Source : The New Indian Express
ಭುವನೇಶ್ವರ: ಒಡಿಶಾದ ರೂರ್ಕೆಲಾ ಮಹಾನಗರ ಪಾಲಿಕೆ (ಆರ್ ಎಂ ಸಿ) ನಗರದ ತ್ಯಾಜ್ಯ ಸಮಸ್ಯೆಗೆ ಸರಳ ಹಾಗೂ ಪರಿಸರಸ್ನೇಹಿ ಪರಿಹಾರವನ್ನು ಕಂಡುಕೊಂಡಿದೆ.
ಇದನ್ನೂ ಓದಿ: ತ್ಯಾಜ್ಯದಲ್ಲಿ ಸಿಕ್ಕ 100 ಗ್ರಾಂ ಚಿನ್ನದ ನಾಣ್ಯವನ್ನು ಮಾಲೀಕರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಪೌರ ಕಾರ್ಮಿಕ ಮಹಿಳೆ!
ನಗರದಾದ್ಯಂತ ಪ್ರತ್ಯೇಕವಾಗಿ ಸಂಗ್ರಹಿಸಲಾಗುವ ಒಣ ತ್ಯಾಜ್ಯವನ್ನು ರೀಸೈಕಲ್ ಮಾಡಿ ಮಾರಾಟ ಮಾಡಿದರೆ, ದ್ರವ ತ್ಯಾಜ್ಯವನ್ನು ಗೊಬ್ಬರವನ್ನಾಗಿಸಿ ಮಾರಾಟ ಮಾಡಲಾಗುತ್ತಿದೆ.
ಇದನ್ನೂ ಓದಿ: ಚಿಕನ್, ಫಿಶ್ ತ್ಯಾಜ್ಯದಿಂದ ಪರಿಸರಸ್ನೇಹಿ ಉತ್ಪನ್ನ ತಯಾರಿ: ಪಿಯುಸಿ ವಿದ್ಯಾರ್ಥಿನಿಗೆ ರಾಷ್ಟ್ರಪತಿ ಪ್ರಶಸ್ತಿ
ನಗರದಲ್ಲಿ ಒಟ್ಟು 8 ಮೈಕ್ರೊ ಕಾಂಪೋಸ್ಟಿಂಗ್ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳಲ್ಲಿ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಡಿಸ್ಪೋಸಲ್ ಮಾಡಲಾಗುತ್ತಿದೆ.
ಇದನ್ನೂ ಓದಿ: ಸಸ್ಯಗಳನ್ನು ಬಳಸಿ ಕರೆಂಟ್ ಉತ್ಪಾದನೆ: ಭಾರತದ ಐಐಟಿ ಸಂಶೋಧಕರ ವಿನೂತನ ಪ್ರಯತ್ನ
ಮೊದಲಿಗೆ ತ್ಯಾಜ್ಯವನ್ನು ಒಣ ಮತ್ತು ದ್ರವ ಎಂದು ಪ್ರತ್ಯೇಕಿಸಲಾಗುವುದು. ನಂತರ ದ್ರವ ತ್ಯಾಜ್ಯವನ್ನು ಪರಿಷ್ಕರಿಸಿ ಸಾವಯವ ಗೊಬ್ಬರವನ್ನಾಗಿ ಮಾರ್ಪಾಡು ಮಾಡಲಾಗುತ್ತಿದೆ. ಪುನರ್ಬಳಕೆಗೆ ಯೋಗ್ಯವಲ್ಲದ ಪ್ಲಾಸ್ಟಿಕ್ ವಸ್ತುಗಳನ್ನು ದಾಲ್ಮಿಯಾ ಸಿಮೆಂಟ್ ಕಾರ್ಖಾನೆಗೆ ಕಳಿಸಿಕೊಡಲಾಗುವುದು. ಒಣ ತ್ಯಾಜ್ಯವನ್ನು ರೀಸೈಕಲ್ ಮಾಡಲಾಗುತ್ತಿದೆ.
ಇದನ್ನೂ ಓದಿ: ಬೆಂಗಳೂರಿನ ಕೋರಮಂಗಲದ ಘನ ತ್ಯಾಜ್ಯ ನಿರ್ವಹಣೆ ಮಾದರಿ ಯಲಹಂಕದಲ್ಲಿ ನಿರ್ಮಾಣ
ಈ ರೀತಿಯಾಗಿ ತ್ಯಾಜ್ಯವನ್ನು ಪರಿಸರಸ್ನೇಹಿ ಮಾರ್ಗಗಳಿಂದ ಪರಿಷ್ಕರಿಸಿ ವ್ಯರ್ಥವಾಗದಂತೆ ಪುನರ್ಬಳಕೆ ಮಾಡುವ ವಿಧಾನವನ್ನು ಅಳವಡಿಸಿಕೊಳ್ಳುವುದರ ಮೂಲಕ ರೂರ್ಕೆಲ ಮಾದರಿಯೆನಿಸಿಕೊಂಡಿದೆ.
ಇದನ್ನೂ ಓದಿ: ಘನತ್ಯಾಜ್ಯ ನಿರ್ವಹಣೆಗೆ ಕ್ರಿಯಾ ಯೋಜನೆ ಇಲ್ಲದೆ ಹೇಗೆ ವಿಲೇವಾರಿ ಮಾಡುತ್ತಿದ್ದೀರಿ: ಬಿಬಿಎಂಪಿಗೆ ಹೈಕೋರ್ಟ್ ಪ್ರಶ್ನೆ