Karnataka news paper

ಅಮಾಜ್‌ಫಿಟ್ ಸ್ಮಾರ್ಟ್‌ವಾಚ್‌ಗಳನ್ನು ಆಫರ್‌ನಲ್ಲಿ ಖರೀದಿಸಲು ಇದುವೇ ಬೆಸ್ಟ್‌ ಟೈಂ!


ಅಮಾಜ್‌ಫಿಟ್

ಹೌದು, ಅಮೆಜಾನ್‌ ಗ್ರೇಟ್‌ ರಿಪಬ್ಲಿಕ್‌ ಡೇ ಸೇಲ್‌ ಪ್ರೈಮ್‌ ಸದಸ್ಯರಿಗೆ ಇಂದಿನಿಂದಲೇ ಲೈವ್‌ ಆಗಿದೆ. ಫ್ಲಿಪ್‌ಕಾರ್ಟ್‌ ಪ್ಲಸ್‌ ಸದಸ್ಯರು ಕೂಡ ಫ್ಲಿಪ್‌ಕಾರ್ಟ್‌ ಬಿಗ್‌ ಸೇವಿಂಗ್‌ ಡೇಸ್‌ ಸೇಲ್‌ ಅನ್ನು ಇಂದಿನಿಂದಲೇ ಪ್ರವೇಶಿಸಬಹುದಾಗಿದೆ. ಇನ್ನು ಅಮೆಜಾನ್ ಸೇಲ್‌‌ ಜನವರಿ 20 ರವರೆಗೆ ಇರುತ್ತದೆ. ಆದರೆ ಫ್ಲಿಪ್‌ಕಾರ್ಟ್ ಸೇಲ್‌ ಜನವರಿ 22 ರವರೆಗೆ ಇರುತ್ತದೆ. ಈ ಸೇಲ್‌ನಲ್ಲಿ ಸಾಕಷ್ಟು ಗ್ಯಾಜೆಟ್ಸ್‌ಗಳು ಬಿಗ್‌ ಆಫರ್‌ ಪಡೆದುಕೊಂಡಿವೆ. ಅದರಂತೆ ಜನಪ್ರಿಯ ಸ್ಮಾರ್ಟ್‌ವಾಚ್‌ ಬ್ರ್ಯಾಂಡ್ ಅಮಾಜ್‌ಫಿಟ್ ಪ್ರಾಡಕ್ಟ್‌ಗಳು ವಿಶೇಷ ಆಫರ್‌ ಪಡೆದುಕೊಂಡಿವೆ. ಹಾಗಾದ್ರೆ ಈ ಸೇಲ್‌ನಲ್ಲಿ ಅಮಾಜ್‌ಫಿಟ್‌ ಸಂಸ್ಥೆಯ ಯಾವೆಲ್ಲಾ ಸ್ಮಾರ್ಟ್‌ವಾಚ್‌ಗಳು ಡಿಸ್ಕೌಂಟ್‌ ಪಡೆದುಕೊಂಡಿವೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಅಮಾಜ್‌ಫಿಟ್ GT2 ಮಿನಿ

ಅಮಾಜ್‌ಫಿಟ್ GT2 ಮಿನಿ

ಇನ್ನು ಅಮಾಜ್‌ಫಿಟ್‌ ಕಂಪೆನಿ ಕಳೆದ ವರ್ಷ ಅಮಾಜ್‌ಫಿಟ್‌ GT2 ಮಿನಿ ಸ್ಮಾರ್ಟ್‌ವಾಚ್‌ ಅನ್ನು ಬಿಡುಗಡೆ ಮಾಡಿತ್ತು. ಈ ಸ್ಮಾರ್ಟ್‌ವಾಚ್ ಅನ್ನು ಭಾರತದಲ್ಲಿ 6999ರೂ.ಗಳಿಗೆ ಬಿಡುಗಡೆ ಮಾಡಲಾಗಿತ್ತು. ಆದರೆ ರಿಪಬ್ಲಿಕ್‌ ಡೇ ಸೇಲ್‌ನಲ್ಲಿ ಈ ಸ್ಮಾರ್ಟ್‌ವಾಚ್ ಅನ್ನು ನೀವು 5999ರೂ.ಗಳಿಗೆ ಖರೀದಿಸಬಹುದಾಗಿದೆ. ಇನ್ನು ಈ ಸ್ಮಾರ್ಟ್‌ವಾಚ್ ಹಾರ್ಟ್‌ಬಿಟ್‌ ಟ್ರ್ಯಾಕಿಂಗ್‌ ಫೀಚರ್ಸ್‌ ಸೇರಿದಂತೆ ಹಾರ್ಟ್‌ಬಿಟ್‌ ಮಾನಿಟರಿಂಗ್, ಬ್ಲಡ್-ಆಕ್ಸಿಜನ್ ಸಚುರೇಷನ್ ಮೆಸರ್‌ಮೆಂಟ್, ಸ್ಲಿಪ್‌ ಟ್ರಾಕಿಂಗ್‌, ಒತ್ತಡದ ಮಟ್ಟದ ಮೇಲ್ವಿಚಾರಣೆ ಮಾಡುವಂತಹ ಜನಪ್ರಿಯ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಅಮಾಜ್‌ಫಿಟ್‌ ಬಿಪ್‌ ಯು ಪ್ರೊ

ಅಮಾಜ್‌ಫಿಟ್‌ ಬಿಪ್‌ ಯು ಪ್ರೊ

ಗ್ರೇಟ್‌ ರಿಪಬ್ಲಿಕ್‌ ಡೇ ಸೇಲ್‌ನಲ್ಲಿ ರಿಯಾಯಿತಿ ಪಡೆದಿರುವ ಮತ್ತೊಂದು ಸ್ಮಾರ್ಟ್‌ವಾಚ್‌ ಅಮಾಜ್‌ಫಿಟ್‌ ಬಿಪ್‌ ಯು ಪ್ರೊ. ಇದು ಭಾರತದಲ್ಲಿ 4999ರೂ.ಗಳಿಗೆ ಬಿಡುಗಡೆಯಾಗಿತ್ತು. ಇದೀಗ ವಿಶೇಷ ಸೇಲ್‌ನಲ್ಲಿ ನಿಮಗೆ ಕೇವಲ 3999ರೂ.ಗಳಿಗೆ ಲಭ್ಯವಾಗಲಿದೆ. ಇನ್ನು ಈ ಸ್ಮಾರ್ಟ್‌ವಾಚ್‌ ಇಂಟರ್‌ಬಿಲ್ಟ್‌ ಅಲೆಕ್ಸಾ, ಇಂಟರ್‌ಬಿಲ್ಟ್ GPS ಅನ್ನು ಹೊಂದಿದೆ. ಈ ವಾಚ್‌ 1.43-ಇಂಚಿನ HD ಬಿಗ್‌ TFT-LCD ಕಲರ್ ಡಿಸ್‌ಪ್ಲೇ ಹೊಂದಿದೆ. ಇದು 60+ ಸ್ಪೋರ್ಟ್ಸ್ ಮೋಡ್, ಬಯೋ ಟ್ರಾಕರ್‌ 2 PPG, ಮತ್ತು ಆಕ್ಸಿಜನ್‌ ಬಿಟ್ಸ್‌, ಸೋಮ್ನುಕೇರ್‌, 5 ATM ವಾಟರ್‌ ರೆಸಿಸ್ಟೆನ್ಸಿ ಯಂತಹ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಅಮಾಜ್‌ಫಿಟ್‌ ಬಿಪ್‌ ಯು

ಅಮಾಜ್‌ಫಿಟ್‌ ಬಿಪ್‌ ಯು

ಇನ್ನು ಈ ಸೇಲ್‌ನಲ್ಲಿ ಆಫರ್‌ ಪಡೆದಿರುವ ಮತ್ತೊಂದು ಸ್ಮಾರ್ಟ್‌ವಾಚ್‌ ಅಮಾಜ್‌ಫಿಟ್ ಬಿಪ್ ಯು ಆಗಿದೆ. ಇದು ರಿಪಬ್ಲಿಕ್‌ ಡೇ ಸೇಳ್‌ ಸಮಯದಲ್ಲಿ 2999ರೂ.ಗಳಿಗೆ ಮಾರಾಟವಾಗುತ್ತಿದೆ. ಈ ಸ್ಮಾರ್ಟ್ ವಾಚ್ ಮೂಲ ಬೆಲೆ 3999 ರೂ.ಆಗಿದೆ.

ಅಮಾಜ್‌ಫಿಟ್ ಜಿಟಿಆರ್ 3 ಪ್ರೊ

ಅಮಾಜ್‌ಫಿಟ್ ಜಿಟಿಆರ್ 3 ಪ್ರೊ

ಅಮಾಜ್‌ಫಿಟ್‌ ಕಂಪನಿಯ ಪ್ರಮುಖ ಸ್ಮಾರ್ಟ್‌ವಾಚ್‌ಗಳಲ್ಲಿ ಒಂದಾದ ಅಮಾಜ್‌ಫಿಟ್ ಜಿಟಿಆರ್ 3 ಪ್ರೊ ಭಾರತದಲ್ಲಿ 18,999ರೂ.ಗಳಿಗೆ ಬಿಡುಗಡೆ ಆಗಿತ್ತು. ಸದ್ಯ ರಿಪಬ್ಲಿಕ್‌ ಡೇ ಸೇಲ್‌ನಲ್ಲಿ 17,999ರೂ.ಗಳಿಗೆ ಖರೀದಿಗೆ ಲಭ್ಯವಿದೆ. ಇನ್ನು ಈ ಸ್ಮಾರ್ಟ್‌ವಾಚ್‌ 1.45-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದ್ದು, ಇದು ವಿವಿಧ ಕ್ರೀಡಾ ವಿಧಾನಗಳನ್ನು ಒಳಗೊಂಡಿದೆ. ಇದು 150 ಸ್ಪೋರ್ಟ್ಸ್ ಮೋಡ್, 150+ ವಾಚ್ ಫೇಸಸ್, ಸ್ಟ್ರೆಸ್ ಮಾನಿಟರ್, ಬ್ರೀಥಿಂಗ್ ರೇಟ್ ಮಾನಿಟರ್, ಫೀಮೇಲ್ ಸೈಕಲ್ ಟ್ರ್ಯಾಕರ್, ಕ್ಲಾಸಿಕ್ ಕ್ರೌನ್ ಫಾರ್ ಸ್ಮೂತ್ ನ್ಯಾವಿಗೇಶನ್, ಅಲೆಕ್ಸಾ ಮತ್ತು ಆಫ್‌ಲೈನ್ ವಾಯ್ಸ್ ಅಸಿಸ್ಟೆಂಟ್ ಫೀಚರ್ಸ್‌ಗಳನ್ನು ಒಳಗೊಂಡಿದೆ.

ಫ್ಲಿಪ್‌ಕಾರ್ಟ್

ಇನ್ನು ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ಎಲೆಕ್ಟ್ರಾನಿಕ್ಸ್ ವಸ್ತುಗಳ ಮೇಲೆ ಶೇಕಡಾ 80 ರಷ್ಟು ರಿಯಾಯಿತಿಗಳನ್ನು ನೀಡಲಿದೆ. ಸ್ಮಾರ್ಟ್ ವಾಚ್‌ಗಳು ಮತ್ತು ಫಿಟ್‌ನೆಸ್ ಬ್ಯಾಂಡ್‌ಗಳು ಸೇರಿದಂತೆ ಸ್ಮಾರ್ಟ್ ವೇರಬಲ್‌ಗಳ ಮೇಲೆ 60% ರಷ್ಟು ರಿಯಾಯಿತಿ ನೀಡಲಿದೆ ಎನ್ನಲಾಗಿದೆ. ಜೊತೆಗೆ ಲ್ಯಾಪ್‌ಟಾಪ್‌ಗಳ ಮೇಲೆ 40% ರಿಯಾಯಿತಿ ದೊರೆಯಲಿದೆ ಎಂದು ಘೋಷಿಸಿದೆ. ಇದಲ್ಲದೆ ಫ್ಲಿಪ್‌ಕಾರ್ಟ್ ಸ್ಮಾರ್ಟ್ ಟಿವಿಗಳು ಮತ್ತು ಗೃಹೋಪಯೋಗಿ ಉಪಕರಣಗಳ ಮೇಲೆ 75% ರಿಯಾಯಿತಿಗಳನ್ನು ನೀಡುವುದಾಗಿ ವೆಬ್‌ಪೇಜ್‌ನಲ್ಲಿ ಹೇಳಲಾಗಿದೆ.



Read more…

[wpas_products keywords=”smartphones under 15000 6gb ram”]