Online Desk
ಕೇಪ್ ಟೌನ್: ಟೀಂ ಇಂಡಿಯಾ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ವಿರುದ್ದ ಟೀಕಾ ಪರ್ವ ಮುಂದುವರೆದಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದ, ಮೂರನೇ ದಿನದಾಟದಲ್ಲಿ ಕೊಹ್ಲಿ ವರ್ತನೆಗೆ ಮಾಜಿ ಕ್ರಿಕೆಟಿಗರು ಆಕ್ರೋಶಗೊಂಡಿದ್ದಾರೆ.
ಆದರೆ, ಪ್ರೋಟೀಸ್ ನಾಯಕ ಡೀನ್ ಎಲ್ಗರ್ ಡಿ ಆರ್ ಎಸ್ ಕಾಲ್ ವಿಷಯವಾಗಿ ಟೀಂ ಇಂಡಿಯಾ ಆಟಗಾರರು ಅದರಲ್ಲೂ ವಿಶೇಷವಾಗಿ ಕೊಹ್ಲಿ ಸ್ಟಂಪ್ಸ್ ಮೈಕ್ ಬಳಿ ತರಳಿ ಪ್ರಸಾರಕರನ್ನು ಉದ್ದೇಶಿಸಿ ಮಾತನಾಡಿದ ರೀತಿ ತೀವ್ರ ವಿವಾದಕ್ಕೆ ಕಾರಣವಾಗಿದೆ.
ಈ ಕ್ರಮದಲ್ಲಿ ಟೀಂ ಇಂಡಿಯಾ ಮಾಜಿ ಓ ಪನರ್ ಗೌತಮ್ ಗಂಭೀರ್ ಕೊಹ್ಲಿ ಅವರದು ಅನುಚಿತ ವರ್ತನೆ ಎಂದು ಈಗಾಗಲೇ ಟೀಕಿಸಿದ್ದಾರೆ. ಇನ್ನೂ ಈ ಬಗ್ಗೆ ಪ್ರತಿಕ್ರಿಯಿಸಿರುವ ಇಂಗ್ಲೆಂಡಿನ ಮಾಜಿ ಕ್ರಿಕೆಟಿಗ, ವೀಕ್ಷಕ ವಿವರಣೆಗಾರ ಮೈಕೆಲ್ ವಾನ್ ಕೊಹ್ಲಿಗೆ ಭಾರಿ ದಂಡ ವಿಧಿಸಬೇಕು.. ಇಲ್ಲವೇ ಅವರನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರತಿಯೊಬ್ಬರು ಭಾವೋದ್ವೇಗಳಿಗೆ ಒಳಗಾಗುವುದು ಸಹಜ. ಆದರೆ ತಂಡದ ನಾಯಕನೇ ಹೀಗೆ ಮಾಡುವುದು ಸರಿಯಲ್ಲ. ಈ ಬಗ್ಗೆ ಐಸಿಸಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ. ದಕ್ಷಿಣ ಆಫ್ರಿಕಾದ ಮಾಜಿ ಬ್ಯಾಟ್ಸ್‌ಮನ್ ಡ್ಯಾರಿಲ್, ಭಾರತೀಯ ನಾಯಕನ ನಡವಳಿಕೆ ಸ್ವೀಕಾರಾರ್ಹವಲ್ಲ, ಆತನ ವಿರುದ್ದ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದರು.
ಇದೇ ವೇಳೆ ಆಸ್ಟ್ರೇಲಿಯಾ ಕ್ರಿಕೆಟ್ ದಿಗ್ಗಜ ಆಡಮ್ ಗಿಲ್ ಕ್ರಿಸ್ಟ್ ಕೂಡ ಟೀಂ ಇಂಡಿಯಾ ನಾಯಕನ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಎಲ್ಲದಕ್ಕೂ ಒಂದು ಮಿತಿ ಇರುತ್ತದೆ. ಅದು ದಾಟಿದರೆ ನಿರ್ಲಕ್ಷಿಸುವ ಅಗತ್ಯವಿಲ್ಲ ಎಂದು ಗಿಲ್‌ಕ್ರಿಸ್ಟ್ ಅಭಿಪ್ರಾಯ ಪಟ್ಟಿದ್ದಾರೆ, ಶೇನ್ ವಾರ್ನ್ ಮಾತನಾಡಿ…’ಅಂತರರಾಷ್ಟ್ರೀಯ ತಂಡದ ನಾಯಕನಿಂದ ಈ ರೀತಿ ವರ್ತನೆಯನ್ನು ನಾನು ನಿರೀಕ್ಷಿಸರಲಿಲ್ಲ. ಒಮ್ಮೊಮ್ಮೆ ಅಸಹನೆ ಮಿತಿ ಮೀರುತ್ತದೆ ಎಂದಿದ್ದಾರೆ.
ನಿಜ.. ಪದೇ ಪದೇ ಹೀಗೆ ಮಾಡುವುದು ಸರಿಯಲ್ಲ. ಇದು ಪುನರಾವರ್ತನೆಯಾಗದಂತೆ ಎಚ್ಚರಿಕೆ ವಹಿಸಬೇಕು. ಸಹಿಷ್ಣುತೆಯ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಇನ್ನೂ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಭಾಗವಾಗಿ, ಟೀಂ ಇಂಡಿಯಾ ಆಟದಲ್ಲಿ ವೈಫಲ್ಯಕ್ಕಿಂತ ಹೆಚ್ಚು ವಾಗ್ವಾದ, ಗಲಾಟೆಯಲ್ಲಿ ತೊಡಗಿಸಿಕೊಂಡಿರುವುದು ಅದರ ಪ್ರತಿಷ್ಟೆ ಹಾಳುಗೆಡವಲಿದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.
Read more…
[wpas_products keywords=”deal of the day sports items”]