Karnataka news paper

‘ಅಲ್ಲೆ ಡ್ರಾ ಅಲ್ಲೇ ಬಹುಮಾನ’ದಲ್ಲಿ ಅಘೋರಿಯಾದ ನಟ ರಿಷಿ!


The New Indian Express

ಕವಲು ದಾರಿ ಸಿನಿಮಾ ಮೂಲಕ ಜನರ ಮೆಚ್ಚುಗೆ ಗಳಿಸಿದ್ದ ನಟ ರಿಷಿ ಅಲ್ಲೇ ಡ್ರಾ ಅಲ್ಲೇ ಬಹುಮನಾ ಚಿತ್ರದ ಹಾಡಿನ ಸೀಕ್ವೆನ್ಸ್‌ವೊಂದರಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಇಮ್ರಾನ್ ಸರ್ಧಾರಿಯಾ ನೃತ್ಯ ಸಂಯೋಜನೆಯ ಹಾಡಿನಲ್ಲಿ ಅಘೋರಿ ಅವತಾರದಲ್ಲಿ ನಟ ರಿಷಿ ಕಾಣಿಸಿಕೊಂಡಿದ್ದಾರೆ. ಹಾಡಿನಲ್ಲಿ ನೂರಾರು ಡ್ಯಾನ್ಸರ್‌ಗಳು ಮತ್ತು ಜೂನಿಯರ್ ಆರ್ಟಿಸ್ಟ್‌ಗಳು ಕೂಡ ಕಾಣಿಸಿಕೊಂಡಿದ್ದಾರೆ.

ಇದು ಜೀವನ ಚಕ್ರದ ಬಗ್ಗೆ ಮಾತನಾಡುವ ಶಿವನ ಮೇಲಿನ ಹಾಡಾಗಿದ್ದು, ಚಿತ್ರದ ಕಥೆಯನ್ನು ಸಂಕ್ಷಿಪ್ತವಾಗಿ ಹೇಳುತ್ತದೆ ಎಂದು ಚಿತ್ರದ ನಿರ್ದೇಶಕ ರತ್ನ ತೀರ್ಥ ಅವರು ಹೇಳಿದ್ದಾರೆ. ಹಾಡಿನ ಸಾಹಿತ್ಯವನ್ನೂ ರತ್ನ ತೀರ್ಥ ಅವರೇ ಬರೆದಿದ್ದು, ವಿಜಯ್ ರಾಜ್ ಟ್ಯೂನ್ ಮಾಡಿರುವ ಈ ಟ್ರ್ಯಾಕ್ ಗೆ ನಟ ಉಪ್ಪೇಂದ್ರ ಧ್ವನಿ ನೀಡಿದ್ದಾರೆ.

ಅಲ್ಲೇ ಡ್ರಾ ಅಲ್ಲೇ ಬಹುಮಾನ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, ಚಿತ್ರದಲ್ಲಿ ಶೌರ್ಯ, ಟಗರು ಖ್ಯಾತಿಯ ರುಷಿಕಾ ರಾಜ್, ಶಂಕರ್ ಅಶ್ವಥ್, ರಘು ರಾಮನಕೊಪ್ಪ, ವಿಜಯ್ ಚೆಂಡೂರ್ ಮತ್ತು ಕುರಿ ರಂಗಸ್ವಾಮಿ ನಟಿಸಿದ್ದಾರೆ. 

ಏತನ್ಮಧ್ಯೆ, ರಿಷಿ, ನೋಡಿ ಸ್ವಾಮಿ ಇವನು ಇರೋದೇ ಹೀಗೆ, ಸಕಲಕಲಾ ವಲ್ಲಭ, ರಾಮನ ಅವತಾರ ಮತ್ತು ಸೀರೆ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದು, ಈ ಎಲ್ಲಾ ಚಿತ್ರಗಳ ನಿರ್ಮಾಣ ಕಾರ್ಯ ವಿವಿಧ ಹಂತಗಳಲ್ಲಿವೆ. 



Read more…

[wpas_products keywords=”party wear dress for women stylish indian”]