Karnataka news paper

ವಿಷಪೂರಿತ ಮದ್ಯ ಸೇವಿಸಿ ಬಿಹಾರದಲ್ಲಿ 5 ಮಂದಿ ಸಾವು


Online Desk

ನಳಂದಾ: ಬಿಹಾರದ ನಳಂದಾದಲ್ಲಿ ವಿಷಪೂರಿತ ಮದ್ಯಸೇವನೆ ಮಾಡಿದ ಪರಿಣಾಮ ಐದು ಮಂದಿ ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ.  

ಸೊಹ್ಸರಾಯ್ ಪೊಲೀಸ್ ಠಾಣೆ ವ್ಯಾಪ್ತಿಯ ಛೋಟಿ ಪಹಾಡಿ ಮತ್ತು ಪಹಾಡ್ ತಲ್ಲಿ ಎಂಬ ಗ್ರಾಮಗಳಲ್ಲಿ ಘಟನೆ ನಡೆದಿದ್ದು, ಐವರು ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ. 

ಮದ್ಯ ಸೇವನೆ ಮಾಡಿದ ಬಳಿಕ ಆರೋಗ್ಯ ತೀವ್ರವಾಗಿ ಹದಗೆಟ್ಟಿತ್ತು. ಬಳಿಕ ಸಾವನ್ನಪ್ಪಿದರು ಎಂದು ಮೃತರ ಸಂಬಂಧಿಗಳು ಹೇಳಿದ್ದಾರೆ.
 
ಈ ನಡುವೆ ಛೋಟಿ ಪಹಾಡಿ ಮತ್ತು ಪಹಾಡ್ತಲ್ಲಿ ಪ್ರದೇಶಗಳಿಗೆ ಆಗಮಿಸಿದ ಡಿಎಸ್‌ಪಿ ಮತ್ತು ಎಸ್‌ಎಚ್‌ಒ ತನಿಖೆ ಆರಂಭಿಸಿದ್ದಾರೆ.



Read more

[wpas_products keywords=”deal of the day”]