Karnataka news paper

ಅಫ್ಗನ್‌ಗೆ ಪಾಕಿಸ್ತಾನದ ನೆರವು ಬೇಕಾಗಿಲ್ಲ ಎಂದ ಮಾಜಿ ಅಧ್ಯಕ್ಷ ಹಮೀದ್ ಕರ್ಜೈ


ಕಾಬೂಲ್: ಮಾನವೀಯತೆ ಆಧಾರದ ಮೇಲೆ ಯುದ್ಧಪೀಡಿತ ಅಫ್ಗಾನಿಸ್ತಾನಕ್ಕೆ ನುರಿತ ಮಾನವ ಸಂಪನ್ಮೂಲ ಒದಗಿಸಲು ಬದ್ದ ಎಂಬ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಗೆ ಅಫ್ಗಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಜೈ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.

‘ಅಫ್ಗಾನಿಸ್ತಾನದಲ್ಲಿ ದೇಶ ವಿದೇಶದಿಂದ ಉನ್ನತ ಶಿಕ್ಷಣ ಪಡೆದ ಸಾವಿರಾರು ಯುವಕ ಯುವತಿಯರಿದ್ದಾರೆ. ವಿದೇಶದ ಮಾನವ ಸಂಪನ್ಮೂಲ ಸಹಕಾರ ಪಡೆದುಕೊಳ್ಳುವ ಪರಿಸ್ಥಿತಿ ನಮ್ಮ ದೇಶಕ್ಕೆ ಬಂದಿಲ್ಲ’ ಎಂದು ಕರ್ಜೈ ಹೇಳಿದ್ದಾರೆ.

‘ಅಲ್ಲದೇ ತಾಲಿಬಾನ್ ಮುಖಂಡರು ದೇಶದ ವಿದ್ಯಾವಂತ ಯುವಕ–ಯುವತಿಯರಿಗೆ ಸೂಕ್ತ ಉದ್ಯೋಗ ನೀಡಲು ಕ್ರಮ ಕೈಗೊಳ್ಳಬೇಕು. ವಿದೇಶದಲ್ಲಿರುವ ಅಫ್ಗಾನಿಸ್ತಾನ ನಾಗರಿಕರನ್ನು ಸ್ವದೇಶಕ್ಕೆ ಕರೆಯಿಸಿಕೊಳ್ಳಬೇಕು’ ಎಂದು ಕರ್ಜೈ ಮನವಿ ಮಾಡಿದ್ದಾರೆ.

ಇತ್ತೀಚೆಗೆ ನ್ಯೂಯಾರ್ಕ್ ಟೈಮ್ಸ್‌ ಪತ್ರಿಕೆ ಅಫ್ಗಾನಿಸ್ತಾನದಲ್ಲಿ ಮಾನವ ಸಂಪನ್ಮೂಲದ ಕೊರತೆ ಭಾರೀ ಕಾಡುತ್ತಿದೆ ಎಂದು ವರದಿ ಮಾಡಿತ್ತು.

ಈ ಬಗ್ಗೆ ಕಳೆದ ಶುಕ್ರವಾರ ಮಾತನಾಡಿದ್ದ ಇಮ್ರಾನ್ ಖಾನ್, ‘ನಾಗರಿಕ ಬಿಕ್ಕಟ್ಟಿನಿಂದ ಪಾರಾಗಲು ನಾವು ನುರಿತ ಮಾನವ ಸಂಪನ್ಮೂಲವನ್ನು ಅಫ್ಗನ್‌ಗೆ ಕಳಿಸಿಕೊಡಲು ಸಿದ್ದ ಎಂದಿದ್ದರು. ಇದರಿಂದ ಉಭಯ ದೇಶಗಳ ನಡುವಿನ ಸೌಹಾರ್ಧ ವಾತಾವರಣ ನಿರ್ಮಿಸಲು ಇದು ಸಹಕಾರಿ’ ಎಂದು ಪ್ರತಿಪಾಧಿಸಿದ್ದರು.

ಹಮೀದ್ ಕರ್ಜೈ ಅವರು 2001 ರಿಂದ 2014 ರವರೆಗೆ ಅಫ್ಗಾನಿಸ್ತಾನದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ, ಇತ್ತೀಚೆಗೆ ತಾಲಿಬಾನ್ ಆ ದೇಶದ ಅಧಿಕಾರ ಹಿಡಿದ ನಂತರ ಕಾಬೂಲ್‌ನಲ್ಲಿ ನೆಲೆ ನಿಂತಿದ್ದಾರೆ.



Read more from source

[wpas_products keywords=”deals of the day offer today electronic”]