Karnataka news paper

ಭಾರತ ಟೆಸ್ಟ್‌ ತಂಡದ ನಾಯಕತ್ವ ತ್ಯಜಿಸಿ ಶಾಕ್‌ ನೀಡಿದ ಕೊಹ್ಲಿ!


ಹೊಸದಿಲ್ಲಿ: ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್‌ ಸರಣಿ ಸೋಲಿನ ಬೆನ್ನಲ್ಲೆ ವಿರಾಟ್‌ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವದಿಂದ ಹಠಾತ್‌ ಕಳೆಗಿಳಿದಿದ್ದಾರೆ. ಆ ಮೂಲಕ ಕೊಟ್ಯಂತರ ಅಭಿಮಾನಿಗಳಿಗೆ ಶಾಕ್‌ ನೀಡಿದ್ದಾರೆ.
ತಮ್ಮ ಅಧಿಕೃತ ಟ್ವಿಟರ್‌ನಲ್ಲಿ ವಿರಾಟ್‌ ಕೊಹ್ಲಿ ಈ ಮಹತ್ವದ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಕಳೆದ 2014/15ರ ಆವೃತ್ತಿಯಲ್ಲಿ ಎಂಎಸ್‌ ಧೋನಿ ಅವರಿಂದ ಟೆಸ್ಟ್‌ ತಂಡದ ನಾಯಕತ್ವ ಸ್ವೀಕರಿಸಿದ್ದ ವಿರಾಟ್‌ ಕೊಹ್ಲಿ, 68 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಮುನ್ನಡೆಸಿದ್ದರು ಹಾಗೂ 40 ಪಂದ್ಯಗಳಲ್ಲಿ ಗೆಲುವು ಪಡೆದಿದ್ದರು. ಆ ಮೂಲಕ ಭಾರತೀಯ ಟೆಸ್ಟ್‌ ಕ್ರಿಕೆಟ್‌ ಇತಿಹಾಸದಲ್ಲಿಯೇ ಅತ್ಯಂತ ಯಶಸ್ವಿ ನಾಯಕ ಎಂಬ ಸಾಧನೆಗೆ ಕಿಂಗ್‌ ಕೊಹ್ಲಿ ಭಾಜನರಾಗಿದ್ದಾರೆ.

ಈ ಬಗ್ಗೆ ಟ್ವಿಟರ್‌ ಸೇರಿದಂತೆ ತಮ್ಮ ಅಧಿಕೃತ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ವಿರಾಟ್‌ ಕೊಹ್ಲಿ ಪತ್ರಿಕಾ ಹೇಳಿಕೆ ಪ್ರಕಟಿಸಿದ್ದಾರೆ. ಅಷ್ಟೇ ಅಲ್ಲದೆ ಟೆಸ್ಟ್‌ ತಂಡದ ನಾಯಕನಾಗಿದ್ದ ಅವಧಿಯಲ್ಲಿ ತಮಗೆ ಬೆಂಬಲಿಸಿದ್ದ ಬಿಸಿಸಿಐ, ಮಾಜಿ ನಾಯಕ ಎಂಎಸ್‌ ಧೋನಿ, ಮಾಜಿ ಹೆಡ್‌ ಕೋಚ್‌ ರವಿ ಶಾಸ್ತ್ರಿ ಹಾಗೂ ಸಹ ಆಟಗಾರರಿಗೆ ಕೊಹ್ಲಿ ಧನ್ಯವಾದ ಅರ್ಪಿಸಿದ್ದಾರೆ.

ಆಫ್ರಿಕಾ ವಿರುದ್ಧ ಭಾರತದ ಟೆಸ್ಟ್‌ ಸರಣಿ ಸೋಲಿಗೆ 5 ಪ್ರಮುಖ ಕಾರಣಗಳು!

ಭಾರತ ಟೆಸ್ಟ್‌ ತಂಡದ ಪೂರ್ಣ ಪ್ರಮಾಣದ ನಾಯಕದ ಬಳಿಕ ವಿರಾಟ್‌ ಕೊಹ್ಲಿ 2016ರಲ್ಲಿ ವೆಸ್ಟ್ ಇಂಡೀಸ್‌ ವಿರುದ್ಧ ಅವರದೇ ನೆಲದಲ್ಲಿ ಸೋಲಿಸಿದ್ದರು ಹಾಗೂ ತವರು ಟೆಸ್ಟ್‌ ಸರಣಿಗಳಲ್ಲಿ ಗೆಲುವಿನ ಪಯಣ ಆರಂಭಿಸಿದ್ದರು. ಈ ಆವೃತ್ತಿಯಲ್ಲಿ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ ಎಲ್ಲಾ ನಾಲ್ಕು ತವರು ಸರಣಿಗಳಲ್ಲಿ ಗೆಲುವು ಪಡೆದಿತ್ತು.

ಇನ್ನು 2017/18ರ ಆವೃತ್ತಿಯಲ್ಲಿ ಶ್ರೀಲಂಕಾ ವಿರುದ್ಧ ಭಾರತ ಸತತ ಎರಡು ಬಾರಿ ಟೆಸ್ಟ್‌ ಸರಣಿ ಗೆದ್ದಿತ್ತು. 2018 ವಿರಾಟ್‌ ಕೊಹ್ಲಿ ಪಾಲಿಗೆ ಬೇಸರದ ವರ್ಷವಾಗಿತ್ತು. ಏಕೆಂದರೆ ಇಂಗ್ಲೆಂಡ್‌ ಹಾಗೂ ದಕ್ಷಿಣ ಆಫ್ರಿಕಾ ಪ್ರವಾಸಗಳ ಟೆಸ್ಟ್‌ ಸರಣಿಯಲ್ಲಿ ಭಾರತ ಸೋಲು ಅನುಭವಿಸಿತ್ತು.

ನಂತರ 2018/19ರ ಆವೃತ್ತಿಯಲ್ಲಿ ಶಕ್ತಿಯುತವಾಗಿ ಕಮ್‌ಬ್ಯಾಕ್‌ ಮಾಡಿದ್ದ ಭಾರತ ತಂಡಮ ಆಸ್ಟ್ರೇಲಿಯಾದಲ್ಲಿ ಮೊಟ್ಟ ಮೊದಲ ಬಾರಿ ಟೆಸ್ಟ್‌ ಸರಣಿ ಗೆದ್ದು ಐತಿಹಾಸಿಕ ಸಾಧನೆ ಮಾಡಿತ್ತು. ಆ ಮೂಲಕ ಕಾಂಗರೂಗಳ ನಾಡಿನಲ್ಲಿ ಟೆಸ್ಟ್‌ ಸರಣಿ ಗೆದ್ದ ಏಷ್ಯಾದ ಮೊದಲ ನಾಯಕ ಎಂಬ ಕೀರ್ತಿಗೆ ಕೊಹ್ಲಿ ಪಾತ್ರರಾಗಿದ್ದರು. ಭಾರತೀಯ ಕ್ರಿಕೆಟ್‌ ಇತಿಹಾಸಲ್ಲಿಯೇ ಇದು ಅತ್ಯಂತ ಸ್ಮರಣೀಯ ಕ್ಷಣವಾಗಿತ್ತು.

ಇದಾದ ಬಳಿಕ ಇದೇ ಲಯವನ್ನು ಮುಂದುವರಿಸಿದ್ದ ಭಾರತ ತಂಡ, ವೆಸ್ಟ್ ಇಂಡೀಸ್(2-0), ದಕ್ಷಿಣ ಆಫ್ರಿಕಾ (3-0) ಹಾಗೂ ಬಾಂಗ್ಲಾದೇಶ(2-0) ವಿರುದ್ಧ ಸತತ ಮೂರು ಟೆಸ್ಟ್‌ ಸರಣಿಗಳನ್ನು ಗೆದ್ದು ಯಶಸ್ವಿ ಉತ್ತುಂಗಕ್ಕೇರಿತ್ತು.



Read more

[wpas_products keywords=”deal of the day gym”]