Karnataka news paper

‘ಮಗಳು ಜಾನಕಿ’ ಧಾರಾವಾಹಿಯ ರಾಕೇಶ್ ಮಯ್ಯ ‘ಸದ್ದು ವಿಚಾರಣೆ ನಡೆಯುತ್ತಿದೆ’ ಸಿನಿಮಾಕ್ಕೆ ಡಾಲಿ ಧನಂಜಯ ಸಾಥ್


ಹೈಲೈಟ್ಸ್‌:

  • ‘ಮಗಳು ಜಾನಕಿ’ ಧಾರಾವಾಹಿ ಖ್ಯಾತಿಯ ನಟ ರಾಕೇಶ್ ಮಯ್ಯ
  • ಅನೇಕ ಸಿನಿಮಾಗಳಲ್ಲಿ ರಾಕೇಶ್ ಮಯ್ಯ ಬ್ಯುಸಿ
  • ‘ಸದ್ದು ವಿಚಾರಣೆ ನಡೆಯುತ್ತಿದೆ’ ಪೋಸ್ಟರ್ ರಿಲೀಸ್ ಮಾಡಿದ ಡಾಲಿ ಧನಂಜಯ

‘ಸದ್ದು ವಿಚಾರಣೆ ನಡೆಯುತ್ತಿದೆ’.. ಹೀಗೊಂದು ಆಕರ್ಷಕ ಶೀರ್ಷಿಕೆಯೊಂದನ್ನು ಇಟ್ಟುಕೊಂಡು ಸಸ್ಪೆನ್ಸ್ ಥ್ರಿಲ್ಲರ್ ಕಥೆ ಹೇಳೋದಿಕ್ಕೆ ಉತ್ಸಾಹಿ ಕಲಾವಿದರ ತಂಡ ಸಜ್ಜಾಗಿದೆ. ಕೊರೊನಾ ವೈರಸ್ ಹಾವಳಿ‌ ಇಲ್ಲದೇ ಹೋಗಿದ್ದರೆ ಇಷ್ಟರಲ್ಲಾಗಲೇ ಸದ್ದು ವಿಚಾರಣೆ ನಡೆಯುತ್ತಿದೆ ಸಿನಿಮಾದ ಹಾವಳಿ ತೆರೆಮೇಲೆ ಶುರುವಾಗಬೇಕಿತ್ತು. ಸದ್ಯಕ್ಕೀಗ ಸಿನಿಮಾ ಶೂಟಿಂಗ್ ಮುಗಿಸಿರುವ ಚಿತ್ರತಂಡ, ನಟರಾಕ್ಷಸ ಡಾಲಿ ಧನಂಜಯ್ ಹಸ್ತದಿಂದ ‘ಸದ್ದು ವಿಚಾರಣೆ ನಡೆಯುತ್ತಿದೆ’ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿಸಿದೆ. ಪೋಸ್ಟರ್ ರಿಲೀಸ್ ಮಾಡಿ ಡಾಲಿ ( daali dhananjaya ) ಇಡೀ ಚಿತ್ರತಂಡ ಶುಭ ಹಾರೈಸಿದ್ದಾರೆ.

‘ಮಗಳು ಜಾನಕಿ’ ಖ್ಯಾತಿಯ ರಾಕೇಶ್ ಮಯ್ಯ ಹೀರೋ

‘ಮಗಳು ಜಾನಕಿ’ ಸೀರಿಯಲ್ ಮೂಲಕ ಖ್ಯಾತಿ ಪಡೆದಿರುವ ರಾಕೇಶ್‌ ಮಯ್ಯ ಈ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದು, ರಾಕೇಶ್‌ಗೆ ಜೋಡಿಯಾಗಿ ‘ಗೊಂಬೆಗಳ ಲವ್‌’ ಸಿನಿಮಾ ಖ್ಯಾತಿಯ ಪಾವನಾ ಗೌಡ ನಟಿಸಿದ್ದಾರೆ. ಉಳಿದಂತೆ ಅಚ್ಯುತ ಕುಮಾರ್ , ಕೃಷ್ಣ ಹೆಬ್ಬಾಳೆ, ಮಧು ನಂದನ್ , ಜಹಾಂಗೀರ್, ರಾಘು ಶಿವಮೊಗ್ಗ, ರೋಹಿಣಿ ರಘುನಂದನ್ ಇನ್ನೂ ಮುಂತಾದವರು ನಟಿಸಿದ್ದಾರೆ.

ಈ ಚಿತ್ರದ ನಿರ್ದೇಶಕರು ಯಾರು?
‘ಶ್ರೀಮಾನ್ ಶ್ರೀಮತಿ’ ಸೀರಿಯಲ್ ಹಾಗೂ ಲೌಡ್ ಸ್ಪೀಕರ್, ಕೃಷ್ಣ ಗಾರ್ಮೆಂಟ್, ಫೋರ್ ವಾಲ್ಸ್ ಸಿನಿಮಾಗಳಲ್ಲಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಭಾಸ್ಕರ್ ಆರ್ ನೀನಾಸಂ ‘ಸದ್ದು ವಿಚಾರಣೆ’ ಸಿನಿಮಾ ಮೂಲಕ ನಿರ್ದೇಶನದ ಅಖಾಡಕ್ಕೆ ಧುಮುಕಿದ್ದಾರೆ. ಇದು ಇವರು ನಿರ್ದೇಶನದ ಮೊದಲ ಸಿನಿಮಾವಾಗಿದೆ.

ರಮೇಶ್ ಅರವಿಂದ್‌ರ ‘ಶಿವಾಜಿ ಸುರತ್ಕಲ್ 2’ ತಂಡ ಸೇರಿಕೊಂಡ ‘ಮಗಳು ಜಾನಕಿ’ ನಟ ರಾಕೇಶ್ ಮಯ್ಯ

ತಂತ್ರಜ್ಞರು ಯಾರು?
ಅಶ್ವಿನಿ ಕೆ ಎನ್ ಕಥೆ, ದಕ್ಷಿಣ ಮೂರ್ತಿ ಸಂಭಾಷಣೆ , ರಾಜ್ ಕಾಂತ ಕ್ಯಾಮೆರಾ, ಸಚಿನ್ ಬಸ್ರೂರ್ ಮ್ಯೂಸಿಕ್, ಶಶಿಧರ್ ಪಿ ಸಂಕಲನ, ಗಂಗಮ್ ರಾಜ್ ಕೊರಿಯೋಗ್ರಾಫಿ, ಅರ್ಜುನ್ ರಾಜ್ ಸಾಹಸ,ಅಶ್ವಿನಿ ಕೆ ಎನ್, ಪ್ರಮೋದ್ ಮರವಂತೆ ಸಾಹಿತ್ಯ , ರವಿ ಬಸ್ರೂರ್, ಸಚಿನ್ ಬಸ್ರೂರ್ ಗಾಯನ ಸಿನಿಮಾದಲ್ಲಿ ಇರಲಿದೆ.

‘ಮಗಳು ಜಾನಕಿ’ ಬಳಿಕ ನಟ ರಾಕೇಶ್ ಮಯ್ಯ ಏನ್ಮಾಡ್ತಿದ್ದಾರೆ?

ಸಹ ನಿರ್ದೇಶನ ಪ್ರೇಮ್ ಕುಮಾರ್ ಎಚ್ ಆರ್ ಕೆಲಸ ನಿರ್ವಹಿಸಿದ್ದು, ಎಂ ಎಂ ಸಿನಿಮಾಸ್ ಬ್ಯಾನರ್ ನಡಿ ಸುರಭಿ ಲಕ್ಷ್ಮಣ್ ‘ಸದ್ದು ವಿಚಾರಣೆ ನಡೆಯುತ್ತಿದೆ’ ಸಿನಿಮಾಗೆ ಬಂಡವಾಳ ಹೂಡಿದ್ದಾರೆ. ಪ್ರತಿಭಾನ್ವಿತ ತಂಡವೇ ಸೇರಿ ಮಾಡಿರುವ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ ‘ಸದ್ದು ವಿಚಾರಣೆ ನಡೆಯುತ್ತಿದೆ’ ಕೊರೊನಾ ಆಟ ಕೊಂಚ ಕಡಿಮೆಯಾದ್ಮೇಲೆ ಥಿಯೇಟರ್‌ಗೆ ಬರಲಿದೆ.

ನಟ ರಾಕೇಶ್ ಮಯ್ಯ ( rakesh maiya ) ಮುಂಬರುವ ಸಿನಿಮಾಗಳು ಯಾವುವು?
‘ಮಗಳು ಜಾನಕಿ’ ಧಾರಾವಾಹಿಯಲ್ಲಿ ನಟಿಸಿದ ನಂತರದಲ್ಲಿ ರಾಕೇಶ್ ಮಯ್ಯ ಅವರಿಗೆ ಒಂದಾದ ಮೇಲೆ ಒಂದರಂತೆ ಸಿನಿಮಾ ಅವಕಾಶಗಳು ಬರುತ್ತಿವೆ. ರಾಕೇಶ್ ಮಯ್ಯ ಅವರು ಈಗಾಗಲೇ ‘ಶುಭಮಂಗಳ’, ‘ಟೆನಂಟ್’ ಎಂಬ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.



Read more

[wpas_products keywords=”deal of the day party wear dress for women stylish indian”]