ಬೆಂಗಳೂರು: ದೇಶದಲ್ಲಿ ಇದುವರೆಗೆ ಬರೋಬ್ಬರಿ 156.76 ಕೋಟಿಗೂ ಅಧಿಕ ಡೋಸ್ ಕೋವಿಡ್ ತಡೆ ಲಸಿಕೆ ವಿತರಿಸಲಾಗಿದೆ ಎಂದು ಕರ್ನಾಟಕ ಬಿಜೆಪಿ ಘಟಕವು ತಿಳಿಸಿದೆ.
ದೇಶದಲ್ಲಿ ಕೋವಿಡ್ ತಡೆ ಲಸಿಕೆ ಅಭಿಯಾನ ಆರಂಭವಾಗಿ ಒಂದು ವರ್ಷ ಕಳೆದಿರುವ ಹಿನ್ನೆಲೆಯಲ್ಲಿ ಸರಣಿ ಟ್ವೀಟ್‌ಗಳನ್ನು ಮಾಡಿರುವ ʼಬಿಜೆಪಿ ಕರ್ನಾಟಕʼ, ವಿಶ್ವದ ಅತಿ ದೊಡ್ಡ ಲಸಿಕಾ ಅಭಿಯಾನದಲ್ಲಿ ಭಾರತದ ಅರ್ಹ ಜನಸಂಖ್ಯೆಯ ಶೇ 92 ರಷ್ಟು ಜನರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. ದೇಶದ ಶೇ 70 ರಷ್ಟು ಅರ್ಹ ಜನರು ಸಂಪೂರ್ಣ ಲಸಿಕೆ ಪಡೆದಿದ್ದಾರೆʼ ಎಂದು ಮಾಹಿತಿ ನೀಡಿದೆ.
ಮತ್ತೊಂದು ಟ್ವೀಟ್‌ನಲ್ಲಿ, ಭಾರತದ ಲಸಿಕಾ ಅಭಿಯಾನವು ಜಗತ್ತಿನ ಅನೇಕ ಪ್ರಮುಖ ದೇಶಗಳಿಗಿಂತ ವೇಗವಾಗಿ ನಡೆಯುತ್ತಿದೆ. ದೇಶದಲ್ಲಿ ಒಂದು ವರ್ಷದಲ್ಲಿ ಪ್ರತಿದಿನ ಸರಾಸರಿ 4.26 ಮಿಲಿಯನ್ (42.6 ಲಕ್ಷ) ಜನರಿಗೆ ಲಸಿಕೆ ನೀಡಲಾಗಿದೆ ಎಂದೂ ಹೇಳಿದೆ.
ಯುಎಸ್‌ಎ, ಯುಕೆ, ಜರ್ಮನಿ, ಫ್ರಾನ್ಸ್, ರಷ್ಯಾದಂತಹ ದೇಶಗಳಿಗೆ ಹೋಲಿಸಿದರೆ, ಭಾರತದಲ್ಲಿ ಒಂದು ವರ್ಷದಲ್ಲಿ ಅತಿ ಹೆಚ್ಚು ಲಸಿಕೆ ನೀಡಲಾಗಿದೆ ಎಂದೂ ಮಾಹಿತಿ ನೀಡಿದೆ.
ವಿಶ್ವದ ಅತಿ ದೊಡ್ಡ ಲಸಿಕಾ ಅಭಿಯಾನದಲ್ಲಿ ಇದುವರೆಗೆ 156.76 ಕೋಟಿಗೂ ಅಧಿಕ ಡೋಸ್ ಲಸಿಕೆ ವಿತರಿಸಲಾಗಿದೆ. #LargestVaccinationDrive #IndiaFightsCorona #JanJagaranAbhiyaan pic.twitter.com/LWtiu9jmhC
— BJP Karnataka (@BJP4Karnataka) January 16, 2022
ವಿಶ್ವದ ಅತಿ ದೊಡ್ಡ ಲಸಿಕಾ ಅಭಿಯಾನದಲ್ಲಿ ಭಾರತದ ಅರ್ಹ ಜನಸಂಖ್ಯೆಯ 92% ರಷ್ಟು ಜನರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ.
ದೇಶದ 70% ರಷ್ಟು ಅರ್ಹ ಜನಸಂಖ್ಯೆ ಸಂಪೂರ್ಣ ಲಸಿಕೆ ಪಡೆದಿದ್ದಾರೆ.#1YearOfVaccineDrive pic.twitter.com/ZCwQNqgDhi
— BJP Karnataka (@BJP4Karnataka) January 16, 2022
ಭಾರತದ ಲಸಿಕಾ ಅಭಿಯಾನವು ಜಗತ್ತಿನ ಅನೇಕ ಪ್ರಮುಖ ದೇಶಗಳಿಗಿಂತ ವೇಗವಾಗಿ ನಡೆಯುತ್ತಿದೆ.
ಭಾರತದಲ್ಲಿ ಒಂದು ವರ್ಷದಲ್ಲಿ ದೈನಂದಿನ ಸರಾಸರಿ 4.26 ಮಿಲಿಯನ್ ಜನರಿಗೆ ಲಸಿಕೆ ನೀಡಲಾಗಿದೆ. #1YearOfVaccineDrive pic.twitter.com/S2akaINoZN
— BJP Karnataka (@BJP4Karnataka) January 16, 2022
ಭಾರತದ ಲಸಿಕಾ ಅಭಿಯಾನವು ಜಗತ್ತಿನ ಅನೇಕ ಪ್ರಮುಖ ದೇಶಗಳಿಗಿಂತ ವೇಗವಾಗಿ ಮುನ್ನಡೆಯುತ್ತಿದೆ.
ಯುಎಸ್‌ಎ, ಯುಕೆ, ಜರ್ಮನಿ, ಫ್ರಾನ್ಸ್, ರಷ್ಯಾದಂತಹ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಒಂದು ವರ್ಷದಲ್ಲಿ ಅತಿ ಹೆಚ್ಚು ಲಸಿಕೆ ನೀಡಲಾಗಿದೆ.#1YearOfVaccineDrive pic.twitter.com/CmoNBSy7yv
— BJP Karnataka (@BJP4Karnataka) January 16, 2022
Read more from source
[wpas_products keywords=”deal of the day sale today kitchen”]