆ. ಕೇರಳದಿಂದ ನಾರಾಯಣ ಗುರುಗಳ ಕ್ರಾಂತಿಕಾರಿ ಸಂದೇಶ ಸಾರುವ ಸ್ತಬ್ಧ ಚಿತ್ರ ಕಳುಹಿಸಲಾಗಿತ್ತು. ಅದನ್ನು ಕೇಂದ್ರ ತಿರಸ್ಕರಿಸಿದೆ. ಈ ಪ್ರಮಾದಕ್ಕಾಗಿ ಕ್ಷಮೆ ಯಾಚಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ನಾರಾಯಣ ಗುರುಗಳ ಹೆಸರಲ್ಲಿ ನಿಗಮ ಸ್ಥಾಪನೆಗೆ ಚಿಂತನೆ ನಡೆಸಲಾಗಿದೆ: ಸಚಿವ ಸುನಿಲ್ ಕುಮಾರ್



Read more

[wpas_products keywords=”deal of the day sale today offer all”]