
ಮಾಸ್ಕೊ: ಕಜಕಿಸ್ತಾನದಲ್ಲಿ ಇಂಧನ ಬೆಲೆಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿದ್ದನ್ನು ವಿರೋಧಿಸಿ ದೇಶದಾದ್ಯಂತ ನಡೆದ ಹಿಂಸಾತ್ಮಕ ಪ್ರತಿಭಟನೆಗಳಲ್ಲಿ ಮೃತಪಟ್ಟವರ ಸಂಖ್ಯೆ 225ಕ್ಕೆ ಏರಿದೆ. ಈ ಮೊದಲು ಸತ್ತವರ ಸಂಖ್ಯೆ 164 ಎಂದು ತಿಳಿಸಲಾಗಿತ್ತು.
ಜನವರಿ 2ರಂದು ಈ ಪ್ರತಿಭಟನೆಗಳು ಆರಂಭವಾಗಿದ್ದವು. ಮೃತರಲ್ಲಿ 19 ಮಂದಿ ಪೊಲೀಸ್ ಅಥವಾ ಸರ್ಕಾರಿ ಅಧಿಕಾರಿಗಳೂ ಸೇರಿದ್ದಾರೆ. 4,300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಕ್ರಿಮಿನಲ್ ಪ್ರಾಸಿಕ್ಯೂಷನ್ ಸರ್ವಿಸ್‌ನ ಮುಖ್ಯಸ್ಥ ಸೆರೆಕ್ ಶಲಬಯೆವ್ ಅವರನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಹಿಂಸಾಚಾರ ತಡೆಗಟ್ಟುವ ಸಲುವಾಗಿ ಕಜಕಿಸ್ತಾನದ ಅಧ್ಯಕ್ಷ ಕಸ್ಸಿಮ್–ಜೊಮರ್ಟ್ ಟೊಕಯೆವ್ ಅವರ ಕೋರಿಕೆಯ ಮೇರೆಗೆ ರಷ್ಯಾವು ತನ್ನ 2 ಸಾವಿರ ಸೈನಿಕರನ್ನು ಕಳುಹಿಸಿಕೊಟ್ಟಿತ್ತು.
Read more from source
[wpas_products keywords=”deals of the day offer today electronic”]