The New Indian Express
ಕೋಲ್ಕತ್ತ: ಕೋವಿಡ್-19 ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಚುನಾವಣಾ ಆಯೋಗ ರಾಜ್ಯದ ಪುರಸಭೆ ಚುನಾವಣೆಗಳ ವೇಳಾಪಟ್ಟಿಯನ್ನು ಬದಲಾವಣೆ ಮಾಡಿದೆ. ಚುನಾವಣೆಯನ್ನು ಮೂರು ವಾರಗಳ ಕಾಲ ಮುಂದೂಡಿರುವ ಆಯೋಗ, ಪರಿಷ್ಕೃತ ದಿನಾಂಕವನ್ನು ಫೆ.12 ಕ್ಕೆ ನಿಗದಿಪಡಿಸಿದೆ.
ಈ ಹಿಂದೆ ಚುನಾವಣೆ ಜ.22 ಕ್ಕೆ ನಿಗದಿಯಾಗಿತ್ತು. ಎಸ್ಇಸಿಯ ಪ್ರಕಟಣೆಯ ಪ್ರಕಾರ ಸಿಲಿಗುರಿ ಪುರಸಭೆ ಚುನಾವಣೆ, ಚಂದ್ರನಗರ್ ಪುರಸಭೆ, ಬಿಧಾನ್ ನಗರ್ ಪುರಸಭೆ ಚುನಾವಣೆ ಹಾಗೂ ಅಸಾನ್ಸೋಲ್ ಪುರಸಭೆ ಚುನಾವಣೆಗಳು ಫೆ.12 ರಂದು ಬೆಳಿಗ್ಗೆ 7 ರಿಂದ ಸಂಜೆ 5 ವರೆಗೂ ನಡೆಯಲಿದೆ.
ಚುನಾವಣೆಗಳನ್ನು ಮುಂದೂಡುವುದಕ್ಕೆ ಇದಕ್ಕೂ ಮುನ್ನ ರಾಜ್ಯ ಸರ್ಕಾರ ತನ್ನ ಸಹಮತ ವ್ಯಕ್ತಪಡಿಸಿ ಎಸ್ಇಸಿ ಗೆ ಪತ್ರ ಬರೆದಿತ್ತು. ಕೋವಿಡ್-19 ಸೋಂಕು ಹೆಚ್ಚುತ್ತಿರುವುದರ ಹಿನ್ನೆಲೆಯಲ್ಲಿ ಕೋಲ್ಕತ್ತಾ ಹೈಕೋರ್ಟ್ ಚುನಾವಣೆ ಮುಂದೂಡುವ ಆಯ್ಕೆಯನ್ನು ಪರಿಗಣಿಸುವಂತೆ ಸಲಹೆ ನೀಡಿತ್ತು.
Read more
[wpas_products keywords=”deal of the day”]