Online Desk
ನವದೆಹಲಿ: ವಿಶ್ವದ ಅತ್ಯಂತ ವೇಗದ ಸೂಪರ್ಸಾನಿಕ್ ಕ್ಷಿಪಣಿ ಎಂದೇ ಹೆಸರಾದ ಬ್ರಹ್ಮೋಸ್ ಖರೀದಿಸಲು ಫಿಲಿಪ್ಪೀನ್ಸ್ ಬೇಡಿಕೆ ಸಲ್ಲಿಸಿದೆ. ಈ ಸಂಬಂಧ ಭಾರತ ಮತ್ತು ಫಿಲಿಪೈನ್ಸ್ ನಡುವೆ ಒಪ್ಪಂದವಾಗಲಿದೆ.
ಇದನ್ನೂ ಓದಿ: ಫೆಸಿಫಿಕ್ ಸಾಗರದಾಳದಲ್ಲಿ ಜ್ವಾಲಾಮುಖಿ ಸ್ಫೋಟ: ಸುನಾಮಿ ಎಚ್ಚರಿಕೆ
ಫಿಲಿಪೈನ್ಸ್ ಸುಮಾರು ೩೭ ಶತಕೋಟಿ ಡಾಲರ್ ಮೌಲ್ಯದ ಒಪ್ಪಂದವನ್ನು ಅನುಮೋದಿಸಿದೆ. ಬ್ರಹ್ಮೋಸ್ ಕ್ಷಿಪಣಿಗೆ ದೊರೆತಿರುವ ಮೊದಲ ಆರ್ಡರ್ ಇದಾಗಿದೆ. ಆಗ್ನೇಯ ಏಷ್ಯಾದ ಇನ್ನೂ ಕೆಲವು ದೇಶಗಳೊಂದಿಗೆ ಬ್ರಹ್ಮೋಸ್ ಮಾರಾಟ ಕುರಿತು ಮಾತುಕತೆ ನಡೆಸಲಾಗುತ್ತಿದೆ ಎನ್ನಲಾಗಿದೆ.
ಇದನ್ನೂ ಓದಿ: ಶ್ರೀಲಂಕಾಗೆ 6,600 ಸಾವಿರ ಕೋಟಿ ರೂ. ಸಾಲದ ನೆರವು: ಆರ್ಥಿಕ ಸಂಕಷ್ಟದಲ್ಲಿರುವ ಮಿತ್ರರಾಷ್ಟ್ರದ ಕೈಹಿಡಿದ ಭಾರತ
ಈ ಒಪ್ಪಂದವು ಭಾರತ ಮತ್ತು ಫಿಲಿಪೈನ್ಸ್ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸಿ ಉಭಯ ದೇಶಗಳ ನಡುವಿನ ರಕ್ಷಣಾ ವ್ಯಾಪಾರವನ್ನು ಉತ್ತೇಜಿಸುತ್ತದೆ. ಚೀನಾ ಜೊತೆಗೆ ಬಿಕ್ಕಟ್ಟು ಹೊಂದಿರುವ ಫಿಲಿಪ್ಪೀನ್ಸ್ ಸೇನೆಗೆ ಬ್ರಹ್ಮೋಸ್ ಕ್ಷಿಪಣಿಯಿಂದ ಬಲ ದೊರೆಯಲಿದೆ.
ಇದನ್ನೂ ಓದಿ: ಅಮೆರಿಕ: ಭಾರತ ಮೂಲದ ಟ್ಯಾಕ್ಸಿ ಚಾಲಕನ ಮೇಲೆ ಜನಾಂಗೀಯ ದ್ವೇಷಪ್ರೇರಿತ ದಾಳಿ; ಸಿಖ್ ಸಂಘಟನೆಗಳು ಆಕ್ರೋಶ
Read more
[wpas_products keywords=”deal of the day”]