ಹೈಲೈಟ್ಸ್:
- ಹೊಸ ಸಾಹಸಕ್ಕೆ ಮುಂದಾದ ನಟ ವಿನೋದ್ ಪ್ರಭಾಕರ್
- ವಿನೋದ್ ಪ್ರಭಾಕರ್ ನಟನೆಯ ‘ಲಂಕಾಸುರ’ ಸಿನಿಮಾಕ್ಕೆ ನಿಶಾ ನಿರ್ಮಾಪಕಿ
- ‘ಟೈಗರ್ ಟಾಕೀಸ್’ ಎಂಬ ನಿರ್ಮಾಣ ಸಂಸ್ಥೆ ಆರಂಭಿಸಿದ ನಟ ವಿನೋದ್ ಪ್ರಭಾಕರ್
ಟೈಗರ್ ಟಾಕೀಸ್‌ನ ಮೊದಲ ಸಿನಿಮಾ ‘ಲಂಕಾಸುರ‘
ವಿನೋದ್ ಪ್ರಭಾಕರ್ ಅವರ ಟೈಗರ್ ಟಾಕೀಸ್ ಮೂಲಕ ‘ಲಂಕಾಸುರ’ ಸಿನಿಮಾ ನಿರ್ಮಾಣಗೊಳ್ಳುತ್ತಿದೆ. ಇದು ಈ ಬ್ಯಾನರ್‌ನ ಮೊದಲ ಸಿನಿಮಾ. ವಿನೋದ್ ಪ್ರಭಾಕರ್ ಇದರ ಹೀರೋ ಆದರೆ ನಿಶಾ ವಿನೋದ್ ಪ್ರಭಾಕರ್ ಅವರು ಬಂಡವಾಳ ಹೂಡುತ್ತಿದ್ದಾರೆ. ಇನ್ನು, ತಮ್ಮ ನಿರ್ಮಾಣ ಸಂಸ್ಥೆಗೆ ‘ಟೈಗರ್ ಟಾಕಿಸ್’ ಎಂಬ ಹೆಸರಿಟ್ಟರುವ ವಿನೋದ್, ಆ ಮೂಲಕ ತಮ್ಮ ತಂದೆ ಟೈಗರ್ ಪ್ರಭಾಕರ್ ಅವರನ್ನು ಸ್ಮರಿಸಿಕೊಂಡಿದ್ದಾರೆ. ಇನ್ನು, ಈ ಸಿನಿಮಾದ ವಿಶೇಷ ಪಾತ್ರದಲ್ಲಿ ಲೂಸ್ ಮಾದ ಯೋಗಿ ಅಭಿನಯಿಸುತ್ತಿದ್ದಾರೆ. ಇದು ಇವರಿಬ್ಬರು ಒಟ್ಟಾಗಿ ಅಭಿನಯಿಸುತ್ತಿರುವ ಮೊದಲ ಚಿತ್ರವಾಗಿದೆ. ಉಳಿದಂತೆ, ದೇವರಾಜ್, ರವಿಶಂಕರ್ ಮುಂತಾದವರು ‘ಲಂಕಾಸುರ’ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ.
ಈ ಸಾಹಸ ಪ್ರಧಾನ ಸಿನಿಮಾವನ್ನು ಡಿ. ಪ್ರಮೋದ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಮತ್ತೊಂದು ವಿಶೇಷವೆಂದರೆ, ಡಿಫರೆಂಟ್ ಡ್ಯಾನಿ, ವಿನೋದ್, ಕುಂಫು ಚಂದ್ರು, ಅರ್ಜುನ್ ರಾಜ್ ಹಾಗೂ ಚೇತನ್ ಡಿಸೋಜ ಅವರು ಈ ಸಿನಿಮಾದ ಸಾಹಸ ದೃಶ್ಯಗಳನ್ನು ಸಂಯೋಜನೆ ಮಾಡುತ್ತಿದ್ದಾರೆ. ನಾಲ್ಕು ಹಾಡುಗಳಿರುವ ಈ ಚಿತ್ರಕ್ಕೆ ವಿಜೇತ್ ಕೃಷ್ಣ ಸಂಗೀತ ನೀಡಿದ್ದು, ‘ಭರ್ಜರಿ’ ಚೇತನ್ ಗೀತರಚನೆ ಮಾಡಿದ್ದಾರೆ. ‘ಸಿದ್ಲಿಂಗು’, ‘ಜಯಮ್ಮನ ಮಗ’ ಹಾಗೂ ‘ಐ ಲವ್ ಯೂ’ ಮುಂತಾದ ಜನಪ್ರಿಯ ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿರುವ ಸುಜ್ಞಾನ್ (ಜ್ಞಾನಮೂರ್ತಿ) ಈ ಚಿತ್ರಕ್ಕೂ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮುರಳಿ, ಮೋಹನ್ ಅವರ ನೃತ್ಯ ನಿರ್ದೇಶನ ಹಾಗೂ ದೀಪು ಎಸ್. ಕುಮಾರ್ ರವರ ಸಂಕಲನ ಈ ಚಿತ್ರಕ್ಕಿದೆ. ಬೆಂಗಳೂರಿನಲ್ಲಿ ಈ ಚಿತ್ರದ ಚಿತ್ರೀಕರಣವು ಬಿರುಸಿನಿಂದ ಸಾಗಿದೆ.
‘ನನ್ನ ತಟ್ಟೆಯಲ್ಲಿರುವ ಅನ್ನವನ್ನು ಒದೆಯುತ್ತಿದ್ದೀರಿ’- ವಿನೋದ್ ಪ್ರಭಾಕರ್ ಹೀಗೆ ಹೇಳಲು ಕಾರಣವೇನು?

‘ರಾಬರ್ಟ್’ ಚಿತ್ರದ ರಾಘವ-ತನು ಜೋಡಿಗೆ ಸ್ಯಾಂಡಲ್‌ವುಡ್‌ನಲ್ಲಿ ಸಖತ್ ಡಿಮ್ಯಾಂಡ್!
ಇನ್ನು, ಉದಯ ಪ್ರಕಾಶ್ ನಿರ್ಮಿಸಿ, ನಿರ್ದೇಶಿಸಿರುವ ‘ವರದ’ ಅನ್ನೋ ಸಿನಿಮಾದಲ್ಲೂ ವಿನೋದ್ ಪ್ರಭಾಕರ್ ಹೀರೋ ಆಗಿದ್ದಾರೆ. ಆ ಸಿನಿಮಾ ತೆರೆಗೆ ಬರಲು ಸಜ್ಜಾಗಿದೆ. ಈಚೆಗಷ್ಟೇ ಆ ಸಿನಿಮಾದ ಒಂದು ಹಾಡನ್ನು ನಟ ಗಣೇಶ್ ರಿಲೀಸ್ ಮಾಡಿದ್ದರು. ಇದರ ಜೊತೆಗೆ ಫೈಟರ್ ಎಂಬ ಇನ್ನೊಂದು ಸಿನಿಮಾವನ್ನು ವಿನೋದ್ ಪ್ರಭಾಕರ್ ಒಪ್ಪಿಕೊಂಡಿದ್ದಾರೆ.
Read more
[wpas_products keywords=”deal of the day party wear dress for women stylish indian”]