Karnataka news paper

ಕಿರಿಯರ ವಿಶ್ವಕಪ್‌: ದಕ್ಷಿಣ ಆಫ್ರಿಕಾಕ್ಕೆ ಸೋಲುಣಿಸಿದ ಯಂಗ್‌ ಇಂಡಿಯಾ!


ಹೈಲೈಟ್ಸ್‌:

  • ವೆಸ್ಟ್‌ ಇಂಡೀಸ್‌ ಆತಿಥ್ಯದಲ್ಲಿ ನಡೆಯುತ್ತಿರುವ ಐಸಿಸಿ ಕಿರಿಯರ ವಿಶ್ವಕಪ್‌ ಟೂರ್ನಿ.
  • ದಕ್ಷಿಣ ಆಫ್ರಿಕಾ ಎದುರು 45 ರನ್‌ಗಳ ಭರ್ಜರಿ ಜಯ ದಾಖಲಿಸಿದ ಯಂಗ್‌ ಇಂಡಿಯಾ.
  • ಐದು ವಿಕೆಟ್‌ ಕಿತ್ತು ಮಿಂಚಿದ ಸ್ಪಿನ್ನರ್‌ ವಿಕಿ ಓಸ್ತ್ವಾಲ್‌, ಕ್ಯಾಪ್ಟನ್‌ ಯಶಸ್‌ ಅರ್ಧಶತಕ.

ಜಾರ್ಜ್‌ಟೌನ್‌: ಕ್ಯಾಪ್ಟನ್‌ ಯಶ್‌ ಧುಲ್‌ (82) ಭರ್ಜರಿ ಬ್ಯಾಟಿಂಗ್‌ ಮತ್ತು ವಿಕಿ ಓಸ್ತ್ವಾಲ್‌ (28ಕ್ಕೆ 5) ಅವರ ಸ್ಪಿನ್‌ ಮೋಡಿಯ ಬಲದಿಂದ ಮಿಂಚಿದ ಯಂಗ್‌ ಟೀಮ್ ಇಂಡಿಯಾ, ದಕ್ಷಿಣ ಆಫ್ರಿಕಾ ಎದುರು ಜಯ ದಾಖಲಿಸಿ ಐಸಿಸಿ ಕಿರಿಯರ ವಿಶ್ವಕಪ್‌ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

ಗಯಾನದ ಪ್ರಾವಿಡನ್ಸ್ ಕ್ರರೀಡಾಂಗಣದಲ್ಲಿ ಗ್ರೂಪ್‌ ‘ಬಿ’ ವಿಭಾಗದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಭಾರತ ತಂಡ 45 ರನ್‌ಗಳ ಜಯ ದಾಖಲಿಸಿದೆ. ಯಶ್‌ ಧುಲ್‌ ಸಾರಥ್ಯದ ಭಾರತ ಕಿರಿಯರ ತಂಡ ತನ್ನ ಮುಂದಿನ ಪಂದ್ಯದಲ್ಲಿ ಐರ್ಲೆಂಡ್‌ ವಿರುದ್ಧ ಪೈಪೋಟಿ ನಡೆಸಲಿದೆ.

ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡಿದ ಭಾರತ ಕಿರಿಯರ ತಂಡ 11 ರನ್‌ ಗಳಿಸುವ ಹೊತ್ತಿಗೆ ತನ್ನ ಇಬ್ಬರೂ ಓಪನರ್‌ಗಳನ್ನು ಕಳೆದುಕೊಂಡಿತ್ತು. ವೇಗಿ ಅಫ್ಯೂ ನಿಯಾಂಡ (29ಕ್ಕೆ 2) ಭರ್ಜರಿ ದಾಳಿ ನಡೆಸಿ ಓಪನರ್‌ಗಳಾದ ಅಂಗಕ್ರಿಶ್‌ ರಘುವಂಶಿ (5) ಮತ್ತು ಹರ್ನೂರ್‌ ಸಿಂಗ್‌ (1) ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಬೀಳಿಸಿದರು.

ಕಿರಿಯರ ಏಷ್ಯಾ ಕಪ್‌: ಬಾಂಗ್ಲಾ ಬಗ್ಗುಬಡಿದು ಫೈನಲ್‌ ತಲುಪಿದ ಭಾರತ!

ಆದರೆ, ನಂತರ ಜೊತೆಯಾದ ಸ್ಟಾರ್‌ ಬ್ಯಾಟ್ಸ್‌ಮನ್‌ ಶೇಖ್‌ ರಶೀದ್‌ (31) ಮತ್ತು ಕ್ಯಾಪ್ಟನ್‌ ಯಶಸ್‌ ಧುಲ್‌ (82) ಮೂರನೇ ವಿಕೆಟ್‌ಗೆ 71 ರನ್‌ಗಳ ಜೊತೆಯಾಟವನ್ನಾಡಿ ತಂಡವನ್ನು ಮೇಲೆತ್ತಿದರು. ಇನಿಂಗ್ಸ್‌ ಮಧ್ಯದಲ್ಲಿ ನಿಶಾಂತ್‌ ಸಂಧೂ (27) ಮತ್ತು ಕೌಶಲ್‌ ತಾಂಬೆ (35) ಕೊಟ್ಟ ಕೊಡುಗೆ ಪರಿಣಾಮ ಭಾರತ ತಂಡ 46.5 ಓವರ್‌ಗಳಲ್ಲಿ 232 ರನ್‌ಗಳಿಗೆ ಆಲ್‌ಔಟ್‌ ಆಯಿತು.

ದಕ್ಷಿಣ ಆಫ್ರಿಕಾ ಪರ ಅಫ್ಯೂ ನಿಯಾಂಡ ಹೊರತಾಗಿ, ಮ್ಯಾಥ್ಯೂ ಬೋಸ್ಟ್‌ (40ಕ್ಕೆ 3) ಮತ್ತು ಡೆವಾಲ್ಡ್‌ ಬ್ರೇವಿಸ್‌ (43ಕ್ಕೆ 2) ವಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿ ಭಾರತೀಯ ಬ್ಯಾಟ್ಸ್‌ಮನ್‌ಗಳ ಅಬ್ಬರಕ್ಕೆ ಬ್ರೇಕ್‌ ಹಾಕಿದರು.

ಯಂಗ್‌ ಇಂಡಿಯಾದ ಭರ್ಜರಿ ಬೌಲಿಂಗ್‌
ಎದುರಾಳಿಗೆ 233 ರನ್‌ಗಳ ಸಾಧಾರಣ ಗುರಿ ನೀಡಿದರೂ ಭಾರತದ ಯುವ ಪಡೆ ಆತ್ಮವಿಶ್ವಾಸ ಕಳೆದುಕೊಳ್ಳಲಿಲ್ಲ. ಬೇಬಿ ಡಿವಿಲಿಯರ್ಸ್‌ ಖ್ಯಾತಿಯ ಡೇವಿಡ್‌ ಬ್ರೆವಿಸ್‌ (65) ಅರ್ಧಶತಕ ಬಾರಿಸಿದರೂ, ಯಂಗ್‌ ಇಂಡಿಯಾದ ಸ್ಪಿನ್ನರ್‌ ವಿಕಿ ಓತ್ಸ್ವಾಲ್‌ (28ಕ್ಕೆ 5) ಮತ್ತು ವೇಗಿ ರಾಜ್‌ ಬಾವಾ (47ಕ್ಕೆ 4) ಭರ್ಜರಿ ದಾಳಿ ನಡೆಸಿ ಎದುರಾಳಿಯನ್ನು 187 ರನ್‌ಗಳಿಗೆ ಆಲ್‌ಔಟ್‌ ಮಾಡಿದರು.

ಲಂಕಾ ಕದನ ಗೆದ್ದು ಏಷ್ಯಾ ಕಪ್‌ ಮುಡಿಗೇರಿಸಿಕೊಂಡ ಯಂಗ್‌ ಇಂಡಿಯಾ!

ಸಂಕ್ಷಿಪ್ತ ಸ್ಕೋರ್‌
ಭಾರತ: 46.5 ಓವರ್‌ಗಳಲ್ಲಿ 232 ರನ್‌ಗಳಿಗೆ ಆಲ್‌ಔಟ್‌ (ಯಶ್‌ ಧುಲ್‌ 82, ಶೇಖ್‌ ರಶೀದ್‌ 31, ನಿಶಾಂತ್‌ ಸಿಂಧೂ 27, ಕುಶಲ್‌ ತಾಂಬೆ 35; ಮ್ಯಾಥ್ಯೂ ಬೋಸ್ಟ್‌ 40ಕ್ಕೆ 3, ಅಫ್ಯೂ ನಿಯಾಂಡ 29ಕ್ಕೆ 2, ಡೇವಿಡ್‌ ಬ್ರೆವಿಸ್‌ 43ಕ್ಕೆ 2)
ದಕ್ಷಿಣ ಆಫ್ರಿಕಾ: 45.4 ಓವರ್‌ಗಳಲ್ಲಿ 187 ರನ್‌ಗಳಿಗೆ ಆಲ್‌ಔಟ್‌ (ವ್ಯಾಲೆಂಟೈನ್‌ ಕಿಟೈಮ್‌ 25, ಡೇವಿಡ್‌ ಬ್ರೆವಿಸ್‌ 65, ಜಾರ್ಜ್‌ ವ್ಯಾನ್‌ ಹೀರ್ಡೆನ್‌ 36; ವಿಕಿ ಓತ್ಸ್ವಾಲ್‌ 28ಕ್ಕೆ 5, ರಾಜ್‌ ಬಾವಾ 47ಕ್ಕೆ 4).



Read more

[wpas_products keywords=”deal of the day gym”]