Karnataka news paper

ಮೇಕೆದಾಟು ಅಣೆಕಟ್ಟು ಯೋಜನೆ: ಇದು ಪರಿಸರದ ಮೇಲಿನ ಯುದ್ಧ– ನಟ ಚೇತನ್‌ ಆಕ್ರೋಶ


ಬೆಂಗಳೂರು: ಮೇಕೆದಾಟು ಯೋಜನೆಯು ಮೂರು ರಾಜಕೀಯ ಪಕ್ಷಗಳು ಪರಿಸರ ಮೇಲೆ ನಡೆಸುತ್ತಿರುವ ಯುದ್ಧವಾಗಿದೆ. ಇದು ಗುತ್ತಿಗೆದಾರರ ಪರ ಯೋಜನೆ ಎಂದು ನಟ ಚೇತನ್‌ ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ನೆಲ ಜಲ ಪರಿಸರ ರಕ್ಷಣಾ ಸಮಿತಿ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ‘ಮೇಕೆದಾಟು ಪರ, ಅಣೆಕಟ್ಟು ವಿರುದ್ಧ’ ಕುರಿತು ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘₹9 ಸಾವಿರ ಕೋಟಿ ಮೊತ್ತದಲ್ಲಿ ಕೈಗೊಳ್ಳಲಿರುವ ಮೇಕೆದಾಟು ಯೋಜನೆಯಿಂದ 12 ಸಾವಿರ ಎಕರೆಗೂ ಹೆಚ್ಚು ಅರಣ್ಯ ನಾಶವಾಗಲಿದೆ. ಲಕ್ಷಾಂತರ ಮರಗಳು ನಾಶವಾಗಲಿವೆ. ಐದು ಹಳ್ಳಿಗಳು ಮುಳುಗಡೆಯಾಗಲಿವೆ’ ಎಂದು ಆತಂಕ ವ್ಯಕ್ತಪಡಿಸಿದರು.

‘ಈಗ ರಾಜಕಾರಣಿಗಳೇ ಗುತ್ತಿಗೆದಾರರಾಗಿದ್ದಾರೆ. ಹೀಗಾಗಿ, ಪರಿಸರ ನಾಶ ಮಾಡಿ ಆರ್ಥಿಕ ಲಾಭ ಮಾಡಿಕೊಳ್ಳುವ ಹುನ್ನಾರದಲ್ಲಿ ತೊಡಗಿದ್ದಾರೆ. ಈ ಯೋಜನೆ ಸ್ಥಗಿತಗೊಳಿಸಿ, ನಿಸರ್ಗ ರಮಣೀಯವಾಗಿರುವ ಮೇಕೆದಾಟು ಸ್ಥಳವನ್ನು ವಿಶ್ವ ಪಾರಂಪರಿಕ ತಾಣವನ್ನಾಗಿ ಯುನೆಸ್ಕೊ ಘೋಷಿಸಬೇಕು’ ಎಂದು ಆಗ್ರಹಿಸಿದರು.

ಇದನ್ನೂ ಓದಿ– ಮೇಕೆದಾಟು ಅಣೆಕಟ್ಟು ನಿರ್ಮಾಣದಂತಹ ಯೋಜನೆಗಳಿಂದ ನದಿಗಳ ನಾಶ: ಮೇಧಾ ಪಾಟ್ಕರ್ ಕಳವಳ



Read more from source

[wpas_products keywords=”deal of the day sale today kitchen”]