ಹೈಲೈಟ್ಸ್:
- ‘ನಮ್ಮನೆ ಯುವರಾಣಿ’ ಧಾರಾವಾಹಿ ನಟಿ ಅಂಕಿತಾ ಅಮರ್
- ಬೆಳ್ಳಿತೆರೆ ಮೇಲೆ ಕಾಣಿಸಿಕೊಳ್ಳಲು ಅಂಕಿತಾ ಅಮರ್ ರೆಡಿ
- ತನ್ನ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡ ‘ನಮ್ಮನೆ ಯುವರಾಣಿ’ ನಟಿ
“ನಿಮ್ಮೆಲ್ಲರ ಪ್ರೀತಿಯ ಪ್ರತಿಫಲದಿಂದ ಈ ವರುಷ ನನಗೆ ಸಿಕ್ಕ ಪುಣ್ಯಫಲ “ಅಬ ಜಬ ದಬ”. ಎಂದೆಂದಿಗೂ ನಿಮ್ಮನ್ನು ರಂಜಿಸಲು ಸತತವಾಗಿ ಹಂಬಲಿಸುತ್ತಿದ್ದ ನನಗೆ ಎಂದೂ ಕಾಣದ ಈ ಕನಸನ್ನು ನನಸು ಮಾಡಿದ್ದು ಆರ್‌ಜೆ ಮಯೂರ ರಾಘವೇಂದ್ರ. ಎಂದೂ ಹೇಳುವ ಹಾಗೆ ಈಗಲೂ ನನ್ನೆಲ್ಲಾ ಕಣ್ಮಮಣಿಗಳಿಗೆ ಈ ಚಿತ್ರ ಸಮರ್ಪಣೆ. ನನ್ನ ಮೊದಲ ಚಿತ್ರ “ಅಬ ಜಬ ದಬ”. ಎಲ್ಲದಕ್ಕಿಂತ ಹೆಚ್ಚಿಗೆ ಖುಷಿ ಏನೆಂದರೆ ಶಂಕ್ರಣ್ಣ ನಮ್ಮ ಚಿತ್ರದಲ್ಲಿರುವುದು. ಜೊತೆಗೆ ಪೋಸ್ಟರ್ ನೋಡಿದ್ದೀರಿ” ಎಂದು ನಟಿ ಅಂಕಿತಾ ಅಮರ್ ಅವರು ಈ ವಿಷಯ ಹಂಚಿಕೊಂಡಿದ್ದಾರೆ.
‘ಅಬ ಜಬ ದಬ’ ಸಿನಿಮಾಕ್ಕೆ ಎಂಟ್ರಿ ಕೊಟ್ಟ ಸುಧಾರಾಣಿ, ನಿಧಿ ಸುಬ್ಬಯ್ಯ & ‘ಬಿಗ್ ಬಾಸ್’ ಖ್ಯಾತಿಯ ರಘು
ನಟ ಪ್ರಥ್ವಿ ಅಂಬರ್ ಅವರು ಈ ಚಿತ್ರದಲ್ಲಿ ಹೀರೋ ಆಗಿ ನಟಿಸಲಿದ್ದಾರೆ. ಸುಧಾರಾಣಿ, ಅಚ್ಯುತ್ ಕುಮಾರ್, ಪಿಡಿ ಸತೀಶ್ ಚಂದ್ರ, ಮಹಾಂತೇಶ್, ಮುಖ್ಯಮಂತ್ರಿ ಚಂದ್ರು, ಅನಿರುದ್ಧ ಮಹೇಶ್, ನಿಧಿ ಸುಬ್ಬಯ್ಯ, ಮಯೂರ ರಾಘವೇಂದ್ರ, ಅನಂತ ಕೃಷ್ಣ, ಬಿಗ್ ಬಾಸ್ ಖ್ಯಾತಿಯ ರಘು, ಊರ್ವಶಿ, ವಿಶ್ವಕಿರಣ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಲಿದ್ದಾರೆ.
‘ಕನ್ನಡ್ ಗೊತ್ತಿಲ್ಲ’ ಸಿನಿಮಾ ನಿರ್ದೇಶನ ಮಾಡಿದ್ದ ಮಯೂರ ರಾಘವೇಂದ್ರ ಅವರು ಎರಡನೇ ಸಿನಿಮಾವಾಗಿ ‘ಅಬ ಜಬ ದಬ’ ಮಾಡುತ್ತಿದ್ದಾರೆ. ಇದೊಂದು ಕಾಮಿಡಿ ಮತ್ತು ಫ್ಯಾಂಟಸಿ ಅಂಶಗಳಿರುವ ಸಿನಿಮಾವಂತೆ. ಈ ಸಿನಿಮಾದಲ್ಲಿ ಶಂಕರ್ ನಾಗ್ ಇರುತ್ತಾರೆ, ಆದರೆ ಶಂಕರ್ ನಾಗ್ ಹೇಗೆ ಇರುತ್ತಾರೆ ಎಂಬುದನ್ನು ಸಿನಿಮಾ ನೋಡಿ ತಿಳಿದುಕೊಳ್ಳಬೇಕು ಎಂದು ಸಿನಿಮಾ ತಂಡ ಟ್ವಿಸ್ಟ್ ಇಟ್ಟಿದೆ.
‘ಅಬ ಜಬ ದಬ’ ಚಿತ್ರದಲ್ಲಿ ನಟ ಶಂಕರ್ ನಾಗ್! ಅಚ್ಚರಿ ಮೂಡಿಸಿದ ನಿರ್ದೇಶಕ ಮಯೂರ
ಸಿನಿಮಾವೊಂದರಲ್ಲಿ ರೇಖಾ ದಾಸ್ ಅವರು “ಅಬ ಜಬ ದಬ” ಪದ ಬಳಸಿದ್ದರು. ಇದೊಂದು ಫ್ಯಾಂಟಸಿ ಸಿನಿಮಾ ಆಗಿರುವುದರಿಂದ ಈ ಶೀರ್ಷಿಕೆ ಬಳಕೆ ಆಗಿದ್ದು, ರೇಖಾ ದಾಸ್‌ಗೂ, ಶಂಕರ್ ನಾಗ್ ಅವರಿಗೂ, ಈ ಶೀರ್ಷಿಕೆಗೂ ಏನು ಸಂಬಂಧ ಅನ್ನೋದನ್ನು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕು. ಈ ಚಿತ್ರಕ್ಕೆ ಗಿರಿಧರ್ ದಿವಾನ್ ಛಾಯಾಗ್ರಹಣ, ಸತೀಶ್ ರಘುನಾಥನ್ ಸಂಗೀತ ಸಂಯೋಜನೆಯಿದೆ. ‘ಎಸ್. ರಾಮ್ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಅನಂತ ಕೃಷ್ಣ ಈ ಸಿನಿಮಾಕ್ಕೆ ಹಣ ಹಾಕುತ್ತಿದ್ದಾರೆ. ಒಟ್ಟಿನಲ್ಲಿ ಈ ತಂಡ ಸೃಜನಾತ್ಮಕವಾಗಿ ಸಿನಿಮಾ ಮಾಡುವ ತಯಾರಿಯಲ್ಲಿದೆ.
‘ನಮ್ಮನೆ ಯುವರಾಣಿ’ ಧಾರಾವಾಹಿಯಲ್ಲಿ ಅಂಕಿತಾ ಅಮರ್ ಅವರ ಪಾತ್ರ ಅಂತ್ಯವಾಗಿದೆ. ಸದ್ಯ ಅವರು ತೆಲುಗಿನ ಧಾರಾವಾಹಿಯೊಂದರಲ್ಲಿ ನಟಿಸುತ್ತಿದ್ದಾರೆ. ಹಿಂದಿಯ pavitra rishta ಧಾರಾವಾಹಿಯ ರಿಮೇಕ್ ಅದು. ಶ್ರೀಮತಿ ಶ್ರೀನಿವಾಸ್ ಎಂದು ಧಾರಾವಾಹಿಗೆ ಹೆಸರು ಇಡಲಾಗಿದೆ. ಈ ಧಾರಾವಾಹಿಯಲ್ಲಿ ಕನ್ನಡ ನಟ ಚಂದನ್ ಕುಮಾರ್ ಹೀರೋ. ಒಟ್ಟಿನಲ್ಲಿ ಬಾಲಕಲಾವಿದೆಯಾಗಿ ಕಿರುತೆರೆ ಮೂಲಕ ಧಾರಾವಾಹಿಗೆ ಕಾಲಿಟ್ಟ ಅಂಕಿತಾ ಅಮರ್ ಅವರು ಚಿತ್ರರಂಗದಲ್ಲಿ ಸಖತ್ ಬ್ಯುಸಿಯಾಗುತ್ತಿದ್ದಾರೆ.
Read more
[wpas_products keywords=”deal of the day party wear dress for women stylish indian”]