Karnataka news paper

ನಿಮ್ಮ ಫೋನ್‌ ಸ್ಟೋರೇಜ್‌ ನಲ್ಲಿ ಸ್ಪೇಸ್‌ ಉಳಿಸಲು ಹೀಗೆ ಮಾಡಿ?


ಸ್ಟೋರೇಜ್‌

ಹೌದು, ಸ್ಮಾರ್ಟ್‌ಫೋನ್‌ಗಳಲ್ಲಿ ಸ್ಟೋರೇಜ್‌ ಫುಲ್‌ ಆದಾಗ ಆಗುವ ಕಿರಿಕಿರಿ ಅಷ್ಟಿಷ್ಟಲ್ಲ. ಫೈಲ್‌ಗಳನ್ನು ಸೇವ್‌ ಮಾಡಲು ಆಗುವುದಿಲ್ಲ. ಜೊತೆಗೆ ಫೋನ್‌ ಕಾರ್ಯನಿರ್ವಹಣೆ ಕೂಡ ಸ್ಲೋ ಆಗಿ ಬಿಡುತ್ತದೆ. ಆದರಿಂದ ನಿಮ್ಮ ಫೋನ್‌ ಸ್ಟೋರೇಜ್‌ ಅನ್ನು ಆಗಾಗ ಖಾಲಿ ಮಾಡುವುದು ಉತ್ತಮ ಎನಿಸಿಲಿದೆ. ಅಲ್ಲದೆ ಫೋನ್‌ ಸ್ಟೋರೇಜ್‌ ಸ್ಪೇಸ್‌ ಉಳಿದಷ್ಟು ನಿಮ್ಮ ಫೋನ್‌ ಹ್ಯಾಂಗ್‌ ಆಗುವುದನ್ನು ತಪ್ಪಿಸಬಹುದು. ಹಾಗಾದ್ರೆ ನಿಮ್ಮ ಫೋನ್‌ನಲ್ಲಿ ಸ್ಟೋರೇಜ್‌ ಸ್ಪೇಸ್‌ ಉಳಿಸಲು ನೀವು ಅನುಸರಿಸಬೇಕಾದ ಕ್ರಮಗಳು ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಅಪ್ಲಿಕೇಶನ್‌ಗಳನ್ನು ಪ್ಲೇ ಸ್ಟೋರ್‌ ಮೂಲಕ ಡಿಲೀಟ್‌ ಮಾಡಿರಿ.

ಅಪ್ಲಿಕೇಶನ್‌ಗಳನ್ನು ಪ್ಲೇ ಸ್ಟೋರ್‌ ಮೂಲಕ ಡಿಲೀಟ್‌ ಮಾಡಿರಿ.

ನಿಮ್ಮ ಫೋನ್‌ ಸ್ಟೋರೇಜ್‌ ಫುಲ್‌ ಆಗುವುದನ್ನು ತಪ್ಪಿಸಲು ಕೆಲವ ಅಪ್ಲಿಕೇಶನ್‌ಗಳನ್ನು ಡಿಲೀಟ್‌ ಮಾಡಬೇಕಾಗುತ್ತದೆ ಹಾಗೇ ಮಾಡುವಾಗಿ ನೀವು ಪ್ಲೇ ಸ್ಟೋರ್‌ ಮೂಲಕವೇ ಅಪ್ಲಿಕೇಶನ್‌ಗಳನ್ನು ಡಿಲೀಟ್‌ ಮಾಡುವುದು ಉತ್ತಮ. ಇದಕ್ಕಾಗಿ ನೀವು ಮೊದಲಿಗೆ ಗೂಗಲ್‌ ಪ್ಲೇ ಸ್ಟೋರ್‌ ಅಪ್ಲಿಕೇಶನ್ ತೆರೆಯಿರಿ, ನಿಮ್ಮ ಪ್ರೊಫೈಲ್ ಮೇಲೆ ಟ್ಯಾಪ್ ಮಾಡಿ > ಮ್ಯಾನೇಜ್‌ ಆಪ್ಸ‌ ಡಿವೈಸ್‌ ವಿಭಾಗದಲ್ಲಿ ಮತ್ತೊಮ್ಮೆ ಟ್ಯಾಪ್ ಮಾಡಿ. ಇಲ್ಲಿ ನಿಮ್ಮ ಅಪ್ಲಿಕೇಶನ್‌ಗಳು ಎಷ್ಟು ಜಾಗವನ್ನು ಬಳಸಿವೆ ಎಂಬುದನ್ನು ತಿಳಿಯಬಹುದು. ನಂತರ ನೀವು ಡಿಲೀಟ್‌ ಮಾಡಲು ಬಯಸುವ ಅಪ್ಲಿಕೇಶನ್‌ಗಳನ್ನು ಆಯ್ಕೆ ಮಾಡಬಹುದು. ನೀವು [ಪ್ಲೇ ಸ್ಟೋರ್‌ನಲ್ಲಿ ಅಪ್ಲಿಕೇಶನ್‌ ಗಾತ್ರವನ್ನು ತಿಳಿದು ಡಿಲೀಟ್‌ ಮಾಡುವುದರಿಂದ ನಿಮಗೆ ಬೇಕಾದ ಸ್ಪೇಸ್‌ಗೆ ತಕ್ಕಂತೆ ಅಪ್ಲಿಕೇಶನ್‌ ಡಿಲೀಟ್‌ ಮಾಡಬಹುದು.

ವಾಟ್ಸಾಪ್‌ ಸ್ಟೋರೇಜ್‌ ಮ್ಯಾನೇಜರ್‌ ಅನ್ನು ಬಳಸಿ

ವಾಟ್ಸಾಪ್‌ ಸ್ಟೋರೇಜ್‌ ಮ್ಯಾನೇಜರ್‌ ಅನ್ನು ಬಳಸಿ

ಸ್ಮಾರ್ಟ್‌ಫೋನ್‌ ಬಳಸುವ ಪ್ರತಿಯೊಬ್ಬರೂ ಕೂಡ ವಾಟ್ಸಾಪ್‌ ಬಳಸುವುದು ಸಾಮಾನ್ಯವಾಗಿ ಬಿಟ್ಟಿದೆ. ಆದರೆ ವಾಟ್ಸಾಪ್‌ನ ಬಳಕೆಯಿಂದಲೂ ಕೂಡ ನಿಮ್ಮ ಸ್ಟೋರೇಜ್‌ ಸ್ಪೇಸ್‌ ಫುಲ್‌ ಆಗುತ್ತಾ ಬರುತ್ತದೆ. ಆದರಿಂದ ನೀವು ವಾಟ್ಸಾಪ್‌ ಬಳಸುವಾಗ ವಾಟ್ಸಾಪ್‌ ಸ್ಟೋರೇಜ್‌ ಮ್ಯಾನೇಜರ್‌ ಬಳಸುವುದು ಉತ್ತಮ. ಇದರಿಂದ ನಿಮ್ಮ ವಾಟ್ಸಾಫ್‌ಗೆ ಬರುವ ಫೋಟೋ, ಫೈಲ್‌ಗಳನ್ನು ಇನ್ಸಟಂಟ್‌ ಆಗಿ ಡಿಲೀಟ್‌ ಮಾಡಲು ಅನುಕೂಲವಾಗಲಿದೆ. ಇದಕ್ಕಾಗಿ ನೀವು ಮೊದಲಿಗೆ ವಾಟ್ಸಾಪ್‌ ಅಪ್ಲಿಕೇಶನ್ ತೆರೆಯಿರಿ ಮತ್ತು ಸೆಟ್ಟಿಂಗ್ಸ್‌ಗೆ ಹೋಗಿ > ಸ್ಟೋರೇಜ್‌ ಮತ್ತು ಡೇಟಾ > ಸ್ಟೋರೇಜ್‌ ಮ್ಯಾನೇಜರ್‌ ಆಯ್ಕೆ ಮಾಡಿ. ಇಲ್ಲಿ, ನೀವು 5MB ಗಿಂತ ದೊಡ್ಡದಾದ ಫೈಲ್‌ಗಳ ವಿಭಾಗವನ್ನು ನೋಡುತ್ತೀರಿ. ನೀವು ಅದರ ಮೇಲೆ ಟ್ಯಾಪ್ ಮಾಡಬಹುದು. ಜೊತೆಗೆ ನಿಮಗೆ ಅನಗತ್ಯ ಎನಿಸುವ ಫೈಲ್‌ಗಳು, ಫೋಟೋಗಳು ಮತ್ತು ವೀಡಿಯೊಗಳನ್ನು ಒಂದೇ ಸಮಯದಲ್ಲಿ ಡಿಲೀಟ್‌ ಮಾಡಬಹುದು.

ಫೋಟೋಗಳನ್ನು ಕ್ಲೌಡ್‌ ಸ್ಟೋರೇಜ್‌ನಲ್ಲಿ ಸೇವ್‌ ಮಾಡಿ

ಫೋಟೋಗಳನ್ನು ಕ್ಲೌಡ್‌ ಸ್ಟೋರೇಜ್‌ನಲ್ಲಿ ಸೇವ್‌ ಮಾಡಿ

ನಿಮ್ಮ ಸ್ಮಾರ್ಟ್‌ಫೋನ್‌ನ ಸ್ಟೋರೇಜ್‌ ಸ್ಪೇಸ್‌ ಉಳಿಸಲು ಲಭ್ಯವಿರುವ ಅತ್ಯುತ್ತಮ ವಿಧಾನ ಎಂದರೆ ಕ್ಲೌಡ್‌ ಸ್ಟೋರೇಜ್‌ ಅಪ್ಲಿಕೇಶನ್‌ಗಳನ್ನು ಬಳಸುವುದು. ಇದರಿಂದ ನಿಮ್ಮ ಫೋನ್‌ನಲ್ಲಿರುವ ಫೋಟೋಗಳನ್ನು ಕ್ಲೌಡ್‌ ಸ್ಟೋರೇಜ್‌ನಲ್ಲಿ ಬ್ಯಾಕಪ್‌ ಮಾಡಬಹುದು. ನಂತರ ನಿಮ್ಮ ಫೋನ್‌ ಗ್ಯಾಲರಿಯಲ್ಲಿರುವ ಫೋಟೋಗಳನ್ನು, ಫೈಲ್‌ಗಳನ್ನು ಡಿಲೀಟ್‌ ಮಾಡಬಹುದು. ಕ್ಲೌಡ್‌ ಸ್ಟೋರೇಜ್‌ನಲ್ಇ ನಿಮ್ಮ ಫೋಟೋಗಳು ಸೇವ್‌ ಆಗಿರುತ್ತದೆ.

ಬಿಗ್‌ ಸೈಜ್‌ ಫೈಲ್‌ಗಳನ್ನು ಡಿಲೀಟ್‌ ಮಾಡಿರಿ.

ಬಿಗ್‌ ಸೈಜ್‌ ಫೈಲ್‌ಗಳನ್ನು ಡಿಲೀಟ್‌ ಮಾಡಿರಿ.

ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಬಿಗ್‌ ಸೈಜ್‌ ಪೈಲ್‌ಗಳನ್ನು ಸರ್ಚ್‌ ಮಾಡಿ ಅವುಗಳನ್ನು ಡಿಲೀಟ್‌ ಮಾಡಬಹುದು. ನಿಮಗೆ ಅನಗತ್ಯ ಎನಿಸುವ ಬಿಗ್‌ ಸೈಜ್‌ ಫೈಲ್‌ಗಳನ್ನು ಡಿಲೀಟ್‌ ಮಾಡಿದಾಗ ನಿಮಗೆ ಹೆಚ್ಚಿನ ಸ್ಟೋರೇಜ್‌ ಸ್ಪೇಸ್‌ ಉಳಿಯಲಿದೆ.

ಈ ಮೂಲಕ ನಿಮ್ಮ ಫೋನ್‌ನಲ್ಲಿ ಸ್ಟೋರೇಜ್‌ ಫುಲ್‌ ಆದ ನೀವು ಸ್ಪೇಸ್‌ ಫ್ರೀ ಮಾಡಬಹುದು.



Read more…

[wpas_products keywords=”smartphones under 15000 6gb ram”]