Source : The New Indian Express
ಲಂಡನ್: ಗೌಪ್ಯ ಮಾಹಿತಿ ಸೋರಿಕೆ ಮಾಡಿದ ಆರೋಪದಡಿ ಜೈಲಿನಲ್ಲಿ ಪ್ರಕರಣ ಎದುರಿಸುತ್ತಿರುವ ವಿಕಿ ಲೀಕ್ಸ್ ಸ್ಥಾಪಕ ಜೂಲಿಯನ್ ಅಸಾಂಜ್ ಅವರಿಗೆ ಜೈಲಿನಲ್ಲಿ ಸ್ಟ್ರೋಕ್ ಉಂಟಾಗಿದೆ. ಅವರಿಗೆ ಜೈಲಿನಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ಉತ್ತರಪ್ರದೇಶದ ಹಳ್ಳಿಯಿಂದ ಕಳವಾಗಿದ್ದ ದೇವರ ವಿಗ್ರಹ ಲಂಡನ್ ನಲ್ಲಿ ಪತ್ತೆ: ಭಾರತ ಹೈಕಮಿಷನ್ ಮಾಹಿತಿ
ಒಂದೊಮ್ಮೆ ಅಮೆರಿಕ ಸೇರಿದಂತೆ ಜಗತ್ತಿನ ಹಲವು ರಾಷ್ಟ್ರಗಳ ಗೌಪ್ಯ ಸೇನಾ ಮಾಹಿತಿಯುಳ್ಳ ದಾಖಲೆಗಳನ್ನು ತನ್ನ ವಿಕಿ ಲೀಕ್ಸ್ ಜಾಲತಾಣದಲ್ಲಿ ಬಿಡುಗಡೆ ಮಾಡಿ ಪ್ರಭಾವಿಗಳ ಕೆಂಗಣ್ಣಿಗೆ ಅಸಾಂಜ್ ಗುರಿಯಾಗಿದ್ದರು.
ಇದನ್ನೂ ಓದಿ: ಸೌದಿ ಸರ್ಕಾರದಿಂದ ತಬ್ಲಿಘಿ ಜಮಾತ್ ನಿಷೇಧ: ನಮಾಜ್ ವೇಳೆ ತಬ್ಲಿಘಿಯ ದುಷ್ಪರಿಣಾಮ ಕುರಿತು ತಿಳಿ ಹೇಳುವಂತೆ ಮಸೀದಿಗಳಿಗೆ ಸೂಚನೆ
ಅಸಾಂಜ್ ಬಂಧನಕ್ಕೆ ಅಮೆರಿಕ ಶತಪ್ರಯತ್ನ ನಡೆಸಿತ್ತು. ದೇಶದಿಂದ ದೇಶಕ್ಕೆ ಪಲಾಯನ ಮಾಡುತ್ತಿದ್ದ ಅಸಾಂಜ್ ನನ್ನು ಅಮೆರಿಕ ಬೆನ್ನಟ್ಟಿತ್ತು. ಕಡೆಗೆ ಯುಕೆ ಅಧಿಕಾರಿಗಳ ಕೈಲಿ ಅಸಾಂಜ್ ಸೆರೆಯಾಗಿದ್ದರು. ಆತನ ಬಿಡುಗಡೆಗೆ ಪ್ರೇಯಸಿ ಸ್ಟೆಲ್ಲಾ ಮೋರಿಸ್ ಒತ್ತಾಯಿಸುತ್ತಲೇ ಇದ್ದಾರೆ.
ಇದನ್ನೂ ಓದಿ: ಸಿಗರೇಟ್ ಬ್ಯಾನ್ ಮಾಡಲು ನ್ಯೂಜಿಲೆಂಡ್ ಸಜ್ಜು! ಹೊಸ ಕಾನೂನಿನಲ್ಲಿರುವ ಅಂಶಗಳೇನು?
ಇದೀಗ ಬಗೆಹರಿಯದ ಕೋರ್ಟ್ ವಿಚಾರಣೆಗಳು ಅಸಾಂಜ್ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿರುವುದಾಗಿ ಸ್ಟೆಲ್ಲಾ ಎಚ್ಚರಿಸಿದ್ದಾರೆ. ಅಸಾಂಜ್ ರನ್ನು ಅಮೆರಿಕಕ್ಕೆ ಗಡೀಪಾರು ಮಾಡುವ ಕುರಿತಾಗಿ ನ್ಯಾಯಾಲಯ ವಿಚಾರಣೆ ನಡೆಯುತ್ತಿದೆ. ಅಮೆರಿಕಕ್ಕೆ ಅಸಾಂಜ್ ಗಡೀಪಾರಾದರೆ ಅವರಿಗೆ ಮರಣದಂಡನೆ ಖಚಿತ ಎನ್ನುವ ಆತಂಕವೂ ಇದೆ.
ಇದನ್ನೂ ಓದಿ: ಇಮ್ರಾನ್ ಖಾನ್ ಸರ್ಕಾರದೊಡನೆ ಕದನವಿರಾಮ ಅಂತ್ಯ: ಪಾಕ್ ತಾಲಿಬಾನ್ ಘಟಕ ತೆಹ್ರೀಕ್ ಇ ತಾಲಿಬಾನ್ ಘೋಷಣೆ