
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್
ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಂಸ್ಥೆ ಮೌಲ್ಯ 69,503.71 ಕೋಟಿ ರು ಇಳಿಕೆ ಕಂಡು 17,17,265.94 ರು ಆಗಿದೆ. ಎರಡನೇ ಅತಿ ದೊಡ್ಡ ಸಾಫ್ಟ್ ವೇರ್ ರಫ್ತು ಸಂಸ್ಥೆ ಇನ್ಫೋಸಿಸ್ ಕಳೆದ ಒಂದು ವಾರದಲ್ಲಿ 48,385.63 ಕೋಟಿ ರು ಮೌಲ್ಯ ಇಳಿಸಿಕೊಂಡು 8,10,927.25 ಕೋಟಿ ರು ಮೌಲ್ಯ ಹೊಂದಿದೆ.

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್
ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್(ಟಿಸಿಎಸ್) 42,317.15 ಕೋಟಿ ರು ಕುಸಿತ ಕಂಡು 14,68,245.97 ಕೋಟಿ ರು ಮೌಲ್ಯ ಕಂಡಿದೆ. ಎಚ್‌ಡಿಎಫ್‌ಸಿ 21,125.41 ಕೋಟಿ ರು ಇಳಿಕೆ ಕಂಡು 4,91,426.13 ಕೋಟಿ ರು ತಲುಪಿದೆ.

ಐಸಿಐಸಿಐ ಬ್ಯಾಂಕ್
ಐಸಿಐಸಿಐ ಬ್ಯಾಂಕ್ 18,650.77 ಕೋಟಿ ರು ಏರಿಕೆ ಕಂಡು 5,69,511.37 ಕೋಟಿ ರು ತಲುಪಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 15,127.22 ಕೋಟಿ ರು ಏರಿಸಿಕೊಂಡು 4,53,593.38 ಕೋಟಿ ರು ಮೌಲ್ಯಕ್ಕೆ ಏರಿದೆ.

ಬಜಾಜ್ ಫೈನಾನ್ಸ್
ಬಜಾಜ್ ಫೈನಾನ್ಸ್ 10,291.28 ಕೋಟಿ ರು ಏರಿಸಿಕೊಂಡು 4,72,686.80 ಕೋಟಿ ರುಗೆ ಹೆಚ್ಚಳ ಕಂಡಿದೆ. ಭಾರ್ತಿ ಏರ್ ಟೆಲ್ ಸಂಸ್ಥೆ ಮೌಲ್ಯಗಳು 8,760.41 ಕೋಟಿ ರು ಏರಿಸಿಕೊಂಡು 3,95,810.41 ಕೋಟಿ ರುಗೆ ಹೆಚ್ಚಳ ಕಂಡಿದೆ.

ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್
ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ 12,217.88 ಕೋಟಿ ರು ಏರಿಕೆ ಕಂಡು 5,55,560.85 ಕೋಟಿ ರು ಮೌಲ್ಯ ಉಳಿಸಿಕೊಂಡಿದೆ. ಇದೇ ವೇಳೆ ಎಚ್‌ಡಿಎಫ್‌ಸಿ ಬ್ಯಾಂಕ್ 2,854.33 ಕೋಟಿ ರು ಮೌಲ್ಯ ಇಳಿಕೆ ಕಂಡು 8,56,439.28 ಕೋಟಿ ರು ತಲುಪಿದೆ.

ಟಾಪ್ 10 ಕಂಪನಿಗಳು
ಒಟ್ಟಾರೆ, ಟಾಪ್ 10 ಕಂಪನಿಗಳು: ರಿಲಯನ್ಸ್ ಇಂಡಸ್ಟ್ರೀಸ್, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಇನ್ಫೋಸಿಸ್, ಐಸಿಐಸಿಐ ಬ್ಯಾಂಕ್, ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್, ಎಚ್‌ಡಿಎಫ್‌ಸಿ, ಬಜಾಜ್ ಫೈನಾನ್ಸ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಭಾರ್ತಿ ಏರ್ ಟೆಲ್.
Read more…
[wpas_products keywords=”deal of the day”]