
ನ್ಯೂಯಾರ್ಕ್ (ಪಿಟಿಐ): ಇಲ್ಲಿನ ಜಾನ್ ಎಫ್ ಕೆನಡಿ (ಜೆಎಫ್‌ಕೆ) ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರತೀಯ ಮೂಲದ ಸಿಖ್ ಟ್ಯಾಕ್ಸಿ ಚಾಲಕನೊಬ್ಬನ ಮೇಲೆ ಹಲ್ಲೆ ನಡೆಸಿ ಆತನ ಮುಂಡಾಸನ್ನು ಕಿತ್ತೆಸೆದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಅಮೆರಿಕದ ಅಧಿಕಾರಿಗಳು ಬಂಧಿಸಿದ್ದು, ದ್ವೇಷ ಹಿಂಸಾಚಾರದ ಪ್ರಕರಣ ದಾಖಲಿಸಿದ್ದಾರೆ.
ಸಿಖ್ ಚಾಲಕನ ಮೇಲೆ ಮುಗಿಬಿದ್ದ ವ್ಯಕ್ತಿ ‘ರುಮಾಲಿನ ಜನರೇ, ನಿಮ್ಮ ದೇಶಕ್ಕೆ ಹಿಂತಿರುಗಿ’ ಎನ್ನುತ್ತಾ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ.
ಜನವರಿ 3 ರಂದು ಘಟನೆ ನಡೆದಿದ್ದು ಗುರುವಾರ ಆರೋಪಿ ಮೊಹಮ್ಮದ್ ಹಸನೈನ್ ಅನ್ನು ಬಂಧಿಸಲಾಗಿದೆ. ಸಿಖ್ ವ್ಯಕ್ತಿಯ ಮನವಿ ಮೇರೆಗೆ ಆತನ ಹೆಸರನ್ನು ಗೋಪ್ಯವಾಗಿಡಲಾಗಿದೆ.
ಆರೋಪಿ ಹಸನೈನ್ ಬಂಧನವನ್ನು ನ್ಯೂಯಾರ್ಕ್‌ನ ಪೋರ್ಟ್ ಆಡಳಿತ ಮತ್ತು ನ್ಯೂಜೆರ್ಸಿ ಪೊಲೀಸ್ ಇಲಾಖೆ (ಪಿಎಪಿಡಿ) ಶುಕ್ರವಾರ ಖಚಿತಪಡಿಸಿವೆ ಎಂದು ಸಮುದಾಯ-ಆಧಾರಿತ ನಾಗರಿಕ ಮತ್ತು ಮಾನವ ಹಕ್ಕುಗಳ ಸಂಸ್ಥೆ ಸಿಖ್ ಒಕ್ಕೂಟ ತಿಳಿಸಿದೆ.
ಆರೋಪಿ ಹಸನೈನ್ ಚಾಲಕನನ್ನು ಎಳೆದಾಡುವಾಗ ಪದೇ ಪದೇ ಆತನಿಗೆ ‘ನಿಮ್ಮ ದೇಶಕ್ಕೆ ಹಿಂತಿರುಗಿ’, ’ರುಮಾಲಿನ ಜನ’ ಎಂದು ಅವಹೇಳನಕಾರಿಯಾಗಿ ಮಾತನಾಡಿದ್ದಾನೆ. ಆದ್ದರಿಂದ ಇದೊಂದು ದ್ವೇಷಪೂರಿತ ಹಿಂಸಾಚಾರ ಎಂದು ಪರಿಗಣಿಸಲಾಗಿದೆ. ಹಸನೈನ್ ವಿರುದ್ಧ ದ್ವೇಷ ಅಪರಾಧ, ಕಿರುಕುಳದ ಪ್ರಕರಣ ದಾಖಲಿಸಲಾಗಿದೆ.
Read more from source
[wpas_products keywords=”deals of the day offer today electronic”]