ಹೈಲೈಟ್ಸ್:
- ಜನವರಿ 16 ರಾಷ್ಟ್ರೀಯ ಸ್ಟಾರ್ಟ್‌ಅಪ್ ದಿನವಾಗಿ ಆಚರಣೆ ಎಂದ ಪ್ರಧಾನಿ
- ಭಾರತದ ಸ್ಟಾರ್ಟ್‌ಅಪ್‌ಗಳ ಸುವರ್ಣ ಯುಗ ಈಗ ಆರಂಭವಾಗಿದೆ-ಮೋದಿ
- ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬೆಳವಣಿಗೆ ಅವಕಾಶ ಹೊಂದಿವೆ
- ಜಗತ್ತಿನಲ್ಲಿಯೇ ಮೂರನೇ ಅತಿ ಹೆಚ್ಚು ಯುನಿಕಾರ್ನ್ ಹೊಂದಿರುವ ಭಾರತ
ವರ್ಷದ ಹಿಂದೆ 500ರಷ್ಟಿದ್ದ ಭಾರತದ Startups ಸಂಖ್ಯೆ ಈಗ 60,000ಕ್ಕೆ ಜಿಗಿದಿದೆ. ಕಳೆದ ವರ್ಷ 42 ಯುನಿಕಾರ್ನ್‌ಗಳು ಆರಂಭವಾಗಿವೆ. ಇದು ಸ್ವಾವಲಂಬಿ ಮತ್ತು ಆತ್ಮವಿಶ್ವಾಸಿ ಭಾರತವನ್ನು ಸಂಕೇತಿಸುತ್ತಿದೆ. ಭಾರತದಲ್ಲಿ ಪ್ರಸ್ತುತ 82 ಯುನಿಕಾರ್ನ್‌ಗಳಿವೆ. ಪ್ರತಿಯೊಂದರ ಮೌಲ್ಯ 1 ಬಿಲಿಯನ್ ಡಾಲರ್ ದಾಟಿದೆ. ಇದು ಜಗತ್ತಿನಲ್ಲಿಯೇ ಮೂರನೇ ಅತ್ಯಧಿಕ ಸಂಖ್ಯೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 2016ರ ಜನವರಿ 16ರಂದು ಪ್ರಧಾನಿ ಮೋದಿ ಅವರು ಸ್ಟಾರ್ಟ್ ಅಪ್ ಇಂಡಿಯಾ ಆಂದೋಲನ ಆರಂಭಿಸಿದ್ದರು.
‘ಭಾರತವು ಇಂದು ಯುನಿಕಾರ್ನ್ ಶತಕದತ್ತ ವೇಗವಾಗಿ ಸಾಗುತ್ತಿದೆ. ಭಾರತದ ಸ್ಟಾರ್ಟ್‌ಅಪ್‌ಗಳ ಸುವರ್ಣ ಯುಗ ಈಗ ಆರಂಭವಾಗಿದೆ ಎಂದು ನನಗೆ ಅನಿಸುತ್ತಿದೆ’ ಎಂದು ಕೈಗಾರಿಕೆ ಹಾಗೂ ಆಂತರಿಕ ವ್ಯಾಪಾರದ ಪ್ರಚಾರ ಇಲಾಖೆ ಆಯೋಜಿಸಿದ್ದ ಸ್ಟಾರ್ಟ್‌ಅಪ್ ಇಂಡಿಯಾ ಇನ್ನೋವೇಷನ್ ವೀಕ್‌ನಲ್ಲಿ ಯುವ ಉದ್ಯಮಿಗಳ ಜತೆಗಿನ ಸಂವಾದದ ವೇಳೆ ಪ್ರಧಾನಿ ಹೇಳಿದ್ದಾರೆ.
ಸ್ಟಾರ್ಟ್‌ಅಪ್‌ಗಳು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಬಹುದೊಡ್ಡ ಬೆಳವಣಿಗೆಯ ಅವಕಾಶ ಹೊಂದಿವೆ. ಭಾರತದ ಅರ್ಧದಷ್ಟು ಜನಸಂಖ್ಯೆ ಮಾತ್ರವೇ ಪ್ರಸ್ತುತ ಆನ್‌ಲೈನ್‌ನಲ್ಲಿದೆ. ಉದ್ಯಮಿಗಳು ಹಳ್ಳಿಗಳತ್ತ ಸಾಗಬೇಕು ಎಂದು ಮನವಿ ಮಾಡಿದ್ದಾರೆ. ‘ಮೊಬೈಲ್ ಇಂಟರ್ನೆಟ್ ಇರಬಹುದು, ಬ್ರಾಡ್‌ಬ್ಯಾಂಡ್ ಸಂಪರ್ಕ ಅಥವಾ ದೈಹಿಕ ಸಂಪರ್ಕ ಇರಬಹುದು, ಹಳ್ಳಿಗಳಲ್ಲಿನ ಮಹತ್ವಾಕಾಂಕ್ಷೆ ಹೆಚ್ಚುತ್ತಿವೆ. ಗ್ರಾಮೀಣ ಹಾಗೂ ಪಟ್ಟಣ ಭಾಗಗಳು ವಿಸ್ತರಣೆಯ ಹೊಸ ಅಲೆಗಾಗಿ ಕಾದಿವೆ’ ಎಂದು ಮೋದಿ ತಿಳಿಸಿದ್ದಾರೆ.
‘ಸ್ಟಾರ್ಟ್‌ಅಪ್‌ಗಳ ಜಗತ್ತಿನಲ್ಲಿ ಭಾರತದ ಬಾವುಟವನ್ನು ಹಾರಿಸುತ್ತಿರುವ ದೇಶದಲ್ಲಿನ ಎಲ್ಲ ಸ್ಟಾರ್ಟ್‌ಅಪ್‌ಗಳನ್ನು, ಎಲ್ಲ ಆವಿಷ್ಕಾರಯುತ ಯುವಜನರನ್ನು ನಾನು ಅಭಿನಂದಿಸುತ್ತೇನೆ. ಸ್ಟಾರ್ಟ್‌ಅಪ್‌ಗಳ ಈ ಸಂಸ್ಕೃತಿ ದೇಶದ ಮೂಲೆ ಮೂಲೆಗೂ ತಲುಪಬೇಕು. ಜನವರಿ 16 ಅನ್ನು ರಾಷ್ಟ್ರೀಯ ನವೋದ್ಯಮ ದಿನ ಎಂದು ಆಚರಿಸಲು ನಿರ್ಧರಿಸಲಾಗಿದೆ’ ಎಂದು ಹೇಳಿದ್ದಾರೆ.
ಪ್ರಸ್ತುತ ದಶಕದ ಪರಿಕಲ್ಪನೆಯನ್ನು ಭಾರತದ ‘ಟೆಕೇಡ್’ (ತಂತ್ರಜ್ಞಾನ ದಶಕ) ಎಂದು ವ್ಯಾಖ್ಯಾನಿಸಿರುವ ಪ್ರಧಾನಿ, ಆವಿಷ್ಕಾರ, ಸಾಹಸೋದ್ಯಮ ಮತ್ತು ಸ್ಟಾರ್ಟ್‌ಅಪ್ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಸರ್ಕಾರ ಮೂರು ಪ್ರಮುಖ ಬದಲಾವಣೆಗಳನ್ನು ಮಾಡುತ್ತಿದೆ ಎಂದು ತಿಳಿಸಿದ್ದಾರೆ. ಮೊದಲನೆಯದು, ಸರ್ಕಾರದ ಪ್ರಕ್ರಿಯೆಗಳು ಹಾಗೂ ಆಡಳಿತಾತ್ಮಕ ನಿರ್ವಹಣೆಗಳಲ್ಲಿ ಸಾಹಸೋದ್ಯಮ ಮತ್ತು ಆವಿಷ್ಕಾರವನ್ನು ಸ್ವತಂತ್ರಗಿಳಿಸುವುದು. ಎರಡನೆಯದು, ಆವಿಷ್ಕಾರವನ್ನು ಪ್ರಚುರಪಡಿಸಲು ಸಾಂಸ್ಥಿಕ ಯಾಂತ್ರಿಕತೆಯನ್ನು ಸೃಷ್ಟಿಸುದು. ಮೂರನೆಯದು, ಯುವ ಪರಿವರ್ತಕರು ಮತ್ತು ಯುವ ಸಾಹಸೋದ್ಯಮಿಗಳ ಕೈಹಿಡಿಯವುದು ಎಂದು ವಿವರಿಸಿದ್ದಾರೆ.
ಆವಿಷ್ಕಾರಗಳ ಸೂಷ್ಯಂಕದಲ್ಲಿ ಗಮನಾರ್ಹ ಏರಿಕೆಯನ್ನು ಭಾರತ ಕಾಣುತ್ತಿದೆ. 2013-14ರಲ್ಲಿ 4,000 ಪೇಟೆಂಟ್‌ಗಳನ್ನು ನೀಡಲಾಗಿತ್ತು. ಕಳೆದ ವರ್ಷ 28 ಸಾವಿರಕ್ಕೂ ಹೆಚ್ಚು ಪೇಟೆಂಟ್‌ಗಳನ್ನು ಕೊಡಲಾಗಿದೆ. 2013-14ರಲ್ಲಿ ಸುಮಾರು 70,000 ಟ್ರೇಟ್‌ಮಾರ್ಕ್‌ಗಳು ನೋಂದಣಿಯಾಗಿದ್ದವು. 2020-21 2.5 ಲಕ್ಷಕ್ಕೂ ಅಧಿಕ ಟ್ರೇಡ್‌ಮಾರ್ಕ್‌ಗಳು ನೋಂದಣಿಯಾಗಿವೆ. 2013-14ರಲ್ಲಿ ಕೇವಲ 4,000 ಹಕ್ಕುಸ್ವಾಮ್ಯಗಳನ್ನು ನೀಡಲಾಗಿತ್ತು. ಆದರೆ ಕಳೆದ ವರ್ಷ 16,000ಕ್ಕೂ ಅಧಿಕ ಹಕ್ಕುಸ್ವಾಮ್ಯಗಳನ್ನು (ಕಾಪಿರೈಟ್) ನೀಡಲಾಗಿದೆ ಎಂದು ಹೇಳಿದ್ದಾರೆ.
Read more…
[wpas_products keywords=”deal of the day”]