ಹೈಲೈಟ್ಸ್:
- ‘ಗೋಲ್ಡನ್ ಗ್ಯಾಂಗ್’ ಶೋನಲ್ಲಿ ‘ಮುಂಗಾರು ಮಳೆ’ ಸಿನಿಮಾ ತಂಡ
- ‘ಮುಂಗಾರು ಮಳೆ’ ಸಿನಿಮಾ ಕುರಿತು ಆಸಕ್ತಿಕರ ಮಾಹಿತಿ ಹಂಚಿಕೊಂಡ ಟೀಮ್
- ಮೊದಲು ‘ಚುಮ್ಮಾ’ ಅಂತ ಟೈಟಲ್ ಫಿಕ್ಸ್ ಮಾಡಿದ್ದ ಯೋಗರಾಜ್ ಭಟ್
‘ಚುಮ್ಮಾ’ ಅಂತ ಹೆಸರಿಟ್ಟಿದ್ದ ಯೋಗರಾಜ್ ಭಟ್
ಈ ವಿಚಾರವನ್ನು ಸ್ವತಃ ನಟ ಗಣೇಶ್ ಹಂಚಿಕೊಂಡಿದ್ದಾರೆ. ‘ನಮ್ಮ ಪ್ರೊಡಕ್ಷನ್ ಟೀಮ್‌ನಲ್ಲಿ ಒಬ್ಬ ಹುಡುಗನಿದ್ದ ಅವನ ಹೆಸರು ಚುಮ್ಮಾ ಅಂತ. ಎಲ್ಲರೂ ಅವನನ್ನು ‘ಚುಮ್ಮಾ ಟೀ ಕೊಡು, ಚುಮ್ಮಾ ಕಾಫೀ ಕೊಡು..’ ಅಂತ ಹೀಗೆ ಒಂದಲ್ಲ ಒಂದು ಕೆಲಸಕ್ಕೆ ಅವನನ್ನು ಕರೆಯುತ್ತಲೇ ಇದ್ದರು. ಭಟ್ಟರಿಗೆ ಆ ಹೆಸರು ತುಂಬ ಇಷ್ಟ ಆಗಿಬಿಡ್ತು. ನನ್ನ ಕರೆದು, ‘ಗಣಪ.. ಟೈಟಲ್ ಸಿಕ್ತು ಕಣೋ..’ ಅಂದ್ರು. ‘ಹೌದಾ, ಏನ್ ಭಟ್ರೇ..’ ಅಂತ ನಾನು ಕೇಳಿದೆ. ಅದಕ್ಕವರು ‘ಚುಮ್ಮಾ..’ ಅಂತ ಹೇಳಿದ್ರು.. ಇದಕ್ಕೆ ಓಕೆ ಅನ್ನಬೇಕಾ, ಬಿಡಬೇಕಾ ಒಂದು ಗೊತ್ತಾಗ್ತಾ ಇರಲಿಲ್ಲ..’ ಎಂದು ಗಣೇಶ್ ಹಳೆಯ ನೆನಪುಗಳನ್ನು ನೆನೆದಿದ್ದಾರೆ. ಅಂದಹಾಗೆ, ಈ ಸಿನಿಮಾಗೆ ‘ಹನಿ ಹನಿ’ ಅಂತಲೂ ಹೆಸರಿಟ್ಟಿದ್ದರಂತೆ.
‘ಮಳೆ’ ಶೀರ್ಷಿಕೆ ಫೈನಲ್ ಮಾಡಿದ್ದ ಭಟ್ಟರು
ನಂತರ ಮಾತನಾಡಿದ ಯೋಗರಾಜ್ ಭಟ್, ‘ನಾನು ‘ಮಳೆ’ ಅಂತ ಟೈಟಲ್ ಇಟ್ಟಿದ್ದೆ. ಒಂದಷ್ಟು ಜನಕ್ಕೆ ಅದು ಇಷ್ಟವಾಗಿ, ಓಕೆ ಕೂಡ ಆಗಿತ್ತು. ಆದರೆ, ‘ಬರೀ ಮಳೆ ಅಂತ ಇಡಬ್ಯಾಡ್ರಪ್ಪ.. ರೈತಾಪಿ ಜನರಿಗೆಲ್ಲ ಸಿನಿಮಾ ತಾಗಬೇಕು, ಒಂದು ಜಾನಪದ ಫೀಲ್ ಬರ್ತದೆ, ಮುಂಗಾರು ಮಳೆ ಅಂತ ಇಡಿ’ ಎಂದು ನಮ್ಮ ನಿರ್ಮಾಪಕ ಗಂಗಾಧರ್ ಹೇಳಿದ್ರು. ಅದು ಮುಂಗಾಳೆ ಮಳೆ ಸೀಸನ್ ಕೂಡ ಆಗಿತ್ತು’ ಎಂದು ಯೋಗರಾಜ್ ಭಟ್ ಹೇಳಿದ್ದಾರೆ. ಅಲ್ಲಿಗೆ ಈ ಸಿನಿಮಾಕ್ಕೆ ‘ಮುಂಗಾರು ಮಳೆ’ ಅನ್ನೋ ಬ್ಯೂಟಿಫುಲ್ ಟೈಟಲ್ ಕೊಟ್ಟಿದ್ದು ನಿರ್ಮಾಪಕರು.
‘ಗೋಲ್ಡನ್ ಗ್ಯಾಂಗ್’ ಜೊತೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ‘ಗೋಲ್ಡನ್ ಸ್ಟಾರ್’ ಗಣೇಶ್; ಯಾವಾಗ ಪ್ರಸಾರ?
ಇಡೀ ಸಿನಿಮಾದಲ್ಲಿ ಇಂಥದ್ದೇ ಕೆಲಸ ಇವರೇ ಮಾಡಬೇಕು ಎಂಬ ನಿಯಮ ಇರಲಿಲ್ಲ. ಎಲ್ಲರೂ ತಮಗನ್ನಿಸಿದ ಕೆಲಸಗಳನ್ನು ಮಾಡುತ್ತಿದ್ದರು. ವಿಶೇಷವೆಂದರೆ, ಈ ಸಿನಿಮಾಗೆ ವಸ್ತ್ರ ವಿನ್ಯಾಸ ಮಾಡಿದ್ದು ಸ್ಕ್ರಿಪ್ಟ್ ರೈಟರ್ ಪ್ರೀತಮ್ ಗುಬ್ಬಿ. ಹೀಗೆ ದೊಡ್ಡ ಇಂಡಸ್ಟ್ರೀ ಹಿಟ್ ಎನಿಸಿಕೊಂಡ ‘ಮುಂಗಾರು ಮಳೆ’ ಕುರಿತು ಅನೇಕ ವಿಚಾರಗಳನ್ನು ಗೋಲ್ಡನ್ ಗ್ಯಾಂಗ್ ಶೋನಲ್ಲಿ ಚಿತ್ರತಂಡ ಹಂಚಿಕೊಂಡಿದೆ.
ಗಣೇಶ್ ‘ಗೋಲ್ಡನ್ ಗ್ಯಾಂಗ್’ ಶೋನಲ್ಲಿ ‘ಮುಂಗಾರು ಮಳೆ’ ಟೀಮ್; ಏನೆಲ್ಲ ಚರ್ಚೆ ಆಯ್ತು?
Read more
[wpas_products keywords=”deal of the day party wear dress for women stylish indian”]