Karnataka news paper

ತ್ವರಿತಗತಿಯಲ್ಲಿ ರಾಮ ಮಂದಿರದ ಕಾಮಗಾರಿ; ಜನವರಿ ಅಂತ್ಯಕ್ಕೆ ಅಡಿಪಾಯದ 2 ನೇ ಹಂತ ಪೂರ್ಣ


PTI

ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದ್ದು,  ಅಡಿಪಾಯದ 2 ನೇ ಹಂತ ಜನವರಿ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಟ್ರಸ್ಟ್ ನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಂದಿರ ನಿರ್ಮಾಣದ ಕಾಮಗಾರಿ ಹಗಲಿರುಳು ನಡೆಯುತ್ತಿದ್ದು, ಈ ಕಾಮಗಾರಿಯ ಪ್ರಕ್ರಿಯೆಗಳನ್ನು 3 ಡಿ ಆನಿಮೇಷನ್ ಮೂಲಕ ಜನರಿಗೆ ತಿಳಿಸಲಾಗುತ್ತಿದೆ. ಇತ್ತೀಚೆಗಷ್ಟೇ 3 ಡಿ ಆನಿಮೇಷನ್ ನ್ನು ಯೂಟ್ಯೂಬ್ ನಲ್ಲಿಯೂ ಪ್ರಕಟಿಸಲಾಗಿದೆ ಎಂದು ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮಾಹಿತಿ ನೀಡಿದ್ದಾರೆ.

2.7 ಎಕರೆ ಪ್ರದೇಶದಲ್ಲಿ ಮುಖ್ಯ ಮಂದಿರ ನಿರ್ಮಾಣವಾಗಿದ್ದು ದೇವಾಲಯದ ಒಟ್ಟಾರೆ ಪ್ರದೇಶ 57,400 ಚದರ ಅಡಿ ಇರಲಿದೆ. 

ದೇವಾಲಯ 161 ಅಡಿಗಳಷ್ಟು ಎತ್ತರ ಇರಲಿದ್ದು ಮೂರು ಅಂತಸ್ತುಗಳನ್ನು ಹೊಂದಿರಲಿದೆ. 17,000 ಕಲ್ಲುಗಳನ್ನು ದೇವಾಲಯದ ನಿರ್ಮಾಣಕ್ಕಾಗಿ ಬಳಸಲಾಗುತ್ತಿದೆ. 2020 ರ ಆ.05 ರಂದು ಪ್ರಧಾನಿ ನರೇಂದ್ರ ಮೋದಿ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು.



Read more

[wpas_products keywords=”deal of the day”]