Karnataka news paper

ಕೋವಿಡ್ ಕಂಟಕ: ಮತ್ತೆ ಮುಂದಕ್ಕೆ ಹೋದ ಚಿರಂಜೀವಿ ನಟನೆಯ ‘ಆಚಾರ್ಯ’ ಬಿಡುಗಡೆ ದಿನಾಂಕ


ಹೈಲೈಟ್ಸ್‌:

  • ‘ಆಚಾರ್ಯ’ ಚಿತ್ರದ ರಿಲೀಸ್ ಡೇಟ್ ಪೋಸ್ಟ್ ಪೋನ್
  • ಚಿರಂಜೀವಿ, ರಾಮ್ ಚರಣ್ ಅಭಿನಯದ ‘ಆಚಾರ್ಯ’ ಚಿತ್ರ
  • ಫೆಬ್ರವರಿ 4, 2022 ರಂದು ರಿಲೀಸ್ ಆಗಬೇಕಿದ್ದ ‘ಆಚಾರ್ಯ’

ಎಲ್ಲವೂ ಪ್ಲಾನ್ ಪ್ರಕಾರ ನಡೆದಿದ್ದರೆ, ಇಷ್ಟೊತ್ತಿಗಾಗಲೇ ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ ‘ಆಚಾರ್ಯ’ ಸಿನಿಮಾ ಬಿಡುಗಡೆಯಾಗಿರಬೇಕಿತ್ತು. ಹಾಗ್ನೋಡಿದ್ರೆ, ಮೇ 13, 2021ಕ್ಕೆ ಮೊದಲು ‘ಆಚಾರ್ಯ’ ಚಿತ್ರದ ರಿಲೀಸ್ ಡೇಟ್ಸ್ ಫಿಕ್ಸ್ ಆಗಿತ್ತು. ಆದರೆ, ಕೋವಿಡ್-19 ಎರಡನೇ ಅಲೆಯಿಂದಾಗಿ ಅಂದು ‘ಆಚಾರ್ಯ’ ತೆರೆಗೆ ಬರಲಿಲ್ಲ.

‘ಆಚಾರ್ಯ’ ಚಿತ್ರವನ್ನು ಫೆಬ್ರವರಿ 4, 2022 ರಂದು ಬಿಡುಗಡೆ ಮಾಡಲು ಚಿತ್ರತಂಡ ಘೋಷಣೆ ಮಾಡಿತ್ತು. ಅದಕ್ಕಾಗಿ ಸಕಲ ತಯಾರಿಯನ್ನೂ ಮಾಡಿಕೊಳ್ಳುತ್ತಿತ್ತು. ಹೀಗಿರುವಾಗಲೇ, ದೇಶದಲ್ಲಿ ಮತ್ತೆ ಕೋವಿಡ್ ಕಂಟಕ ಎದುರಾಗಿದೆ. ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಿಢೀರ್ ಏರಿಕೆ ಆಗುತ್ತಿವೆ. ಹೀಗಾಗಿ, ಕರ್ನಾಟಕವೂ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಸೋಂಕನ್ನು ತಡೆಗಟ್ಟಲು ಹಲವು ರೀತಿಯಲ್ಲಿ ನಿರ್ಬಂಧಗಳನ್ನು ಹೇರಲಾಗಿದೆ. ಕೆಲವು ಕಡೆ ಚಿತ್ರಮಂದಿರಗಳನ್ನು ಬಂದ್ ಮಾಡಲಾಗಿದ್ದರೆ, ಕೆಲವು ಕಡೆ 50% ಆಸನ ಭರ್ತಿಗೆ ಮಾತ್ರ ಅವಕಾಶ ನೀಡಲಾಗಿದೆ. ಹೀಗಾಗಿ, ಫೆಬ್ರವರಿ 4, 2022 ರಂದು ‘ಆಚಾರ್ಯ’ ಚಿತ್ರವನ್ನು ಬಿಡುಗಡೆ ಮಾಡದಿರಲು ಚಿತ್ರತಂಡ ನಿರ್ಧರಿಸಿದೆ.

ಕೊರೊನಾ ವೈರಸ್ ಸೋಂಕಿಗೆ ಚಿರಂಜೀವಿ ಕ್ಯಾರವಾನ್ ಚಾಲಕ ಬಲಿ!
’ಆಚಾರ್ಯ’ ರಿಲೀಸ್ ಪೋಸ್ಟ್ ಪೋನ್!
‘’ಪ್ಯಾಂಡೆಮಿಕ್‌ನಿಂದಾಗಿ ‘ಆಚಾರ್ಯ’ ಚಿತ್ರದ ಬಿಡುಗಡೆಯನ್ನು ಮುಂದಕ್ಕೆ ಹಾಕಲಾಗುತ್ತಿದೆ. ನೂತನ ಬಿಡುಗಡೆ ದಿನಾಂಕವನ್ನು ಸದ್ಯದಲ್ಲೇ ಘೋಷಿಸಲಾಗುತ್ತದೆ’’ ಎಂದು ನಿರ್ಮಾಣ ಸಂಸ್ಥೆ ‘ಕೊನಿಡೆಲಾ ಪ್ರೋ ಕಂಪನಿ’ ಟ್ವೀಟ್ ಮಾಡಿದೆ.

‘ಬಾಹುಬಲಿ’, ‘ಆಚಾರ್ಯ’, ‘ರಾಧೆ ಶ್ಯಾಮ್’ ರೆಕಾರ್ಡ್ ಪೀಸ್ ಪೀಸ್ ಮಾಡಿದ ಅಲ್ಲು ಅರ್ಜುನ್!
‘ಆಚಾರ್ಯ’ ಚಿತ್ರದ ಕುರಿತು
ಕೊರಟಾಲ ಶಿವ ನಿರ್ದೇಶನದ ಚಿತ್ರ ‘ಆಚಾರ್ಯ’. ಈ ಸಿನಿಮಾದಲ್ಲಿ ಮೆಗಾ ಸ್ಟಾರ್ ಚಿರಂಜೀವಿ, ಮೆಗಾ ಪವರ್ ಸ್ಟಾರ್ ರಾಮ್ ಚರಣ್, ನಟಿ ಪೂಜಾ ಹೆಗ್ಡೆ, ಕಾಜಲ್ ಅಗರ್‌ವಾಲ್ ಮುಂತಾದವರ ದೊಡ್ಡ ತಾರಾಬಳಗವಿದೆ. ಚಿತ್ರಕ್ಕೆ ಮಣಿಶರ್ಮ ಸಂಗೀತ ನೀಡಿದ್ದಾರೆ. ಸುಮಾರು 140 ಕೋಟಿ ರೂಪಾಯಿ ಬಜೆಟ್‌ನಲ್ಲಿ ‘ಆಚಾರ್ಯ’ ಚಿತ್ರ ತಯಾರಾಗಿದೆ.

‘ಮೆಗಾ’ ಫ್ಯಾಮಿಲಿಗೆ ಕೊರೊನಾತಂಕ: ರಾಮ್ ಚರಣ್‌ ನಂತರ ವರುಣ್‌ ತೇಜ್‌ಗೂ ಕೊರೊನಾ ಪಾಸಿಟಿವ್!
ಪೋಸ್ಟ್ ಪೋನ್ ಆದ ಬಿಗ್ ಬಜೆಟ್ ಚಿತ್ರಗಳು
ರಾಧೆ ಶ್ಯಾಮ್: ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಅಭಿನಯದ ‘ರಾಧೆ ಶ್ಯಾಮ್’ ಸಿನಿಮಾ ಸಂಕ್ರಾಂತಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಬೇಕಿತ್ತು. ಆದರೆ, ಹೆಚ್ಚುತ್ತಿರುವ ಕೋವಿಡ್ ಮತ್ತು ಒಮಿಕ್ರಾನ್ ಪ್ರಕರಣಗಳಿಂದಾಗಿ ‘ರಾಧೆ ಶ್ಯಾಮ್’ ಚಿತ್ರದ ರಿಲೀಸ್ ದಿನಾಂಕವನ್ನು ಮುಂದಕ್ಕೆ ಹಾಕಲಾಯ್ತು.

ಕೊರೊನಾ ಎಫೆಕ್ಟ್: ‘RRR’ ಬಿಡುಗಡೆ ಪೋಸ್ಟ್‌ಪೋನ್‌ ಆಯ್ತು; ಹಾಗಾದ್ರೆ, ‘ರಾಧೆ ಶ್ಯಾಮ್’ ಕಥೆ ಏನು?
‘’ನಾವು ಅತ್ಯುತ್ತಮವಾದುದನ್ನು ನೀಡಲು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಿದೆವು. ಆದರೆ, ಒಮಿಕ್ರಾನ್ ಸೋಂಕಿನ ಏರಿಕೆಯನ್ನು ಗಮನಿಸಿದಾಗ, ನಮ್ಮ ಶ್ರಮವನ್ನು ದೊಡ್ಡ ಪರದೆ ಮೇಲೆ ತೋರಿಸಲು ಇನ್ನಷ್ಟು ದಿನ ಕಾಯಬೇಕಿದೆ. ‘ರಾಧೆ ಶ್ಯಾಮ್‌’ ಸಿನಿಮಾದ ಕಥೆಯು ಪ್ರೀತಿ V/s ವಿಧಿ ಕುರಿತು ಇದೆ. ಇದನ್ನೆಲ್ಲ ದಾಟಿ ಬರಲು ನಿಮ್ಮ ಪ್ರೀತಿ ನಮಗೆ ಸಹಾಯ ಮಾಡಲಿದೆ ಎಂಬ ನಂಬಿಕೆ ನಮಗೆ ಇದೆ. ನಿಮ್ಮನ್ನೆಲ್ಲ ಅತೀ ಶೀಘ್ರದಲ್ಲೇ ಭೇಟಿಯಾಗಲಿದ್ದೇವೆ’’ ಎಂದು ಚಿತ್ರತಂಡ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿತ್ತು.

ಜನವರಿ 7ಕ್ಕೆ ರಿಲೀಸ್ ಆಗಬೇಕಿದ್ದ RRR ಸಿನಿಮಾ ಮತ್ತೆ ಮುಂದಕ್ಕೆ ಹೋಯ್ತು: ಅಧಿಕೃತಪಡಿಸಿದ ಚಿತ್ರತಂಡ
‘ಆರ್‌ಆರ್‌ಆರ್‌’ : ರಾಜಮೌಳಿ ನಿರ್ದೇಶನದ ಜೂನಿಯರ್ ಎನ್‌ಟಿಆರ್, ರಾಮ್ ಚರಣ್ ಅಭಿನಯದ ‘ಆರ್‌ಆರ್‌ಆರ್‌’ ಚಿತ್ರ ಜನವರಿ ಮೊದಲ ವಾರದಲ್ಲಿ ರಿಲೀಸ್ ಆಗಬೇಕಿತ್ತು. ಆದರೆ, ಕೋವಿಡ್‌ ಆತಂಕದಿಂದಾಗಿ ‘ಆರ್‌ಆರ್‌ಆರ್‌’ ಚಿತ್ರದ ಬಿಡುಗಡೆಯನ್ನು ಪೋಸ್ಟ್ ಪೋನ್ ಮಾಡಲಾಯಿತು.

‘’ನಮ್ಮ ಎಲ್ಲ ಪ್ರಯತ್ನಗಳ ಹೊರತಾಗಿ ಸಂದರ್ಭವು ನಮ್ಮ ಕೈಯಲ್ಲಿ ಇಲ್ಲ ಎಂದು ಅನಿಸುತ್ತಿದೆ. ಅನೇಕ ರಾಜ್ಯಗಳಲ್ಲಿ ಸಿನಿಮಾ ಥಿಯೇಟರ್‌ಗಳು ಬಂದ್ ಆಗುತ್ತಿವೆ. ಹೀಗಾಗಿ ನಮಗೆ ಬೇರೆ ದಾರಿ ಇಲ್ಲ, ನಿಮ್ಮ ಕುತೂಹಲವನ್ನು ಇನ್ನಷ್ಟು ದಿನ ಹಿಡಿದಿಟ್ಟುಕೊಳ್ಳುವ ಸ್ಥಿತಿ ಬಂದಿದೆ. ಸರಿಯಾದ ಸಮಯಕ್ಕೆ ಭಾರತೀಯ ಚಿತ್ರರಂಗದ ಸಿನಿಮಾ ವೈಭವ ಆರ್‌ಆರ್‌ಆರ್‌ ಚಿತ್ರವನ್ನು ರಿಲೀಸ್ ಮಾಡಲಿದ್ದೇವೆ’’ ಎಂದು ‘ಆರ್‌ಆರ್‌ಆರ್‌’ ಚಿತ್ರತಂಡ ಹೇಳಿಕೊಂಡಿತ್ತು.



Read more

[wpas_products keywords=”deal of the day party wear dress for women stylish indian”]